ಕದಿಯೋದೇ ಇವನ ಕಾಯಕ, ಕದ್ದ ಹಣದಲ್ಲಿ ದೇವರಿಗೂ ಕೊಡ್ತಿದ್ದ ಪಾಲು – ಐನಾತಿ ಕಳ್ಳನ ವಿಚಿತ್ರ ವರ್ತನೆಗೆ ಪೋಲಿಸರೇ ಶಾಕ್..!!

ನ್ಯೂಸ್ ಆ್ಯರೋ : ಐಷಾರಾಮಿ ಜೀವನ, ಮೋಜು- ಮಸ್ತಿಗಾಗಿ ಸುಲಭವಾಗಿ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಕಳ್ಳತನ ಮಾಡುತ್ತಾರೆ. ಆದರೆ ಇಲ್ಲೊಬ್ಬ ಖದೀಮ ತಾನು ಕಳ್ಳತನ ಮಾಡಿದ ಹಣದಲ್ಲಿ ದೇವರಿಗೆ ಶೇರ್ ನೀಡಿದ್ದು, ತಾನು ಖರ್ಚು ಮಾಡಿ ಉಳಿದ ಹಣವನ್ನು ದೇವರಿಗೆ ಸಮರ್ಪಿಸಿದ್ದಾರೆ.
ಹೈ ಫೈ ಜೀವನಕ್ಕಾಗಿ ಈಗಿನ ಕಾಲೇಜು ಯುವಕರು ಯುವತಿಯರು, ಬೈಕ್, ಕಾರು, ಮೊಬೈಲ್ ಕಳ್ಳತನಕ್ಕೆ ಇಳಿದಿರುವ ಪ್ರಕರಣಗಳು ಒಂದಲ್ಲ ಒಂದು ಕಡೆ ದಿನನಿತ್ಯ ವರದಿಯಾಗುತ್ತಲೇ ಇರುತ್ತವೆ.
ಆದರೆ ಇಲ್ಲಿ ವಿಚಿತ್ರ ಕಳ್ಳನೊಬ್ಬ ಇಂತಹದ್ದೇ ಪ್ರಕರಣದಲ್ಲಿ ಬೆಂಗಳೂರು ಪೊಲೀಸರ ಕೈವಶವಾಗಿದ್ದು, ಹೈ ಫೈ ಜೀವನ ನಡೆಸಲು ಸಿಕ್ಕ ಸಿಕ್ಕವರ ಮನೆಗೆ ಕನ್ನ ಹಾಕುತ್ತಿದ್ದ ಈತ ಕದ್ದ ಹಣದಲ್ಲಿ ಬ್ರಾಂಡೆಡ್ ಬಟ್ಟೆ, ವಸ್ತುಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ.
ಕೊನೆಯಲ್ಲಿ ತನ್ನ ಬಳಿ ಉಳಿದಿದ್ದ ಹಣವನ್ನು ಇಟ್ಟುಕೊಳ್ಳದೇ ಚರ್ಚ್ ದೇವಾಲಯಗಳ ಉಂಡಿಗೆ ಹಾಕಿಬಿಡುತ್ತಿದ್ದ. ಮತ್ತೆ ಹಣದ ಅಗತ್ಯ ಇದ್ದಾಗ ಕಳ್ಳತನ ಮಾಡುತ್ತಿದ್ದ. ಈ ವಿಚಿತ್ರ ಕಳ್ಳನನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.
ಕಳ್ಳತನ ಮಾಡುವವರು ಸಾಮಾನ್ಯವಾಗಿ ಎಷ್ಟೇ ಹಣ ಕದ್ದರು ದೇವಸ್ಥಾನಗಳಿಗೆ ದಾನ ಕೊಡುವುದಿಲ್ಲ. ಕದ್ದಿದ್ದಿರಲಿ ಒಂದು ರೂಪಾಯಿಯನ್ನು ಇನ್ನೊಬ್ಬರಿಗೆ ಕೊಡಲು ಇಷ್ಟಪಡುವುದಿಲ್ಲ. ಅಂತಹದ್ರಲ್ಲಿ ಈ ಕಳ್ಳ ಮಾತ್ರ ಕದ್ದ ಹಣದಿಂದ ತನ್ನೆಲ್ಲ ಆಸೆ ತೀರಿಸಿಕೊಂಡ ಮೇಲೆ ಉಳಿದ ಹಣ ದಾನ ಮಾಡುತ್ತಿದ್ದ. ಈ ಕಳ್ಳನನ್ನು ಜಾನ್ ಮೆಲ್ವಿನ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ವಿವಿಧ ಠಾಣೆಗಳಲ್ಲಿನ ಸಿಮಾರು 50ಕ್ಕೂ ಹೆಚ್ಚು ಪ್ರಕರಣಗಳಿಗೆ ಬೇಕಾದವನಾಗಿದ್ದಾನೆ. ಪ್ರತಿಸಲ ಕಳ್ಳತನ ಮಾಡಿದಾಗಲೂ, ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗುತ್ತಿದ್ದ ಇವನು ಕೊನೆಗೂ ಮಡಿವಾಳ ಪೊಲೀಸರ ಕೈವಶವಾಗಿದ್ದಾನೆ. ಇವನನ್ನು ಸದ್ಯ ಮಡಿವಾಳ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ.