ಹಬ್ಬದ ಹೊಸ್ತಿಲಲ್ಲಿ ರಾಜ್ಯದ ಜನರಿಗೆ ಕರೆಂಟ್ ಶಾಕ್ ನೀಡಿದ ಸರ್ಕಾರ – ಮತ್ತೆ ವಿದ್ಯುತ್ ದರದಲ್ಲಿ ದಿಢೀರ್ ಏರಿಕೆ, ಇಂದಿನಿಂದಲೇ ಜಾರಿ

ನ್ಯೂಸ್ ಆ್ಯರೋ : ಬೆಲೆಯೇರಿಕೆ ಬಿಸಿ ಹೆಚ್ಚಾಗಿರುವಂತೆ ರಾಜ್ಯದ ಜನತೆಗೆ ಸರ್ಕಾರ ವಿದ್ಯುತ್ ದರ ಏರಿಕೆಯ ಶಾಕ್ ಕೊಟ್ಟಿದೆ. ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳ ಕೋರಿಕೆಯಂತೆ ಇಂದಿನಿಂದಲೇ ಜಾರಿಯಾಗುವಂತೆ ಪ್ರತಿ ಯೂನಿಟ್‍ಗೆ 23ರಿಂದ 43 ಪೈಸೆ ಬೆಲೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ ನಿಯಂ ತ್ರಣ ಆಯೋಗ ಆದೇಶ ಹೊರಡಿಸಿದೆ.
ನೂತನ ದರವು ಇಂದಿನಿಂದಲೇ ಜಾರಿಯಾಗಲಿದ್ದು, ಪ್ರತಿ ಯೂನಿಟ್‍ಗೆ ಬೆಸ್ಕಾಂ ವ್ಯಾಪ್ತಿಲ್ಲಿ 24 ಪೈಸೆ, ಸೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ 32 ಪೈಸೆ ಹಾಗೂ ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ 35 ಪೈಸೆ ವಿದ್ಯುತ್ ದರ ಏರಿಕೆಯಾಗಲಿದೆ. ಬೆಸ್ಕಾಂ ವ್ಯಾಪ್ತಿ ಒಂದು ಮನೆಗೆ 500 ರೂ. ಇದ್ದರೆ 40 ರೂ. ಹೆಚ್ಚಳವಾಗಲಿದೆ. 1 ಸಾವಿರ ರೂ. ವಿದ್ಯುತ್ ಬಿಲ್ ಬರುತ್ತಿದ್ದರೆ ಇಂದಿನಿಂದ 1,080 ರೂ. ಆಗಲಿದೆ.
2022 ಏಪ್ರಿಲ್‍ನಲ್ಲಿ ಪ್ರತಿ ಯೂನಿಟ್‍ಗೆ 33 ಪೈಸೆ ಹೆಚ್ಚಳ ಮಾಡಲಾಗಿತ್ತು. ವಾರ್ಷಿಕವಾಗಿ ವಿದ್ಯುತ್ ದರ ಹೆಚ್ಚಳ ಕಾರಣ ನೀಡಲಾಗಿತ್ತು. ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಮತ್ತು ಚೆಸ್ಕಾಂ ಕಂಪನಿಗಳು ನಷ್ಟದಲ್ಲಿದ್ದು ಇದನ್ನು ಸರಿದೂಗಿಸಲು ದರ ಹೆಚ್ಚಳ ಮಾಡಬೇಕೆಂದು ಕೆಇಆರ್‍ಸಿಗೆ ಮನವಿ ಮಾಡಿಕೊಳ್ಳಲಾಗಿತ್ತು.
ಇದನ್ನು ವಿದ್ಯುತ್ ಕಂಪನಿಗಳ ಕೋರಿಕೆಯಂತೆ ಕೆಇಆರ್‍ಸಿ ಆಯಾ ವ್ಯಾಪ್ತಿಯ ಪರಿಸ್ಥಿತಿಗನುಗುಣವಾಗಿ 23ರಿಂದ 43 ಪೈಸೆಯನ್ನು ಪ್ರತಿ ಯೂನಿಟ್‍ಗೆ ಹೆಚ್ಚಳ ಮಾಡಿದೆ. ಕೆಇಆರ್‍ಸಿ ನಿಯಮಗಳ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ದರ ಹೆಚ್ಚಳದ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಕಲ್ಲಿದ್ದಲು ದರ ಏರಿಕೆಯಾಗುತ್ತಿರುವುದು ಹಾಗೂ ವಿದ್ಯುತ್ ಕಂಪನಿಗಳ ನಿರ್ವಹಣೆ ವೆಚ್ಚ ಹೆಚ್ಚಾಗಿರುವ ಕಾರಣ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಕೆಇಆರ್‍ಸಿ ಹೇಳಿದೆ.
2013ರ ನಿಯಮದ ಪ್ರಕಾರ ನಿರ್ದಿಷ್ಟಪಡಿಸಿದ ಸ್ಥಾವರಗಳಿಂದ ವಿದ್ಯುತ್ ಖರೀದಿ ಮಾಡುವಾಗ ಕಲ್ಲಿದ್ದಲು ವೆಚ್ಚ ಹೆಚ್ಚಳ ಅಥವಾ ಇಳಿಕೆ ಕಾಣುವಾಗ ಮೂರು ತಿಂಗಳಿಗೊಮ್ಮೆ ಎಸ್ಕಾಂಗಳ ಬೇಡಿಕೆಯಂತೆ ದರ ಏರಿಕೆ-ಇಳಿಕೆ ಮಾಡಬಹುದು.
ಆದರೆ ಬಾರಿ ಆಗಿರುವ ದರ ಏರಿಕೆ ತೀರಾ ಹೆಚ್ಚು ಅನ್ನುವ ಅಭಿಪ್ರಾಯ ಕೇಳಿಬಂದಿದೆ. ಅಲ್ಲದೇ ಎಸ್ಕಾಂಗಳು ಖರೀದಿ ಹೆಚ್ಚಳ ನೆಪ, ನಷ್ಟದ ನೆಪವನ್ನು ಒಡ್ಡುತ್ತಿದೆ.
ಅಸಲಿಗೆ ಬೇರೆ ಮಾರ್ಗದಿಂದ ನಷ್ಟವನ್ನು ಸರಿತೂಗಿಸಬಹುದು. ಆದರೆ ಅದರ ಹತ್ತಿರ ಗಮನ ಹರಿಸದೇ ಕೇವಲ ದರ ಏರಿಕೆ ಮಾತ್ರ ಮಾಡಲಾಗುತ್ತಿದೆ ಎಂಬ ಟೀಕೆ ಬಂದಿದೆ. 2022 ಜೂನ್‍ನಲ್ಲಿ ಪ್ರತಿ ಯೂನಿಟ್‍ಗೆ 31 ಪೈಸೆ ಏರಿಕೆ ಮಾಡಲಾಗಿತ್ತು. ಇಂಧನ ಹೊಂದಾಣಿಕೆ ಶುಲ್ಕ ಎಂದು ಕಾರಣವನ್ನು ನೀಡಿತ್ತು.