ಬ್ಯಾಂಕ್ ಆಫ್ ಬರೋಡಾದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – ಪದವೀಧರರು ಅರ್ಜಿ ಸಲ್ಲಿಸಬಹುದು..

ನ್ಯೂಸ್ ಆ್ಯರೋ : ಬ್ಯಾಂಕ್ ಆಫ್ ಬರೋಡಾವು ಇದೀಗ ನೇಮಕ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಿದ್ದು, ವಿವಿಧ ವಿಭಾಗಗಳಲ್ಲಿ ಒಟ್ಟು72 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅಕ್ಟೋಬರ್ 11, 2022 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹಾಗಿದ್ದರೆ ಅರ್ಜಿ ಸಲ್ಲಿಗೆ ಹೇಗೆ ? ವಿದ್ಯಾರ್ಹತೆ ಏನು.? ನಿಯಮಗಳೇನು .? ಸೇರಿದಂತೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಈ ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ
ಡಿಜಿಟಲ್ ಬ್ಯುಸಿನೆಸ್, ಬ್ಯುಸಿನೆಸ್ ಮ್ಯಾನೇಜರ್, ಲೀಡ್ ಅನಾಲಿಸ್ಟ್, ಸ್ಪೆಷಲಿಸ್ಟ್, ಡಾಟಾ ಇಂಜಿನಿಯರ್, ಕ್ರಿಯೇಟಿವ್ ಇಂಜಿನಿಯರ್, ಪ್ರಾಡಕ್ಟ್ ಮ್ಯಾನೇಜರ್ ಸೇರಿದಂತೆ ಒಟ್ಟು 72 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಡಿಜಿಟಲ್ ಬ್ಯುಸಿನೆಸ್ ಗ್ರೂಪ್ ( ಚಾನೆಲ್ಸ್ ಮತ್ತು ಪೇಮೆಂಟ್ಸ್) ವಿಭಾಗದಲ್ಲಿ 26, ಡಿಜಿಟಲ್ ಬ್ಯುಸಿನೆಸ್ ಗ್ರೂಪ್ ( ಪಾರ್ಟ್ನರ್‌ಶಿಪ್ ಮತ್ತು ಇನ್ನೋವೇಷನ್) ವಿಭಾಗದಲ್ಲಿ 20,
ಡಿಜಿಟಲ್ ಆಪರೇಷನ್ಸ್ ಗ್ರೂಪ್ ವಿಭಾಗದಲ್ಲಿ 10, ಡಿಜಿಟಲ್ ಪ್ಲಾಟ್ ಫಾರ್ಮ್ ಮತ್ತು ಪ್ರಾಡಕ್ಟ್ ಗ್ರೂಪ್ ವಿಭಾಗದಲ್ಲಿ 01 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ
ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿ / ಬಿಇ / ಬಿ.ಟೆಕ್ / ಬಿಎಸ್ಸಿ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು, ಎಂಬಿಎ ಮಾಡಿದವರೂ ಸಹ ಅರ್ಜಿ ಹಾಕಬಹುದು.
ವಯೋಮಿತಿ
ಅರ್ಜಿ ಸಲ್ಲಿಸಲು ಕನಿಷ್ಠ 25 ವರ್ಷ ಆಗಿರಬೇಕು. ಗರಿಷ್ಠ 42 ವರ್ಷ ವಯಸ್ಸು ಮೀರಿರಬಾರದು.
ಈಗಾಗಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಅ.11 ಕೊನೆ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ನೇರವಾಗಿ ಕೆಳಗೆ ನೀಡಲಾದ ಲಿಂಕ್ ಗೆ ಭೇಟಿ ನೀಡಿ.