1. Home
  2. Kadaba
  3. ಕಡಬ : ಗುಂಡ್ಯ ಸಮೀಪದ ತೋಡಿನಲ್ಲಿ ಪತ್ತೆಯಾಯ್ತು ದನದ ತಲೆ, ಕಾಲು – ದುಷ್ಕರ್ಮಿಗಳ ಪತ್ತೆಗೆ ಸಂಘ ಪರಿವಾರದ ಸಂಘಟನೆಗಳ ಆಗ್ರಹ

ಕಡಬ : ಗುಂಡ್ಯ ಸಮೀಪದ ತೋಡಿನಲ್ಲಿ ಪತ್ತೆಯಾಯ್ತು ದನದ ತಲೆ, ಕಾಲು – ದುಷ್ಕರ್ಮಿಗಳ ಪತ್ತೆಗೆ ಸಂಘ ಪರಿವಾರದ ಸಂಘಟನೆಗಳ ಆಗ್ರಹ

ಕಡಬ : ಗುಂಡ್ಯ ಸಮೀಪದ ತೋಡಿನಲ್ಲಿ ಪತ್ತೆಯಾಯ್ತು ದನದ ತಲೆ, ಕಾಲು – ದುಷ್ಕರ್ಮಿಗಳ ಪತ್ತೆಗೆ ಸಂಘ ಪರಿವಾರದ ಸಂಘಟನೆಗಳ ಆಗ್ರಹ
0

ನ್ಯೂಸ್ ಆ್ಯರೋ‌ : ಕಡಬ ತಾಲೂಕಿನ ಗುಂಡ್ಯ ಸುಬ್ರಹ್ಮಣ್ಯ ರಸ್ತೆಯ ದೇರಣೆ ಸಮೀಪ ಕಾಡಿನ ತೋಡಿನಲ್ಲಿ ಕಳೆದ ರಾತ್ರಿ ದನದ ತಲೆ, ಕಾಲು ಪತ್ತೆಯಾಗಿದೆ.

ಶಿರಾಡಿ ಮತ್ತು ಸಿರಿಬಾಗಿಲು ಬಜರಂಗದಳ ಕಾರ್ಯಕರ್ತರು ತೋಡಿನಲ್ಲಿ ಗೋಮಾಂಸದ ತುಂಡುಗಳನ್ನು ಪತ್ತೆ ಹಚ್ಚಿದ್ದಾರೆ.

ಅಲ್ಲದೇ ಈ ಬಗ್ಗೆ ಪೋಲಿಸರಿಗೂ ಮಾಹಿತಿ ನೀಡಲಾಗಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂತಹ ಹೇಯ ಕೃತ್ಯವನ್ನು ಮಾಡಿದವರನ್ನು ಪತ್ತೆ ಹಚ್ಚಬೇಕು, ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಕಡಬ ಪ್ರಖಂಡ ವಿ.ಹಿಂ.ಪ. ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಹಾಗೂ ಬಜರಂಗದಳ ಕಡಬ ಪ್ರಖಂಡ ಸಂಯೋಜಕ ಮನೋಜ್ ಖಂಡಿಗ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.