1. Home
  2. Mangaluru
  3. ಬೆಂಗಳೂರಿನ ಬಾಲಕಿ ಮಂಗಳೂರಿನಲ್ಲಿ ನಾಪತ್ತೆ‌ – ಪತ್ತೆಗೆ ಸಹಕರಿಸಲು ಮನವಿ

ಬೆಂಗಳೂರಿನ ಬಾಲಕಿ ಮಂಗಳೂರಿನಲ್ಲಿ ನಾಪತ್ತೆ‌ – ಪತ್ತೆಗೆ ಸಹಕರಿಸಲು ಮನವಿ

ಬೆಂಗಳೂರಿನ ಬಾಲಕಿ ಮಂಗಳೂರಿನಲ್ಲಿ ನಾಪತ್ತೆ‌ – ಪತ್ತೆಗೆ ಸಹಕರಿಸಲು ಮನವಿ
0

ನ್ಯೂಸ್ ಆ್ಯರೋ : ಮಂಗಳೂರಿಗೆ ಬಂದಿದ್ದ ಬೆಂಗಳೂರು ಮೂಲದ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಮಹಾಲಕ್ಷ್ಮೀ ಲೇಔಟ್‌ನ ಭಾರ್ಗವಿ (14) ಎಂಬಾಕೆ ನಾಪತ್ತೆಯಾದ ಬಾಲಕಿ.

ಕಳೆದ ಸೋಮವಾರ ಈಕೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದು ಬಸ್‌ ಮೂಲಕ ಮುಂಜಾನೆ 3 ಗಂಟೆಗೆ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದಳು.

ಅಲ್ಲಿಂದ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಮುಕ್ಕ ಬೀಚ್‌, ಕದ್ರಿ ಪಾರ್ಕ್‌ ತಿರುಗಿದ್ದಾಳೆ. ಅಲ್ಲಿಂದ ರಿಕ್ಷಾದಲ್ಲಿ ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣಕ್ಕೆ ಬಂದು ಚಿಕ್ಕಮ್ಮನ ಮನೆಗೆ ಹೋಗುವುದಾಗಿ ರಿಕ್ಷಾ ಚಾಲಕನಲ್ಲಿ ಹೇಳಿರುವ ಮಾಹಿತಿ ಇದೆ. ಆದರೆ ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸ್‌ಮೂಲಗಳು ತಿಳಿಸಿವೆ.

ಅಕ್ಟೋಬರ್ 17ರ ಸಂಜೆ 4.30ರಿಂದ ಈಕೆ ನಾಪತ್ತೆಯಾಗಿದ್ದು, 5 ಫೀಟ್‌ 3 ಇಂಚು ಎತ್ತರವಿದ್ದಾಳೆ. ನಾಪತ್ತೆಯಾಗುವ ದಿನದಂದು ಈಕೆ ಕೇಸರಿ ಬಣ್ಣದ ಬಟ್ಟೆ ಬೂದು ಬಣ್ಣದ ಜಾಕೆಟ್ ತೊಟ್ಟಿದ್ದಳು.

ಈಕೆ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ದೂರವಾಣಿ ಸಂಖ್ಯೆ 9972031021ನ್ನು ಸಂಪರ್ಕಿಸಲು ಸೂಚಿಸಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..