1. Home
  2. Mangaluru
  3. ವಾರದ ಅಂತರದಲ್ಲಿ ಮಂ‌ಗಳೂರಿಗೆ ಇನ್ನೊಂದು ಐಷಾರಾಮಿ ಹಡಗು ಆಗಮನ: ಕರಾವಳಿಯ ಪ್ರಮುಖ ಸ್ಥಳಗಳಿಗೆ ಭೇಟಿ ಕೊಟ್ಟ ವಿದೇಶಿಗರು

ವಾರದ ಅಂತರದಲ್ಲಿ ಮಂ‌ಗಳೂರಿಗೆ ಇನ್ನೊಂದು ಐಷಾರಾಮಿ ಹಡಗು ಆಗಮನ: ಕರಾವಳಿಯ ಪ್ರಮುಖ ಸ್ಥಳಗಳಿಗೆ ಭೇಟಿ ಕೊಟ್ಟ ವಿದೇಶಿಗರು

ವಾರದ ಅಂತರದಲ್ಲಿ ಮಂ‌ಗಳೂರಿಗೆ ಇನ್ನೊಂದು ಐಷಾರಾಮಿ ಹಡಗು ಆಗಮನ: ಕರಾವಳಿಯ ಪ್ರಮುಖ ಸ್ಥಳಗಳಿಗೆ ಭೇಟಿ ಕೊಟ್ಟ ವಿದೇಶಿಗರು
0

ನ್ಯೂಸ್ ಆ್ಯರೋ: ಒಂದೇ ವಾರದ ಅಂತರದಲ್ಲಿ ನವ ಮಂಗಳೂರು ಬಂದರಿಗೆ ಇನ್ನೊಂದು ಐಷಾರಾಮಿ ಹಡಗು ಮಾರ್ಷಲ್ ಐಲ್ಯಾಂಡ್​ನಿಂದ ಆಗಮಿಸಿದೆ. ಸೆವೆನ್ ಸೀಸ್ ಎಕ್ಸ್ ಫ್ಲೋರರ್ ಎಂಬ ಈ ಐಷಾರಾಮಿ ಹಡಗಿನಲ್ಲಿ 686ಮಂದಿ ಪ್ರಯಾಣಿಕರು ಹಾಗೂ 552ಸಿಬ್ಬಂದಿ ಮಂಗಳೂರಿಗೆ ಆಗಮಿಸಿದ್ದಾರೆ.

ನವೆಂಬರ್​ 28 ರಂದು ಐಷಾರಾಮಿ ಹಡಗು ಮಂಗಳೂರಿಗೆ ಆಗಮಿಸಿದ್ದು, ಆದಾದ ಬಳಿಕ ಒಂದು ವಾರದಲ್ಲಿ ಎರಡನೇ ಐಷಾರಾಮಿ ಪ್ರಯಾಣಿಕ ಹಡಗು ಮಂಗಳೂರಿಗೆ ತಲುಪಿದೆ.

ಸೆವೆನ್ ಸೀಸ್ ಎಕ್ಸ್ ಫ್ಲೋರರ್ ಹಡಗು ಇದಾಗಿದ್ದು, 223.74 ಮೀ. ಉದ್ದ ಹಾಗೂ 48 ಮೀ. ಅಗಲವಿದೆ. ಈ ಐಷಾರಾಮಿ ಹಡಗು ಮಾಲೆ (ಮಾಲ್ಡೀವ್ಸ್)ಗೆ ಹೋಗುವ ಮಾರ್ಗದಲ್ಲಿ ಕತಾರ್ ಬಂದರಿನಿಂದ ಭಾರತಕ್ಕೆ ಬಂದು ಮೊರ್ಮ ಗೋವಾಕ್ಕೆ ಆಗಮಿಸಿತ್ತು. ಅಲ್ಲಿಂದ ಹೊರಟ ಈ ಐಷಾರಾಮಿ ಹಡಗು ನವ ಮಂಗಳೂರು ಬಂದರಿಗೆ ನಿನ್ನೆ ಬೆಳಗ್ಗೆ ಬಂದು ತಲುಪಿದೆ.

ಪ್ರಯಾಣಿಕರಿಗೆ ನವ ಮಂಗಳೂರು ಬಂದರು ಅಧಿಕಾರಿಗಳು ಭವ್ಯವಾಗಿ ಸ್ವಾಗತ ಕೋರಿ ಪ್ರಯಾಣಿಕರ ಸೌಲಭ್ಯಕ್ಕೆ ಸಕಲ ಸಿದ್ಧತೆ ಮಾಡಿದ್ದರು. ಹಡಗಿನಿಂದ ಇಳಿದ ಪ್ರಯಾಣಿಕರಿಗೆ ಮಂಗಳೂರು ನಗರದ ಕುದ್ರೋಳಿ ಶ್ರೀಕ್ಷೇತ್ರ, ಕದ್ರಿ ದೇವಾಲಯ, ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿಯ ಫಿಲಾಟೆಲಿಕ್ ಬ್ಯೂರೋ‌, ಸಂತ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ, ಗೋಡಂಬಿ ಕಾರ್ಖಾನೆ, ಗೋಮಟೇಶ್ವರ ಪ್ರತಿಮೆ, ಮೂಡಬಿದ್ರಿಯ ಸಾವಿರಕಂಬದ ಬಸದಿಯ ವೀಕ್ಷಣೆಗೆ ಬಸ್, ಕಾರು, ಪ್ರೀಪೇಯ್ಡ್​ ಟ್ಯಾಕ್ಸಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಬಳಿಕ ಈ ಹಡಗು ಸಂಜೆ 6 ಗಂಟೆಗೆ ಮಾಲ್ಡೀವ್ಸ್​ನ ಮಾಲೆ ಬಂದರಿನತ್ತ ಪ್ರಯಾಣ ಬೆಳೆಸಿತು.