1. Home
  2. Karnataka
  3. ವಿವಾದಿತ ಇನಾಂ ದತ್ತಾತ್ರೇಯ ಪೀಠದ ಮುಂಭಾಗವೇ ಹೋಮ ಪೂಜೆ – ದತ್ತ ಜಯಂತಿಯ ವೇಳೆಯೇ ನಡೆಸುವುದಾಗಿ ಭಜರಂಗದಳ ಘೋಷಣೆ

ವಿವಾದಿತ ಇನಾಂ ದತ್ತಾತ್ರೇಯ ಪೀಠದ ಮುಂಭಾಗವೇ ಹೋಮ ಪೂಜೆ – ದತ್ತ ಜಯಂತಿಯ ವೇಳೆಯೇ ನಡೆಸುವುದಾಗಿ ಭಜರಂಗದಳ ಘೋಷಣೆ

ವಿವಾದಿತ ಇನಾಂ ದತ್ತಾತ್ರೇಯ ಪೀಠದ ಮುಂಭಾಗವೇ ಹೋಮ ಪೂಜೆ – ದತ್ತ ಜಯಂತಿಯ ವೇಳೆಯೇ ನಡೆಸುವುದಾಗಿ ಭಜರಂಗದಳ ಘೋಷಣೆ
0

ನ್ಯೂಸ್ ಆ್ಯರೋ : ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲಿ ನವೆಂಬರ್ 28 ರಿಂದ ಡಿಸೆಂಬರ್ 12 ದಿನಗಳವರೆಗೆ 12 ದಿನಗಳ ಕಾಲ ದತ್ತ ಜಯಂತಿ ನಡೆಯಲಿದೆ. ಈ ಸಂದರ್ಭದಲ್ಲಿ ವಿವಾದಿತ ದತ್ತಾತ್ರೇಯ ಗುಹೆಯ ಮುಂಭಾಗ ಹೋಮ ಪೂಜೆ ಮಾಡುವುದಾಗಿ ಭಜರಂಗದಳ ಕರೆ ನೀಡಿದೆ.

ವಿಶ್ವ ಹಿಂದೂ ಷರಿಷತ್, ಭಜರಂಗದಳದ ನೇತೃತ್ವದಲ್ಲಿ ದತ್ತಜಯಂತಿ ನಡೆಯಲಿದೆ. ದತ್ತ ಪೀಠದ ತಾತ್ಕಾಲಿಕ ಶೆಡ್‌ನಲ್ಲಿ‌ ಮುಸ್ಲಿಂರು ಮಾಂಸಹಾರ ಸೇವನೆ ಮಾಡಿರುವ ಹಿನ್ನೆಲೆಯಲ್ಲಿ ವಿವಾದಿತ ಪ್ರದೇಶದಲ್ಲೇ ಹೋಮ ಮಾಡುವುದಾಗಿ ಭಜರಂಗದಳ ಘೋಷಿಸಿದೆ.

ನವೆಂಬರ್ 28 ರಿಂದ ಡಿಸೆಂಬರ್ 12 ದಿನಗಳವರೆಗೂ ದತ್ತಜಯಂತಿ ನಡೆಯಲಿದೆ. ದತ್ತಜಯಂತಿಯಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ದತ್ತಮಾಲಾಧಾರಿಗಳು ಭಾಗಿಯಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ದತ್ತಜಯಂತಿ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದಾರೆ

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..