1. Home
  2. Kadaba
  3. ನೆಲ್ಯಾಡಿ‌ : ಹೊಸಮಜಲು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಬಿದ್ದ ಲಾರಿ‌ – ಸಂಚಾರ ಅಸ್ತವ್ಯಸ್ತ, ಪೋಲೀಸರ ಭೇಟಿ

ನೆಲ್ಯಾಡಿ‌ : ಹೊಸಮಜಲು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಬಿದ್ದ ಲಾರಿ‌ – ಸಂಚಾರ ಅಸ್ತವ್ಯಸ್ತ, ಪೋಲೀಸರ ಭೇಟಿ

ನೆಲ್ಯಾಡಿ‌ : ಹೊಸಮಜಲು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಬಿದ್ದ ಲಾರಿ‌ – ಸಂಚಾರ ಅಸ್ತವ್ಯಸ್ತ, ಪೋಲೀಸರ ಭೇಟಿ
0

ನ್ಯೂಸ್ ಆ್ಯರೋ‌ : ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸ ಮಜಲು ಎಂಬಲ್ಲಿ ಲಾರಿಯೊಂದು ಮಗುಚಿ ಬಿದ್ದು ಸಂಚಾರಕ್ಕೆ ತಡೆ ಉಂಟಾದ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಬೆಂಗಳೂರಿನಿಂದ ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿಯು ಹೊಸ ಮಜಲು ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ. ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರಿಗೆ ಅಡಚಣೆಯಾಗಿದೆ.

ಪರ್ಯಾಯ ಮಾರ್ಗ ಬಳಕೆ :

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಬಿದ್ದ ಪರಿಣಾಮ ಮಂಗಳೂರು ಬೆಂಗಳೂರು ಸಂಚರಿಸುವ ಪ್ರಯಾಣಿಕರು ನೆಲ್ಯಾಡಿ ಪುತ್ಯೆ ಕೊಕ್ಕಡ ಮಾರ್ಗವಾಗಿ ಪೆರಿಯ ಶಾಂತಿಯ ಮೂಲಕ ಪ್ರಯಾಣಿಸುತ್ತಿದ್ದಾರೆ. ಅಪಘಾತದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣಾ ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣ ಹಾಗೂ ಕುಶಾಲಪ್ಪ, ನೆಲ್ಯಾಡಿ ಹಾಗೂ ಗುಂಡ್ಯದ ಪರಶುರಾಮ ಕ್ರೇನ್ ತಂಡದ ಸದಸ್ಯರು ಆಗಮಿಸಿ ಲಾರಿಯನ್ನು ಮೇಲೆತ್ತಿ ಸಂಚಾರ ಸುಗಮಗೊಳಿಸುವ ಯತ್ನ ನಡೆಸಿದ್ದಾರೆ. ಪ್ರಯಾಣಿಕರು ಗೋಳಿತೊಟ್ಟು ಕೊಕ್ಕಡ ಮಾರ್ಗ ಅಥವಾ ಕೊಕ್ಕಡ ಪುತ್ಯೆ ಮಾರ್ಗ ಬಳಸಿ ಪ್ರಯಾಣಿಸುವುದು ಸೂಕ್ತವಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..