
ನ್ಯೂಸ್ ಆ್ಯರೋ : ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಸಾವಿನ ಸುತ್ತಾ ಇದೀಗ ಹಲವು ಅನುಮಾನಗಳು ಹುಟ್ಟಿಕೊಂಡಿದೆ. ಅವರ ಸಾವು ಅಪಘಾತದಿಂದವೋ, ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಹಲವು ಪ್ರಶ್ನೆಗಳು ಉದ್ಭವಿಸಿದೆ. ಆದರೆ, ಮೃತರ ಕುಟುಂಬದವರು ಇದೊಂದು ವ್ಯವಸ್ಥಿತವಾದ ಕೊಲೆ ಎಂದು ನೇರವಾಗಿ ಆರೋಪಿಸುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಚಂದ್ರಶೇಖರ್ ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಮೃತರ ತಂದೆ ಅನುಮಾನ ವ್ಯಕ್ತಪಡಿಸಿದ್ದು ಇದೀಗ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.
ಚಂದ್ರಶೇಖರ್ ತಂದೆಯ ಹೇಳಿಕೆ ಪ್ರಕಾರ, ‘ಚಂದ್ರನ ಮೃತದೇಹದಲ್ಲಿ ಒಳ ಉಡುಪು ಇರಲಿಲ್ಲ. ಅವನು ಒಳಬಟ್ಟೆ ಧರಿಸದೆ ಹೊರಗಡೆ ಹೋಗುವುದಿಲ್ಲ. ಅದಲ್ಲದೆ ಆತನ ತಲೆಗೆ ಪೆಟ್ಟಾಗಿದ್ದು, ಕಿವಿಯನ್ನು ಕಚ್ಚಲಾಗಿದೆ. ಗುಪ್ತಾಂಗ ಊದಿಕೊಂಡಿದ್ದು, ಆತನಿಗೆ ಇಂಜೆಕ್ಷನ್ ಕೊಟ್ಟು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ
ಇವರ ಹೇಳಿಕೆ ಅನುಸಾರ ಇದೀಗ ಹಲವು ಅನುಮಾನಗಳು ಹುಟ್ಟುಹಾಕಿ ಕೊಂಡಿದ್ದು, ಸಲಿಂಗಕಾಮವೇ ಕಾರಣ ಇರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ, ‘ಪೊಲೀಸರು ಕಿರಣ್ ಮತ್ತು ಆತನ ಸ್ನೇಹಿತರನ್ನು ಸರಿಯಾಗಿ ವಿಚಾರಣೆ ನಡೆಸಿಲ್ಲ. ಪೊಲೀಸರು ಇದು ಕೊಲೆಯಲ್ಲ, ಅಪಘಾತ ಎಂದು ಹೇಳುತ್ತಿದ್ದಾರೆ. ಹಾಗಾದರೆ ಚಂದ್ರು ಕೈಗಳನ್ನು ಹಗ್ಗದಿಂದ ಕಟ್ಟಿದವರು ಯಾರು? ಶಾಸಕನ ಪುತ್ರನಿಗೆ ನ್ಯಾಯ ಸಿಗದಿದ್ದರೆ ಇನ್ನೂ ಜನ ಸಾಮಾನ್ಯರ ಪರಿಸ್ಥಿತಿ ಏನು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೆಳೆಯರ ಭೇಟಿಗೆ ಯತ್ನಿಸಿದ್ದ ಚಂದ್ರಶೇಖರ್?
ಅಕ್ಟೋಬರ್ 30ರಂದು ತನ್ನ ಆಪ್ತ ಗೆಳೆಯರನ್ನು ಭೇಟಿಯಾಗಲು ಚಂದ್ರಶೇಖರ್ ಯತ್ನಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಆತನ ಸ್ನೇಹಿತ ಚರಣ್ ಮಾತನಾಡಿ, ಅಂದು ರಾತ್ರಿ 11.30ವರೆಗೂ ನನ್ನ ಜತೆ ಚೆನ್ನಾಗಿ ಮಾತನಾಡಿದ್ದಾನೆ. ತುಂಬಾ ಹೊತ್ತು ಸಹಜವಾಗಿ ಮಾತುಕತೆ ನಡೆಸಿದ್ದೇವೆ ಎಂದಿದ್ದಾರೆ.
