1. Home
  2. Malnad
  3. news
  4. ಶಿವಮೊಗ್ಗ : ಅಡಿಕೆ ವ್ಯಾಪಾರಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆ ಕದ್ದು ಬಿಂದಾಸ್ ಓಡಾಟ – ಮೂವರು ಖತರ್ನಾಕ್ ಖದೀಮರ ಬಂಧನ, ಕೋಟಿಗೂ ಅಧಿಕ ಮೌಲ್ಯದ ಸೊತ್ತು ವಶಕ್ಕೆ..!!

ಶಿವಮೊಗ್ಗ : ಅಡಿಕೆ ವ್ಯಾಪಾರಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆ ಕದ್ದು ಬಿಂದಾಸ್ ಓಡಾಟ – ಮೂವರು ಖತರ್ನಾಕ್ ಖದೀಮರ ಬಂಧನ, ಕೋಟಿಗೂ ಅಧಿಕ ಮೌಲ್ಯದ ಸೊತ್ತು ವಶಕ್ಕೆ..!!

ಶಿವಮೊಗ್ಗ : ಅಡಿಕೆ ವ್ಯಾಪಾರಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆ ಕದ್ದು ಬಿಂದಾಸ್ ಓಡಾಟ – ಮೂವರು ಖತರ್ನಾಕ್ ಖದೀಮರ ಬಂಧನ, ಕೋಟಿಗೂ ಅಧಿಕ ಮೌಲ್ಯದ ಸೊತ್ತು ವಶಕ್ಕೆ..!!
0

ನ್ಯೂಸ್ ಆ್ಯರೋ : ಲಾರಿಯೊಂದರಲ್ಲಿ ಅಡಿಕೆ ಲೋಡ್ ಮಾಡಿ ವ್ಯಾಪಾರಿಯೊಬ್ಬರಿಗೆ ಕಳುಹಿಸಿದ್ದ ಮಾಲೀಕರೊಬ್ಬರ ಮಾಲು ಕದ್ದು, ಕೋಟ್ಯಾಂತರ ರೂಪಾಯಿ ಮೊತ್ತದ ಅಡಿಕೆ ಕದ್ದಿದ್ದ ಅಂತರಾಜ್ಯ ಕಳ್ಳರನ್ನು ಸಾಗರ ಗ್ರಾಮಾಂತರ ಪೋಲಿಸರ ತಂಡ ಬಂಧಿಸಿದ್ದು, ಸೊತ್ತು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ವಿವರ :

ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಸಗೋಡು ಗ್ರಾಮದ ಮಧುಕರ್ ರವರ ಗೋಡಾನ್ ನಿಂದ ದೋಲರಾಮ್ ತಂದೆ ಹರಿಸಿಂಗ್ ರವರಿಗೆ ಸೇರಿದ 24,500 ಕೆಜಿ ತೂಕದ 350 ಚೀಲ ಕೆಂಪು ಅಡಿಕೆಯನ್ನು ಗುಜರಾತ್ ರಾಜ್ಯದ ಅಹಮದಾಬಾದ್ ಗೆ ಲೋಡ್ ಕಳುಹಿಸಿದ್ದು ಆರೋಪಿಗಳು ಲೋಡ್ ಅನ್ನು ಅಹಮದಾಬಾದ್ ತೆಗೆದುಕೊಂಡು ಹೋಗದೆ ಮೋಸ ಮಾಡಿದ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 356/2022 ಕಲಂ 420, 168 ಸಹಿತ 34 ಐಪಿಸಿಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣದ ಆರೋಪಿಗಳ ಪತ್ತೆಗಾಗಿ ರೋಹನ್ ಜಗದೀಶ್ ಐ.ಪಿ.ಎಸ್ ಪೊಲೀಸ್ ಸಹಾಯಕ ಅಧಿಕ್ಷಕರು ಸಾಗರ ಉಪವಿಭಾಗರವರ ಮೇಲುಸ್ತುವಾರಿಯಲ್ಲಿ ವಿ. ಪ್ರವೀಣ್ ಕುಮಾರ್ ಪೊಲೀಸ್ ನಿರೀಕ್ಷಕರು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ತಿರುಮಲೇಶ್ ನಾಯ್ಕ, ಪೊಲೀಸ್ ಉಪ ನಿರೀಕ್ಷಕರು ಕಾರ್ಗಲ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ತಂಡವು ಮಹರಾಷ್ಟ್ರ ರಾಜ್ಯದ ಕೊಲ್ಲಾಪುರ, ಸೊಲ್ಲಾಪುರ, ಪುಣೆ, ಮುಂಬೈ, ದುಲೆ, ಗುಜರಾತ ರಾಜ್ಯದ ಸುರತ್, ಅಹಮದಾಬಾದ್, ವಡೋದರಾ, ಮಧ್ಯಪ್ರದೇಶ ರಾಜ್ಯದ ಇಂದೋರ್, ಖಜಾನಾ, ಉಜ್ಜನಿ, ರಾಜಘಡ್ ಗಳಲ್ಲಿ ಸುಮಾರು 22 ದಿನಗಳ ಕಾರ್ಯಚರಣೆ ನಡೆಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು 1) ರಜಾಕ್ ಖಾನ್ ಎ ಸಲೀಂ ಖಾನ್ ತಂದೆ ಇಮಾಮ್ ಖಾನ್, (65 ವರ್ಷ) ಲಾರಿ ಚಾಲಕ ಕೆಲಸ , ವಾಸ ನ್ಯೂ ದಾವುದಿ ಎಸ್.ಆರ್.ಕೆ. ಜಿಮ್ ಹತ್ತಿರ ಬಿಜ್ರಾನ್ , ಇಂದೋರ್ ಜಿಲ್ಲೆ ಸಂತ ವಿಳಾಸ ನಗರ , ಸಹಚಾಮರ ತಾಲ್ಲೂಕು , ಮಧ್ಯಪ್ರದೇಶ ರಾಜ್ಯ, 2) ಫೇಜು ಸಿಂಗ್ ತಂದೆ ಕಜರು ಸಿಂಗ್, (42 ವರ್ಷ) ಲಾರಿ ಚಾಲಕ ಕೆಲಸ, ವಾಸ ಮಾಲತಿ ರೋಡ್ ಸರ್ಕಲ್ , ಘಾಟಬಿಲೋದ್ , ಘಾಟಬಿಲೋದ್ ತಾಲ್ಲೂಕು ಮತ್ತು ಜಿಲ್ಲೆ. ಮಧ್ಯಪ್ರದೇಶ ರಾಜ್ಯ , ಸ್ವಂತ ಊರು ವಡವ್ ಸರ್ಕಲ್, ವಡವ್ ಏರಿಯಾ , ಆಶ್ರಯ ಬಡಾವಣೆ , ಅಹಮದಾಬಾದ್ ಗುಜರಾತ ರಾಜ್ಯ ಮತ್ತು 3)ಅನೀಸ್ ಅಬ್ಬಾಸಿ ತಂದೆ ಖಾಲಿಖಾ , 55 ವರ್ಷ , ಚಾಲಕ ವೃತ್ತಿ , ವಾಸ ವಜೀದ್‌ ಪರ ಮೊಹಲ್ಲಾ, ದಾನಮಂಡಿ ಹತ್ತಿರ ಶಹಜಾಪುರ ತಾಲ್ಲೂಕು ಮತ್ತು ಜಿಲ್ಲೆ, ಮಧ್ಯಪ್ರದೇಶ ಎಂದು ಗುರುತಿಸಲಾಗಿದೆ.

