1. Home
  2. Job
  3. Openings
  4. ಭಾರತೀಯ ತೈಲ ನಿಗಮದಲ್ಲಿ 265 ಅಪ್ರೆಂಟಿಸ್ ಹುದ್ದೆಗಳು ‌- ಪಿಯುಸಿ, ಪದವೀಧರರು ಅರ್ಜಿ ಸಲ್ಲಿಸಿ : ವಿವರ ಇಲ್ಲಿದೆ..

ಭಾರತೀಯ ತೈಲ ನಿಗಮದಲ್ಲಿ 265 ಅಪ್ರೆಂಟಿಸ್ ಹುದ್ದೆಗಳು ‌- ಪಿಯುಸಿ, ಪದವೀಧರರು ಅರ್ಜಿ ಸಲ್ಲಿಸಿ : ವಿವರ ಇಲ್ಲಿದೆ..

ಭಾರತೀಯ ತೈಲ ನಿಗಮದಲ್ಲಿ 265 ಅಪ್ರೆಂಟಿಸ್ ಹುದ್ದೆಗಳು ‌- ಪಿಯುಸಿ, ಪದವೀಧರರು ಅರ್ಜಿ ಸಲ್ಲಿಸಿ : ವಿವರ ಇಲ್ಲಿದೆ..
0

ನ್ಯೂಸ್ ಆ್ಯರೋ: ಭಾರತೀಯ ತೈಲ ನಿಗಮದ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ನವೆಂಬರ್ 12ರಂದು ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ.

265 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ಅಧಿಸೂಚನೆಯ ಅಕ್ಟೋಬರ್ 2022 ರ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು IOCL ನ ಅಧಿಕೃತ ವೆಬ್​ಸೈಟ್​ https://iocl.com/ ಗೆ ಭೇಟಿ ನೀಡಬಹುದು.

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.ಆಯ್ಕೆ ಪ್ರಕ್ರಿಯೆಯೂ ಲಿಖಿತ ಹಾಗೂ ಮೆಡಿಕಲ್ ಪರೀಕ್ಷೆ ಮೂಲಕ ನಡೆಯುತ್ತದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಇಲ್ಲಿದೆ ಸಂಪೂರ್ಣ ಮಾಹಿತಿ:

ಹುದ್ದೆಯ ಹೆಸರು : ಅಪ್ರೆಂಟಿಸ್

  • ಹುದ್ದೆಯ ಸಂಖ್ಯೆ : 265
  • ವಿದ್ಯಾರ್ಹತೆ : ಪದವಿ, ಪಿಯುಸಿ
  • ಸ್ಥಳ : ತಮಿಳುನಾಡು, ಪುದುಚೇರಿ, ಕರ್ನಾಟಕ, ಕೇರಳ
  • ವೇತನ : ನಿಯಮಾನುಸಾರ
  • ಅರ್ಜಿ ಸಲ್ಲಿಕೆ ಬಗೆ : ಆನ್​ಲೈನ್​
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 28/10/2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12/11/2022
  • ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 27/11/2022
  • ದಾಖಲಾತಿ ಪರಿಶೀಲನೆ ನಡೆಯುವ ದಿನಾಂಕ: 09/12/2022

ಹುದ್ದೆಯ ಮಾಹಿತಿ:

  • ಟ್ರೇಡ್ ಅಪ್ರೆಂಟಿಸ್ (ಅಕೌಂಟ್ಸ್​ ಎಕ್ಸಿಕ್ಯೂಟಿವ್)/ ಗ್ರಾಜುಯೇಟ್ ಅಪ್ರೆಂಟಿಸ್- 190
  • ಟ್ರೇಡ್ ಅಪ್ರೆಂಟಿಸ್ (ಡಿಇಒ)- 25
  • ಟ್ರೇಡ್ ಅಪ್ರೆಂಟಿಸ್ (ರಿಟೇಲ್ ಸೇಲ್ಸ್​ ಅಸೋಸಿಯೇಟ್)- 50

ವಿದ್ಯಾರ್ಹತೆ:

  • ಟ್ರೇಡ್ ಅಪ್ರೆಂಟಿಸ್ (ಅಕೌಂಟ್ಸ್​ ಎಕ್ಸಿಕ್ಯೂಟಿವ್)/ ಗ್ರಾಜುಯೇಟ್ ಅಪ್ರೆಂಟಿಸ್- ಪದವಿ
  • ಟ್ರೇಡ್ ಅಪ್ರೆಂಟಿಸ್ (ಡಿಇಒ)- ಪಿಯುಸಿ
  • ಟ್ರೇಡ್ ಅಪ್ರೆಂಟಿಸ್ (ರಿಟೇಲ್ ಸೇಲ್ಸ್​ ಅಸೋಸಿಯೇಟ್)- ಪಿಯುಸಿ

ವಯೋಮಿತಿ:

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 31, 2022 ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

  • ಒಬಿಸಿ-ಎನ್​ಸಿಎಲ್​: 3 ವರ್ಷ
  • ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು: 5 ವರ್ಷ
  • PWD(ಜನರಲ್) ಅಭ್ಯರ್ಥಿಗಳು: 10 ವರ್ಷ
  • PWD(ಒಬಿಸಿ-ಎನ್​ಸಿಎಲ್​) ಅಭ್ಯರ್ಥಿಗಳು: 13 ವರ್ಷ
  • PWD (ಎಸ್​​ಸಿ/ಎಸ್​ಟಿ) ಅಭ್ಯರ್ಥಿಗಳು: 15 ವರ್ಷ
News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..