ನ್ಯೂಸ್ ಆ್ಯರೋ : ಮಹಿಳೆಯ ಧ್ವನಿಯನ್ನು ಅನುಕರಣೆ ಮಾಡಿ ವ್ಯಕ್ತಿಗೆ ಕರೆ ಮಾಡಿ ನಂಬಿಸಿ ಅಶ್ಲೀಲ ವಿಡಿಯೋ ಕರೆಯ ಮೂಲಕ ಬ್ಲ್ಯಾಕ್ ಮೇಲ್ ಹಣ ಪೀಕಿಸಿದ ವ್ಯಕ್ತಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮೂಡುಬಿದಿರೆ ಸಮೀಪದ ಬಿರಾವು ಧನಂಜಯ ಎಂದು ಗುರುತಿಸಲಾಗಿದೆ.
ಬೈಕಂಪಾಡಿಯ ಕಂಪೆನಿಯೊಂದರ ಉದ್ಯೋಗಿ ಹೊಸಬೆಟ್ಟು ನಿವಾಸಿ ನವೀನ್‌ಚಂದ್ರ ಅವರಿಗೆ “ಉಷಾ’ ಎನ್ನುವ ಹೆಸರಿನಲ್ಲಿ ಪರಿಚಯಿಸಿಕೊಂಡು ಹೆಣ್ಣಿನ ಸ್ವರದಲ್ಲಿ ಕರೆ, ವೀಡಿಯೋ ಕಾಲ್ ಮಾಡಿ, ಯಾವುದೋ ಹುಡುಗಿಯ ಖಾಸಗಿ ಅಂಗಗಳನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ವೇಲ್ ಮಾಡಿದ ಆರೋಪ ಹೊರಿಸಲಾಗಿದೆ.
ಆರೋಪಿ ಬಿರಾವು ಧನಂಜಯ, 25 ಸಾವಿರ ಹಣ ಕೊಡಬೇಕು, ಇಲ್ಲವಾದಲ್ಲಿ ಈ ವೀಡಿಯೋ ಕ್ಲಿಪ್ಪಿಂಗನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದ. ಕಂಗಾಲಾದ ನವೀನ್‌ಚಂದ್ರ ಅವರು ಒಮ್ಮೆ 2 ಸಾವಿರ ಗೂಗಲ್ ಪೇ ಮಾಡಿದ್ದರು. ಬಳಿಕವೂ ಪದೇಪದೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ.
ಇದರಿಂದ ರೋಸಿಹೋದ ನವೀನ್‌ಚಂದ್ರ ಅವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದು, ಸುರತ್ಕಲ್ ಪೊಲೀಸರು ಉಷಾ ಹೆಸರಿನ ಧನಂಜಯನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..