ಆರೋಪಿಗಳನ್ನು ಮದ್ಯಪ್ರದೇಶ ರಾಜ್ಯದ ಶಾಜಾಪುರ ಜಿಲ್ಲೆಯ ಶಾಜಾಪರ ಟೌನ್ ಬೈಪಾಸ್ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಬಾಲಾಜಿ ಡಾಬಾ ಎದುರು ಪೋಲಿಸರು ಬಂಧಿಸಿದ್ದಾರೆ.

ಆರೋಪಿಗಳು ವಂಚಿಸಿದ್ದ 350 ಚೀಲದಲ್ಲಿದ್ದ ರೂ 1,17,60,000 / – ಮೌಲ್ಯದ 24,500 ಕೆಜಿ ತೂಕದ ಕೆಂಪು ಅಡಿಕೆಯನ್ನು ಹಾಗೂ ಕೃತ್ಯಕ್ಕೆ ಬಳಸಿದ 25 ಲಕ್ಷ ರೂ ಮೌಲ್ಯದ ಆಶೋಕ ಜೈಲ್ಯಾಂಡ್ ಲಾರಿ ಸೇರಿದಂತೆ ಒಟ್ಟು ರೂ . 1,42,60,000 / – ಮೌಲ್ಯದ ಮಾಲನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌

ಆರೋಪಿಗಳು ಅಂತರ ರಾಜ್ಯ ಕಳ್ಳರಾಗಿದ್ದು, ಆರೋಪಿಗಳ ವಿರುದ್ಧ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುತ್ತವೆ‌.

ಮಿಥುನ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಅವರು ಸದರಿ ಕಾರ್ಯಚರಣೆಯ ವಿಶೇಷ ತಂಡದಲ್ಲಿದ್ದ ವಿ ಪ್ರವೀಣ್ ಕುಮಾರ್, ಪೊಲೀಸ್ ನಿರೀಕ್ಷಕರು ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆ, ತಿರುಮಲೇಶ್ ನಾಯ್ಕ, ಪೋಲೀಸ್ ಉಪ ನಿರೀಕ್ಷಕರು ಕಾರ್ಗಲ್ ಪೊಲೀಸ್ ಠಾಣೆ ಸಾಗರ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸನಾವುಲ್ಲಾ ಹೆಚ್.ಸಿ, ಶ್ರೀಧರ ಹೆಚ್.ಸಿ ತಾರನಾಥ ಪಚ್.ಸಿ ಹಾಗೂ ಹಾಗೂ ರವಿಕುಮಾರ್ ಸಿಪಿಸಿ, ಹನುಮಂತಪ್ಪ ಜಂಬೂರ ಸಿಪಿಸಿ, ಪ್ರವೀಣ್ ಕುಮಾರ್ ಸಿಪಿಸಿ ರವರುಗಳ ಉತ್ತಮ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದನೆ ಸಲ್ಲಿಸಿರುತ್ತಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..