1. Home
  2. Mangaluru
  3. ಕೊಣಾಜೆ‌ : ಸ್ಪಾಂಡಲೋಸಿಸ್‌ ಕಾಯಿಲೆಯಿಂದ ಬಳಲುತ್ತಿರುವ ತಾಯಿ – ಚಿಕಿತ್ಸೆಗೆ ಹಣವಿಲ್ಲದೆ ಮೂವರು ಹೆಣ್ಣುಮಕ್ಕಳ ಪರದಾಟ, ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ ಕುಟುಂಬ..

ಕೊಣಾಜೆ‌ : ಸ್ಪಾಂಡಲೋಸಿಸ್‌ ಕಾಯಿಲೆಯಿಂದ ಬಳಲುತ್ತಿರುವ ತಾಯಿ – ಚಿಕಿತ್ಸೆಗೆ ಹಣವಿಲ್ಲದೆ ಮೂವರು ಹೆಣ್ಣುಮಕ್ಕಳ ಪರದಾಟ, ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ ಕುಟುಂಬ..

ಕೊಣಾಜೆ‌ : ಸ್ಪಾಂಡಲೋಸಿಸ್‌ ಕಾಯಿಲೆಯಿಂದ ಬಳಲುತ್ತಿರುವ ತಾಯಿ – ಚಿಕಿತ್ಸೆಗೆ ಹಣವಿಲ್ಲದೆ ಮೂವರು ಹೆಣ್ಣುಮಕ್ಕಳ ಪರದಾಟ, ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ ಕುಟುಂಬ..
0

ನ್ಯೂಸ್‌ ಆ್ಯರೋ : ಮಂಗಳೂರು ತಾಲ್ಲೂಕಿನ ಅಂಬ್ಲಮೊಗರು ಗ್ರಾಮದ ಕೆಂಪುಗುಡ್ಡೆ ನಿವಾಸಿ, 55 ವರ್ಷದ ಭಾರತಿ ಅವರು ಸ್ಪಾಂಡಲೋಸಿಸ್‌ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ದಾನಿಗಳ ನೆರವು ಕೋರಲಾಗಿದೆ.

ಭಾರತಿ ದಂಪತಿಗೆ ಮೂರು ಹೆಣ್ಣುಮಕ್ಕಳು. ಅವರ ಪತಿ ಕೂಲಿ ಕೆಲಸ ಮಾಡಿ ಸಂಸಾರದ ಬಂಡಿಯನ್ನು ಮುನ್ನಡೆಸುತ್ತಿದ್ದಾರೆ. ಹೀಗಿರುವಾಗ ಭಾರತಿ ಅವರು ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಅವರನ್ನು ಮಂಗಳೂರು ಎ.ಜೆ. ಆಸ್ಪತ್ರೆ ಮತ್ತು ತೇಜಸ್ವಿನಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಲಾಗಿದೆ. ಅವರ ತುರ್ತು ಚಿಕಿತ್ಸೆಗಾಗಿ ₹ 3 ಲಕ್ಷ ನೆರವಿನ ಅಗತ್ಯ ಕುಟುಂಬಕ್ಕೆ ಇದೆ.

ಭಾರತಿ ಅವರ ಮೂವರು ಮಕ್ಕಳಲ್ಲಿ ಇಬ್ಬರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಿರಿಯ ಪುತ್ರಿ ಅಶ್ವಿತಾ ಅವರು ಈಗ ತಾಯಿಯ ಆರೈಕೆಯಲ್ಲಿ ದಿನ ಕಳೆಯುತ್ತಿದ್ದಾರೆ. ಈ ಕುಟುಂಬಕ್ಕೆ ಬೇರೆ ಆದಾಯದ ಮೂಲ ಇಲ್ಲದೆ, ದಿಕ್ಕು ತೋಚದಂತಾಗಿದೆ. ಮಾತ್ರವಲ್ಲದೆ, ಅಶ್ವಿತಾ ಅವರ ತಂದೆಯ ತಾಯಿ 4 ವರ್ಷದಿಂದ ಹಾಸಿಗೆ ಹಿಡಿದಿದ್ದು, ಕುಟುಂಬದ ಸ್ಥಿತಿ ಚಿಂತಾಜನಕವಾಗಿದೆ.

ನಮ್ಮ ತಾಯಿಯ ಚಿಕಿತ್ಸೆಗಾಗಿ ಈಗಾಗಲೇ ಸಾಕಷ್ಟು ಕಡೆ ಸಾಲ ಮಾಡಿದ್ದೇವೆ. ಇದೀಗ ದಾರಿ ಕಾಣದೆ ದಾನಿಗಳ ಮೊರೆ ಬಂದಿದ್ದೇವೆ. ಎರಡು ದಿನದೊಳಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದು, ಅದಕ್ಕೆ ₹ 3 ಲಕ್ಷ ಹಣ ಬೇಕು. ದಾನಿಗಳು ತಮ್ಮಿಂದಾದ ಸಹಕಾರ ನೀಡಬೇಕು ಎಂದು ಅಶ್ವಿತಾ ಮನವಿ ಮಾಡಿದ್ದಾರೆ.

ದಾನಿಗಳು ಈ ಕೆಳಗಿನ ಖಾತೆಗೆ ನೆರವು ನೀಡಬಹುದು.

  • ಖಾತೆಯ ಹೆಸರು : Ashwitha
  • ಖಾತೆ ಸಂಖ್ಯೆ : 84700100018319
  • IFSC Code‌ : BARB0VJKNJE
  • ಕೊಣಾಜೆ ಶಾಖೆ, ಮಂಗಳೂರು