ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಾಯಿಗಳಿಗೆ ಹಾಫ್ ಟಿಕೆಟ್ – ಹೊಸ ರೂಲ್ಸ್ ಪ್ರಕಟಿಸಿದ ರಾಜ್ಯ ಸಾರಿಗೆ ಇಲಾಖೆ

ನ್ಯೂಸ್ ಆ್ಯರೋ : ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಲಗೇಜು ಸಾಗಾಣೆಯ ನಿಯಮಗಳು ಮಾರ್ಪಾಡು ತೀರ್ಮಾನವನ್ನು ಕೈಗೊಂಡಿದ್ದು, ಅದರಂತೆ ನಾಯಿ ಮತ್ತು ನಾಯಿ ಮರಿಗೆ ಅರ್ಧ ಟಿಕೆಟ್ ದರವನ್ನು ವಿಧಿಸುವಂತೆ ಸೂಚಿಸಲಾಗಿದೆ. ನಾಯಿಯನ್ನು ಕೊಂಡೊಯ್ಯಲು ಒಬ್ಬ ವಯಸ್ಕ ಪ್ರಯಾಣಿಕರನ್ನು ಪರಿಗಣಿಸಿ ವಿಧಿಸಲಾಗುತ್ತಿದ್ದ ದರದಲ್ಲಿ ಇದೀಗ ಬದಲಾವಣೆ ಮಾಡಲಾಗಿದೆ.
ಸಾಮಾನ್ಯ ವೇಗದೂತ, ನಗರ ಹೊರವಲಯ ಬಸ್‌ಗಳಲ್ಲಿ ನಾಯಿ ಸಾಗಾಣಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಬಸ್‌ನಲ್ಲಿ ಅತಿಯಾದ ಲಗೇಜ್ ಸಾಗಾಣಿಕೆಗೆ ಕಡಿವಾಣ ಹಾಕಿದ್ದು, ಪ್ರತಿ ಪ್ರಯಾಣಿಕರ 30ಕೆಜಿ ಲಗೇಜ್ ಕೊಂಡೊಯ್ಯಲು ಅವಕಾಶವಿದೆ. ಒಂದು ವೇಳೆ 30 ಕೆಜಿಗಿಂತ ಹೆಚ್ಚು ಸಾಗಾಣಿಕೆಗೆ ಹೆಚ್ಚುವರಿ ದರ ವಿಧಿಸಲು ಕೆಎಸ್‌ಆರ್‌ಟಿಸಿ ಹೊಸ ಆದೇಶವನ್ನು ನೀಡಿದೆ.
ಈ ಹಿಂದೆ ಪ್ರಯಾಣಿಕರು ನಾಯಿಯ ಮೇಲೆ ವಿಧಿಸುವ ಟಿಕೆಟ್ ದರವನ್ನು ಕಡಿಮೆ ಮಾಡುವಂತೆ ಒತ್ತಾಯವನ್ನು ಮಾಡಿದ್ದು, ಇದೀಗ ಸಾರಿಗೆ ಇಲಾಖೆ ಒತ್ತಾಯಕ್ಕೆ ಮಣಿದು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಕೆಎಸ್‌ಆರ್‌ಟಿಸಿ ನೌಕರರಿಗಾಗಿ ಪ್ರೀಮಿಯಂ ರಹಿತ ವಿಮಾ ಯೋಜನೆ:
ಸಾರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೇತನ ಖಾತೆಯನ್ನು ಹೊಂದಿರುವ ಕರ್ನಾಟಕ ರಾಜ್ಯ ರಸ್ತೆ ನಿಗಮದ ನೌಕರರಿಗೆ ಪ್ರೀಮಿಯಂ ರಹಿತ ವಿಮಾವನ್ನು ವೈಯಕ್ತಿಕ ಅಪಘಾತ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಈ ವೈಯಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ . 50 ಲಕ್ಷಗಳ ಪರಿಹಾರ ಧನ ದೊರೆಯಲಿದೆ. ಅಪಘಾತದಲ್ಲಿ ಸಿಬ್ಬಂದಿ ಶಾಶ್ವತವಾಗಿ ಪೂರ್ಣ ಅಂಗವೈಕಲ್ಯತೆಗೆ ತುತ್ತಾದಲ್ಲಿ . 20 ಲಕ್ಷ ಹಾಗೂ ಶಾಶ್ವತ/ ಭಾಗಶಃ ಅಂಗವೈಕಲ್ಯತೆ ಉಂಟಾದಲ್ಲಿ . 10 ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ.