ನ್ಯೂಸ್ ಆ್ಯರೋ : ಗಣೇಶ ವಿಸರ್ಜನೆಗಾಗಿ ನಿರ್ಮಿಸಿದ್ದ ಕೆರೆಯೊಂದಕ್ಕೆ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮೊದಲು 4 ಪುಟಗಳ ಸುದೀರ್ಘ ಡೆತ್ನೋಟ್ ಕೂಡ ಬರೆದಿಟ್ಟಿದ್ದು ಈ ಸುದ್ದಿ ವೈರಲ್ ಆಗಿದೆ.
ವಿದ್ಯಾರ್ಥಿನಿ ಬರೆದಿದ್ದ ಆ ಡೆತ್ನೋಟ್ ನ ಮಾಹಿತಿ ಬಹಿರಂಗಗೊಂಡಿದ್ದು, ವಿದ್ಯಾರ್ಥಿನಿ ಅದರಲ್ಲಿ ತನ್ನ ಕೊನೆಯ ಆಸೆಯನ್ನೂ ಹೇಳಿಕೊಂಡಿದ್ದಾಳೆ. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಈ ಘಟನೆ ನಡೆದಿದೆ.
ಹತ್ತನೇ ತರಗತಿ ವಿದ್ಯಾರ್ಥಿನಿ ಸಾರಿಕಾ (16) ಆತ್ಮಹತ್ಯೆ ಮಾಡಿಕೊಂಡವಳು. ನಾಲ್ಕು ಪುಟಗಳ ಡೆತ್ನೋಟ್ ಸಿಕ್ಕಿದ್ದರೂ ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ ನಿಖರವಾದ ಮಾಹಿತಿ ಅದರಲ್ಲಿ ಉಲ್ಲೇಖವಾಗಿಲ್ಲ. ಆದರೆ ಆಕೆ ಅದರಲ್ಲಿ ವ್ಯಕ್ತಪಡಿಸಿರುವ ಕೊನೆಯ ಆಸೆಯಂತೂ ವಿಚಿತ್ರವಾಗಿದೆ.
ತನ್ನ ಗೆಳೆಯ-ಗೆಳತಿಯರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ಈ ಯುವತಿ ಹೇಳಿಕೊಂಡಿದ್ದಾಳೆ. ಅಲ್ಲದೆ ತನ್ನದೊಂದು ಕೊನೆಯ ಆಸೆಯನ್ನೂ ತಿಳಿಸಿದ್ದಾಳೆ. ‘ನನ್ನದು ಒಂದೇ ಆಸೆ, ನನ್ನ ಶವ ನೋಡೋಕೆ ಎಲ್ಲರೂ ಬನ್ನಿ, ಇಲ್ಲಂದ್ರೆ ನಾನು ದೆವ್ವ ಆಗಿ ಬರ್ತೀನಿ ನೋಡಿ’ ಎಂಬುದಾಗಿ ತನ್ನ ಡೆತ್ನೋಟ್ನ ಕೊನೆಯಲ್ಲಿ ಬರೆದುಕೊಂಡಿದ್ದಳು. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..