1. Home
  2. Mangaluru
  3. ಮಂಗಳೂರು ‌: ಪಿಎಫ್ಐ ಬ್ಯಾನ್ ಬೆನ್ನಲ್ಲೇ ಫೀಲ್ಡಿಗಿಳಿದ ಖಾಕಿ ಪಡೆ – ನಗರದಾದ್ಯಂತ 12 ಪಿಎಫ್ಐ ಕಚೇರಿಗಳಲ್ಲೂ ಪರಿಶೀಲನೆ, ಬೀಗ ಜಡಿದ ಪೋಲಿಸರು

ಮಂಗಳೂರು ‌: ಪಿಎಫ್ಐ ಬ್ಯಾನ್ ಬೆನ್ನಲ್ಲೇ ಫೀಲ್ಡಿಗಿಳಿದ ಖಾಕಿ ಪಡೆ – ನಗರದಾದ್ಯಂತ 12 ಪಿಎಫ್ಐ ಕಚೇರಿಗಳಲ್ಲೂ ಪರಿಶೀಲನೆ, ಬೀಗ ಜಡಿದ ಪೋಲಿಸರು

ಮಂಗಳೂರು ‌: ಪಿಎಫ್ಐ ಬ್ಯಾನ್ ಬೆನ್ನಲ್ಲೇ ಫೀಲ್ಡಿಗಿಳಿದ ಖಾಕಿ ಪಡೆ – ನಗರದಾದ್ಯಂತ 12 ಪಿಎಫ್ಐ ಕಚೇರಿಗಳಲ್ಲೂ ಪರಿಶೀಲನೆ, ಬೀಗ ಜಡಿದ ಪೋಲಿಸರು
0

ನ್ಯೂಸ್ ಆ್ಯರೋ : ಕೇಂದ್ರ ಸರ್ಕಾರವು ಪಿಎಫ್ಐ ಹಾಗೂ ಅಂಗಸಂಸ್ಥೆಗಳ ಮೇಲೆ ನಿಷೇಧ ಹೇರಿದ ಬೆನ್ನಲ್ಲೆ ಮಂಗಳೂರು ಪೊಲೀಸರ ತಂಡ ಮತ್ತೆ ಕಾರ್ಯಾಚರಣೆಗಿಳಿದಿದೆ. ಪಿಎಫ್ಐ ಮುಖಂಡರು, ಎಸ್ ಡಿಪಿಐ ಕಚೇರಿ ಮೇಲೆ ಮಂಗಳೂರು ಪೊಲೀಸರ ತಂಡ ದಾಳಿ ಮಾಡಿದ್ದು, ಕಚೇರಿಗಳಿಗೆ ಬೀಗ ಜಡಿದಿದೆ.

ಮಂಗಳೂರು ಪೊಲೀಸರ ತಂಡ ಕಳೆದ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿದೆ. ಕಂದಾಯ ಮತ್ತು ಇತರ ಇಲಾಖೆಯ ಅಧಿಕಾರಿಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ್ದು, ಪಿಎಫ್ಐ ಮುಖಂಡರ ಮನೆಗಳು ಸೇರಿದಂತೆ ಎಸ್ಡಿಪಿಐ ಕಚೇರಿಯಲ್ಲಿ ಪೊಲೀಸರು ಶೋಧ ನಡೆಸಿದ ಬಳಿಕ ಸೀಝ್ ಮಾಡಲಾಗಿದೆ.

ಪಣಂಬೂರು ಠಾಣಾ ವ್ಯಾಪ್ತಿಯ ಕಸಬ ಬೇಂಗ್ರೆಯ ಪಿಎಫ್ಐ ಕಚೇರಿ, ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಮತ್ತು ಕಾಟಿಪಳ್ಳದ ಪಿಎಫ್ಐ ಕಚೇರಿ, ಬಜಪೆ ಠಾಣಾ ವ್ಯಾಪ್ತಿಯ ಅಡ್ಡೂರು ಮತ್ತು ಕಿನ್ನಿಪಳ್ಳದ ಪಿಎಫ್ಐ ಕಚೇರಿ, ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ.ರೋಡ್ ಪಿಎಫ್ಐ ಕಚೇರಿ, ಕೊಣಾಜೆ ಠಾಣಾ ಇನೋಳಿ ಪಿಎಫ್ಐ ಕಚೇರಿಯನ್ನು ಬಂದ್ ಮಾಡಲಾಗಿದೆ.

ಅಲ್ಲದೇ ಮಂಗಳೂರು ‌ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲೂರು ಪಿಎಫ್ಐ ಕಚೇರಿ, ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಕುದ್ರೋಳಿ ಹಾಗೂ ಅಝೀಝುದ್ದೀನ್ ರಸ್ತೆ ಪಿಎಫ್ಐ ಕಚೇರಿ ಮತ್ತು ಮಂಗಳೂರು ದಕ್ಷಿಣ ಪೋಲಿಸ್ ಠಾಣಾ ವ್ಯಾಪ್ತಿಯ ನೆಲ್ಲಿಕಾಯಿ ರಸ್ತೆ ಹಾಗೂ ರಾವ್ ಆ್ಯಂಡ್ ರಾವ್ ಸರ್ಕಲ್ ನ ಕಚೇರಿಯನ್ನು ಪೋಲಿಸರು ಪರಿಶೀಲನೆಯ ಬಳಿಕ ಬೀಗ ಹಾಕಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..