ನ್ಯೂಸ್ ಆ್ಯರೋ : ಕುಕ್ಕೆ ಸುಬ್ರಮಣ್ಯದ ಚಂಪಾ ಷಷ್ಠಿ ಜಾತ್ರೋತ್ಸವ ಸಂದರ್ಭದಲ್ಲಿ ಅನ್ಯಮತೀಯ ವ್ಯಾಪಾರ ವ್ಯವಹಾರಗಳನ್ನು ನಿಷೇಧಿಸುವಂತೆ ಕೋರಿ ಹಿಂದೂ ಜಾಗರಣ ವೇದಿಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿಂ.ಜಾ.ವೇ. ಸುಳ್ಯ ತಾಲೂಕು ಸಹಸಂಚಾಲಕ್ ಜೀವನ್, ಕುಕ್ಕೆ ಸುಬ್ರಹ್ಮಣ್ಯ ಘಟಕದ ಉಪಾಧ್ಯಕ್ಷ ಸುಬ್ಬಪ್ಪ ಕೆ, ಕಾರ್ಯದರ್ಶಿ ವಿನೋದ್ ಕುಮಾರ್ ಕುಲ್ಕುಂದ, ಯಶೋಧರ, ಜಯಪ್ರಕಾಶ್ ಕೆ, ಹಿಂದೂ ಯುವವಾಹಿನಿ ಪ್ರಮುಖ್ ಸುರೇಶ್ ಕೆ, ಧನುಷ್, ಹರಿಪ್ರಸಾದ್ ಕೊಲ್ಲಮೊಗ್ರು ಇತರರು ಉಪಸ್ಥಿತರಿದ್ದರು.