1. Home
  2. Local
  3. News
  4. ಸುಬ್ರಹ್ಮಣ್ಯ : 20 ದಿನ ಕಳೆದರೂ ಇನ್ನೂ ಪತ್ತೆಯಾಗದ ಗ್ರಾ.ಪಂ. ಸದಸ್ಯೆ – ಬೆಂಗಳೂರಿನತ್ತ ತೆರಳಿರುವ ಮಾಹಿತಿ, ಆಂಧ್ರಕ್ಕೆ ಹೋಗಿದ್ದಾರಾ..!?

ಸುಬ್ರಹ್ಮಣ್ಯ : 20 ದಿನ ಕಳೆದರೂ ಇನ್ನೂ ಪತ್ತೆಯಾಗದ ಗ್ರಾ.ಪಂ. ಸದಸ್ಯೆ – ಬೆಂಗಳೂರಿನತ್ತ ತೆರಳಿರುವ ಮಾಹಿತಿ, ಆಂಧ್ರಕ್ಕೆ ಹೋಗಿದ್ದಾರಾ..!?

ಸುಬ್ರಹ್ಮಣ್ಯ : 20 ದಿನ ಕಳೆದರೂ ಇನ್ನೂ ಪತ್ತೆಯಾಗದ ಗ್ರಾ.ಪಂ. ಸದಸ್ಯೆ – ಬೆಂಗಳೂರಿನತ್ತ ತೆರಳಿರುವ ಮಾಹಿತಿ, ಆಂಧ್ರಕ್ಕೆ ಹೋಗಿದ್ದಾರಾ..!?
0

ನ್ಯೂಸ್‌ ಆ್ಯರೋ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಐನೆಕಿದು ಗ್ರಾಮದ ಭಾರತಿ ಮೂಕಮಲೆ ಕಾಣೆಯಾಗಿ 20 ದಿನಗಳಾದರೂ ಇನ್ನೂ ಕೂಡ ಪತ್ತೆಯಾಗಿಲ್ಲ.

ಈ ಬಗ್ಗೆ ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ ಹಾಗೂ ಸದಸ್ಯರು ಸೇರಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಶೀಘ್ರ ಪತ್ತೆಗೆ ಮನವಿ ಮಾಡಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗ್ರಾ.ಪಂ ಸದಸ್ಯ ರಾಜೇಶ್ ಅವರು ಪೊಲೀಸರು ಈ ಘಟನೆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಕೆಲವೇ ದಿನದಲ್ಲಿ ಪತ್ತೆ ಹಚ್ಚುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿರುವ ದೂರದ ಸಂಬಂಧಿ ಜೊತೆ ಹೋಗಿರುವುದಾಗಿ ಹೇಳಲಾಗುತ್ತಿದ್ದು ಅ. 29 ರಂದು ಸಂಜೆ ಆಕೆಯ ಮನೆ ಬಳಿಗೆ ಕಾರಿನಲ್ಲಿ ಒಬ್ಬರು ಬಂದಿದ್ದರು ಎಂಬ ಸುದ್ದಿಯೂ ಹರಡಿತ್ತು.

ಕಾರು ಬಂದು ತೆರಳಿರುವುದು ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿದೆ ಎನ್ನಲಾಗಿದೆ. ಅಲ್ಲದೇ ಕಾರಿನಲ್ಲಿ ತೆರಳಿದವರು ಬೆಂಗಳೂರಿಗೆ ತಲುಪಿರುವುದು ಪೊಲೀಸರ ಪರಿಶೀಲನೆ ವೇಳೆ ಗೊತ್ತಾಗಿದೆ. ಅಲ್ಲದೆ ಆಂಧ್ರ ಪ್ರದೇಶಕ್ಕೂ ಹೋಗಿರುವ ಮಾಹಿತಿ ಲಭ್ಯವಾಗಿತ್ತು.

ಸುಬ್ರಹ್ಮಣ್ಯ ಠಾಣೆಯ ಎಸ್ ಐ ಖುದ್ದು ಬೆಂಗಳೂರಿಗೆ ತೆರಳಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದರು. ಈ ನಡುವೆ ಕಾಣೆಯಾದ ಗ್ರಾ.ಪಂ ಸದಸ್ಯೆಯನ್ನು ಪತ್ತೆ ಹಚ್ಚುವಂತೆ ಗ್ರಾ.ಪಂ ವತಿಯಿಂದ ಸುಬ್ರಹ್ಮಣ್ಯ ಠಾಣೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇನ್ನೂ ಕೂಡ ನಾಪತ್ತೆಯಾದವರು ಪತ್ತೆಯಾಗಿಲ್ಲ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..