1. Home
  2. Local
  3. News
  4. ಬಂಟ್ವಾಳ : ಅಮ್ಟಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಎಮ್ಮೆ ಮಾಂಸ ಮಾರಾಟಕ್ಕೆ ಅರ್ಜಿ – ಅನುಮತಿ ನೀಡಿದ್ರೆ ಸಂಘರ್ಷವೆಂದ ವಿಹಿಂಪ, ಬಜರಂಗದಳ..!!

ಬಂಟ್ವಾಳ : ಅಮ್ಟಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಎಮ್ಮೆ ಮಾಂಸ ಮಾರಾಟಕ್ಕೆ ಅರ್ಜಿ – ಅನುಮತಿ ನೀಡಿದ್ರೆ ಸಂಘರ್ಷವೆಂದ ವಿಹಿಂಪ, ಬಜರಂಗದಳ..!!

ಬಂಟ್ವಾಳ : ಅಮ್ಟಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಎಮ್ಮೆ ಮಾಂಸ ಮಾರಾಟಕ್ಕೆ ಅರ್ಜಿ – ಅನುಮತಿ ನೀಡಿದ್ರೆ ಸಂಘರ್ಷವೆಂದ ವಿಹಿಂಪ, ಬಜರಂಗದಳ..!!
0

ನ್ಯೂಸ್ ಆ್ಯರೋ : ಎಮ್ಮೆ ಮಾಂಸ ಮಾರಾಟ ಮಾಡಲು ಅವಕಾಶ ಕೋರಿ ಗ್ರಾಮ ಪಂಚಾಯತ್ ಗೆ ವ್ಯಕ್ತಿಯೋರ್ವ ಅರ್ಜಿ ‌ನೀಡಿದ್ದು, ಪರವಾನಿಗೆ ನೀಡಿದರೆ ಹೋರಾಟ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಎಚ್ಚರಿಕೆಯ ಸಂದೇಶ ನೀಡಿದೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಲೊರೆಟ್ಟೋ ಬಳಿ ಅಂತೋನಿ ಪೀಟರ್ ಅವರ ಮಾಲಿಕತ್ವದ ಕಟ್ಟಡವೊಂದರ ಕೋಣೆಯಲ್ಲಿ ಎಮ್ಮೆ ಮಾಂಸ ಮಾರಾಟ ಮಾಡಲು ಅವಕಾಶ ನೀಡುವಂತೆ ಮಂಗಳೂರು ಕಾವೂರು ನಿವಾಸಿ ಆಶೋಕ್ ಕುಲಾಲ್ ಎಂಬಾತ ಮನವಿ ನೀಡಿದ್ದಾನೆ.

ಇದರ ಹಿಂದೆ ದೊಡ್ಡದಾದ ಷಡ್ಯಂತ್ರವಿದೆ ಎಂದು ಆರೋಪ ವ್ಯಕ್ತಪಡಿಸಿದ ಸಂಘಟನೆ ಯಾವುದೇ ಕಾರಣಕ್ಕೆ ಅವರಿಗೆ ಮಾರಾಟ ಕ್ಕೆ ಅವಕಾಶ ನೀಡಬಾರದು. ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿ ಅನುಷ್ಠಾನ ಬರುವ ಸಂದರ್ಭದಲ್ಲಿ ಎಮ್ಮೆ ಮಾಂಸ ಮಾರಾಟ ಮಾಡುವ ಅವಕಾಶ ನೀಡಿದರೆ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ.

ಆ ಕಾರಣಕ್ಕಾಗಿ ಪರವಾನಿಗೆ ನೀಡಬಾರದು ಎಂದು ವಿಶ್ವ ಹಿಂದೂಪರಿಷತ್ ಭಜರಂಗದಳ ಕಿನ್ನಿಬೆಟ್ಟು ಘಟಕ ಅಮ್ಟಾಡಿ ಪಿ.ಡಿ.ಒ.ಹಾಗೂ ಅಧ್ಯಕ್ಷರಿಗೆ ಮನವಿ ಮಾಡಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..