ನ್ಯೂಸ್ ಆ್ಯರೋ : ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ ನಿಂತಿದ್ದ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಪೆರಾಜೆಯ ಪೆರಂಗಜೆ ಗೌರೀಶ ಎಂದು ಗುರುತಿಸಲಾಗಿದೆ.
ಮೃತ ಗೌರೀಶ್ 4 ದಿನಗಳ ಹಿಂದೆ ಗುರುವಾರದಂದು ಸಂಜೆ ಕಾರಲ್ಲಿ ಬಂದು ಸರಕಾರಿ ಆಸ್ಪತ್ರೆಯ ಎದುರಿನ ಜಾಗದಲ್ಲಿ ಕಾರು ಪಾರ್ಕ್ ಮಾಡಿದ್ದನೆಂದೂ, ವಿಪರೀತ ಕುಡಿತದ ಪರಿಣಾಮವಾಗಿ ಶುಕ್ರವಾರ ದಿನ ಮೃತಪಟ್ಟಿರಬೇಕೆಂದೂ ಶಂಕಿಸಲಾಗಿದೆ.
ಶವ ಬಾತುಕೊಂಡಿದ್ದು ವಾಸನೆ ಬರತೊಡಗಿದ ಹಿನ್ನಲೆಯಲ್ಲಿ ಆದಿತ್ಯವಾರ ಬೆಳಿಗ್ಗೆ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿದೆ. ಪೊಲೀಸರಿಗೆ ವಿಷಯ ತಿಳಿದ ಡಿವೈಎಸ್ ಪಿ ಹಿರೇಮಠ, ಎಸ್ಸೈ ದಿಲೀಪ್ ಮತ್ತು ಪೋಲಿಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೆರಾಜೆಯ ಪೆರಂಗಜೆ ಲೋಕಯ್ಯ ಗೌಡರ ಮಗ ಗೌರೀಶ ( 30 ) ವಿಪರೀತ ಕುಡಿತದ ಚಟ ಹೊಂದಿದ್ದು, ಆತನ ಪತ್ನಿ ಆಶ್ರಮವೊಂದಕ್ಕೆ ಸೇರಿದ್ದಾರೆನ್ನಲಾಗಿದೆ. ಗೌರೀಶರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.
ಗೌರೀಶ್ ಕಳೆದ ಎರಡು ತಿಂಗಳಿಂದ ಕಾಣೆಯಾಗಿದ್ದರು ಎನ್ನಲಾಗಿದೆ. ಗೌರೀಶ್ ವಿಪರೀತ ಮದ್ಯ ವ್ಯಸನಿಯಾಗಿದ್ದು ಇದೀಗ ಅವರ ಮೃತದೇಹ ಕಾರಿನಲ್ಲಿ ಪತ್ತೆಯಾಗಿದ್ದು ಹತ್ತಾರು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.
ಹಾಗಾದರೆ ಗೌರೀಶ್ ಅವರನ್ನು ಇಷ್ಟು ದಿನ ಮನೆ ಮಂದಿ ಹುಡುಕಲಿಲ್ವಾ? ಪಾರ್ಕಿಂಗ್ ಜಾಗದಲ್ಲಿ ಅಷ್ಟೊಂದು ಜನ ಓಡಾಡ್ತಾರೆ ಯಾರು ನೋಡಿಲ್ವಾ? ಎಂಬಂತಹ ಅನೇಕ ಅನುಮಾನಗಳು ಮೂಡಿವೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..