ನ್ಯೂಸ್ ಆ್ಯರೋ : ಟೂರ್ ಗೆ ಹೋಗಿ ಬಂದಿದ್ದ ದಂಪತಿಗಳು ಒಂದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಕಮೀಷನರೇಟ್ ನ ಕಂಕನಾಡಿ ಪೋಲಿಸ್ ಠಾಣಾ ವ್ಯಾಪ್ತಿಯ ಸಮೀಪದ ಅಡುಮರೋಳಿ ಎಂಬಲ್ಲಿ ನಡದಿದೆ.
ಫ್ರಿಲ್ಯಾನ್ಸ್ ವೆಬ್ ಡಿಸೈನರ್ ಆಗಿದ್ದ, ಹುಬ್ಬಳ್ಳಿ ಮೂಲದ ಮಲ್ಲಿಕಾರ್ಜುನ್ (35) ಮತ್ತು ಐಟಿಐ ಕಾಲೇಜು ಲೆಕ್ಚರರ್, ಮಂಗಳೂರು ಮೂಲದ ಸೌಮ್ಯ(34) ಆತ್ಮಹತ್ಯೆ ಮಾಡಿಕೊಂಡವರು.
ಮಲ್ಲಿಕಾರ್ಜುನ, ಸೌಮ್ಯ ಅವರು ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದು, ಕೊಡಗಿಗೆ ಪ್ರವಾಸ ತೆರಳಿದ್ದು ನಿನ್ನೆ ರಾತ್ರಿಯಷ್ಟೇ ಮಂಗಳೂರಿಗೆ ವಾಪಾಸಾಗಿದ್ದರು.
ಮೊದಲಿಗೆ ಮಲ್ಲಿಕಾರ್ಜುನ ನೇಣಿಗೆ ಶರಣಾಗಿದ್ದು, ಈ ವಿಚಾರವನ್ನು ಸೌಮ್ಯ ಅವರು ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದರು. ಆದರೆ ಸಂಬಂಧಿಕರು ಸೌಮ್ಯ ಅವರ ಮನೆಗೆ ತಲುಪುವ ಮೊದಲೇ ಸೌಮ್ಯ ಕೂಡ ನೇಣಿಗೆ ಶರಣಾಗಿದ್ದಾರೆ ಎಂದು ಕಮೀಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕಂಕನಾಡಿ ಠಾಣಾ ಪೋಲಿಸರು ಭೇಟಿ ನೀಡಿದ್ದು,ಪರಿಶೀಲನೆ ನಡೆಸುತ್ತಿದ್ದಾರೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..