1. Home
  2. Mangaluru
  3. ಉಳ್ಳಾಲ : ನವಜಾತ ಗಂಡು ಶಿಶುವನ್ನು‌ ರಸ್ತೆಯಲ್ಲಿ ಎಸೆದು ಹೋದ ಪಾಪಿ ತಾಯಿ – ಪ್ರಕರಣ ದಾಖಲು, ಪೋಲಿಸರಿಂದ ತನಿಖೆ

ಉಳ್ಳಾಲ : ನವಜಾತ ಗಂಡು ಶಿಶುವನ್ನು‌ ರಸ್ತೆಯಲ್ಲಿ ಎಸೆದು ಹೋದ ಪಾಪಿ ತಾಯಿ – ಪ್ರಕರಣ ದಾಖಲು, ಪೋಲಿಸರಿಂದ ತನಿಖೆ

ಉಳ್ಳಾಲ : ನವಜಾತ ಗಂಡು ಶಿಶುವನ್ನು‌ ರಸ್ತೆಯಲ್ಲಿ ಎಸೆದು ಹೋದ ಪಾಪಿ ತಾಯಿ – ಪ್ರಕರಣ ದಾಖಲು, ಪೋಲಿಸರಿಂದ ತನಿಖೆ
0

ನ್ಯೂಸ್ ಆ್ಯರೋ : ರಸ್ತೆ ಬದಿಯಲ್ಲಿ ಒಂದು ದಿನ ಮೊದಲು ಹುಟ್ಟಿದ ಗಂಡು ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವ ಅಘಾತಕಾರಿ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪಿಕಾಡು ಅಂಬಿಕಾ ರಸ್ತೆಯ ಗೇರು ಅಭಿವೃದ್ಧಿ ಕೇಂದ್ರದ ಬಳಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತೊಕ್ಕೊಟ್ಟು ಸಮೀಪದ ಕಾಪಿಕಾಡ್ ನಿವಾಸಿಯಾದ ಅಮರ್ ಎಂಬವರ ಮನೆಯ ಮುಂಭಾಗದ ಗೇಟಿನ ಹೊರಗಡೆ ಪಾರ್ಕ್ ಮಾಡಿದ ಕಾರಿನ ಅಡಿಯಲ್ಲಿ ಮಗು ಪತ್ತೆಯಾಗಿದೆ. ಮನೆಮಂದಿ ಬೆಳಗ್ಗೆ ಎದ್ದಾಗ ಮಗು ಕೂಗುತ್ತಿರುವ ಶಬ್ದ ಕೇಳಿ ಹುಡುಕಾಡಿದಾಗ ಮಗು ಪತ್ತೆಯಾಗಿದೆ. ತಕ್ಷಣ ಮನೆಮಂದಿ ಉಳ್ಳಾಲ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ. ಒಂದು ದಿವಸದ ಮಗು ಎಂದು ವೈದ್ಯಕೀಯ ಪರೀಕ್ಷೆಯ ವೇಳೆ ದೃಢಪಟ್ಟಿದೆ.

ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ವಿವಿಧ ಆಸ್ಪತ್ರೆಗಳಿಂದ ಮಾಹಿತಿ ಕಲೆಹಾಕುತ್ತಿದ್ದು, ಪ್ರಸಕ್ತ ಮಗುವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇಡಲಾಗಿದೆ.

ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ ಬಳಿಕ ಮಗುವಿನ ಹೆತ್ತವರು ಅಥವಾ ಸಂಬಂಧಪಟ್ಟವರು ಎರಡು ತಿಂಗಳೊಳಗಾಗಿ ಈ ಬಗ್ಗೆ ವಿಚಾರಿಸಿದಲ್ಲಿ ಅವರ ಸುಪರ್ದಿಗೆ ಒಪ್ಪಿಸಲಾಗುವುದು ಎಂದು ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶಕರು ತಿಳಿಸಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..