ನ್ಯೂಸ್ ಆ್ಯರೋ : ಹಲವು ಕಾರಣಕ್ಕಾಗಿ ಸುದ್ದಿಯಾಗಿದ್ದ ರಾಯಚೂರು ಜಿಲ್ಲೆಯ ಸಿರವಾರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಗೀತಾಂಜಲಿ ಶಿಂಧೆ ಅವರನ್ನು ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಇತ್ತೀಚೆಗೆ ಒಬ್ಬ ಯುವಕ ಡೆತ್ ನೋಟ್ನಲ್ಲಿ ಗೀತಾಂಜಲಿ ಶಿಂಧೆ ಅವರ ಹೆಸರು ಬರೆದಿಟ್ಟು ನಾಪತ್ತೆಯಾಗಿದ್ದ. ಜಮೀನು ವಿಚಾರಕ್ಕೆ ಅನಾವಶ್ಯಕವಾಗಿ ಮೂಗು ತೂರಿಸಿ ಮೂರು ತಿಂಗಳಿಂದ ಸತತ ಕಿರುಕುಳ ನೀಡಿದ್ದರು ಎಂಬುದಾಗಿ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದ. ಈ ಕುರಿತು ಸಿರವಾರ ಠಾಣೆಯಲ್ಲಿ ಪಿಎಸ್‌ಐ ವಿರುದ್ಧ ಪ್ರಕರಣ ದಾಖಲಾಗಿತ್ತು. ಮೂರು ದಿನಗಳ ಬಳಿಕ ಯುವಕನನ್ನ ಪತ್ತೆಹಚ್ಚಿ ಮರಳಿ ಕರೆದುಕೊಂಡು ಬರಲಾಗಿತ್ತು.
ಅಷ್ಟೇ ಅಲ್ಲದೇ ಬೈಕ್ ಕಳ್ಳತನ, ಕುರಿಗಳ್ಳತನ ಪ್ರಕರಣಗಳಲ್ಲಿ ಜಪ್ತಿಯಾದ ಬೈಕ್ ಹಾಗೂ ಕುರಿಗಳನ್ನ ಕಳೆದುಕೊಂಡವರಿಗೆ ಸರಿಯಾಗಿ ಮರಳಿಸಿಲ್ಲ ಎನ್ನುವ ಆರೋಪಗಳು ಇದ್ದವು. ಕೆಲವರು ಖುದ್ದಾಗಿ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದರು. ಹಾಗಾಗಿ ಕರ್ತವ್ಯಲೋಪ ಆರೋಪದ ಮೇಲೆ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಆದೇಶ ಹೊರಡಿಸಿದ್ದಾರೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..