ಮತ್ತೊಬ್ಬ ಸ್ನೇಹಿತ ಉತ್ತಮ್ ಎಂಬಾತ ಪ್ರತಿಕ್ರಿಯಸಿ. ಅಕ್ಟೋಬರ್ 30ರಂದು ನಾನು ಚಂದ್ರಶೇಖರ್ ಜತೆ ಗೌರಿಗದ್ದೆಗೆ ಹೋಗಬೇಕಿತ್ತು. ಅನಾರೋಗ್ಯದ ಹಿನ್ನೆಲೆ ನಾನು ಹೋಗಿಲ್ಲ ಎಂದು ಹೇಳಿದ್ದಾರೆ.
ಒಂದೇ ನಂಬರ್‌ನಿಂದ ಪದೇ ಪದೇ ಫೋನ್:
ಚಂದ್ರಶೇಖರ್ ಸಾವಿಗೀಡಾದ ದಿನ ರಾತ್ರಿ 11.30ರ ಸುಮಾರಿಗೆ ಚಂದ್ರಶೇಖರ್ ಮೊಬೈಲ್‌ಗೆ ಒಂದು ನಂಬರ್‌ನಿಂದ ಪದೇ ಪದೇ ಕರೆ ಬಂದಿದ್ದು, ಈ ಕರೆ ಯಾರದ್ದು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿನಯ ಗುರೂಜಿಯಿಂದ ಮಾಹಿತಿ ಸಂಗ್ರಹ
ಚಂದ್ರು ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕೊಪ್ಪ ತಾಲೂಕಿನ ಗೌರಿಗದ್ದೆಯ ಆಶ್ರಮದ ವಿನಯ ಗುರೂಜಿ ಅವರನ್ನು ಭೇಟಿಯಾದ ಚನ್ನಗಿರಿ ಪೊಲೀಸರು ಈ ಸಂಬಂಧ ಮಾಹಿತಿ ಕಲೆ ಹಾಕಿದ್ದಾರೆ. ಚಂದ್ರು ಕೊನೆಯದಾಗಿ ಆಶ್ರಮಕ್ಕೆ ಭೇಟಿ ನೀಡಿದ್ದು, ಕುರಿತು ಪೊಲೀಸರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಭಾನುವಾರ ಭೇಟಿ ನೀಡಿದ ಪೊಲೀಸರ ತಂಡ ಚಂದ್ರು ಯಾವ ವಿಚಾರವನ್ನು ನಿಮ್ಮ ಜೊತೆ ಮಾತನಾಡಿದರು? ಭೇಟಿ ವೇಳೆ ಏನಾದ್ರೂ ಸಮಸ್ಯೆಯನ್ನ ನಿಮ್ಮೊಂದಿಗೆ ಹೇಳಿಕೊಂಡಿದ್ರಾ? ಚಂದ್ರು, ಕಿರಣ್ ಹಾಗೂ ನಿಮ್ಮ ಮಧ್ಯೆ ಏನಾದರೂ ಚರ್ಚೆ ನಡೆಯಿತಾ ಎಂದು ಪ್ರಶ್ನೆಗಳನ್ನು ವಿನಯ ಗುರೂಜಿ ಅವರಲ್ಲಿ ಕೇಳಿದ್ದಾರೆ.
ಚಂದ್ರು ಆಶ್ರಮದ ಭಕ್ತ, ಪ್ರತಿ ಬಾರಿಯಂತೆ ಈ ಬಾರಿಯೂ ಬಂದು ಹೋಗಿದ್ದಾನೆ. ತಡವಾಗಿ ಬಂದಿದ್ದರಿಂದ ಆತನ ಬಳಿ ಹೆಚ್ಚೇನೂ ನಾನು ಮಾತನಾಡಿಲ್ಲ. ತಡವಾಗಿ ಬಂದಿದ್ದಕ್ಕೆ ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ ಎಂದು ಕೇಳಿದ್ದೇನೆ. ಬೇಗ ಹೋಗಿ, ಜಾಗೃತೆಯಿಂದ ಹೋಗಿ ಎಂದು ಇಬ್ಬರನ್ನ ಕಳುಹಿಸಿಕೊಟ್ಟಿದ್ದೇನೆ. ಆ ಬಳಿಕ ನಡೆದ ಘಟನೆ ಬಗ್ಗೆ ನನಗೆ ನೋವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬಳಿಕ ಪೊಲೀಸರು ಆಶ್ರಮದ ಸಿಬ್ಬಂದಿ ಜೊತೆಯೂ ಮಾಹಿತಿಯನ್ನೂ ಪೊಲೀಸರು ಕಲೆ ಹಾಕಿದ್ದಾರೆ ಎನ್ನಲಾಗಿದೆ.