ನ್ಯೂಸ್ ಆ್ಯರೋ : ‘ಚಡ್ಡಿಗಳೇ ಎಚ್ಚರ, ಪಿ.ಎಫ್.ಐ. ನಾವು ಮರಳಿ ಬರುತ್ತೇವೆ ‘ ಈ ರೀತಿಯಲ್ಲಿ ಎಚ್ಚರಿಕೆಯ ಸಂದೇಶವನ್ನು ರಸ್ತೆಯಲ್ಲಿ ಬರೆದು ಬಂಟ್ವಾಳದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಲು ಹೊರಟಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಬಂಟ್ವಾಳ ತಾಲೂಕಿನ ಪಿಲತಾಬೆಟ್ಟು ಗ್ರಾಮದ ಸ್ನೇಹ ಗಿರಿ ಎಂಬಲ್ಲಿ ಕಿಡಿಗೇಡಿಗಳು ರಸ್ತೆಯಲ್ಲಿ ಬಹಿರಂಗ ಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದೆ. ಚಡ್ಡಿಗಳೇ ಎಚ್ಚರ ನಾವು ಮರಳಿ ಬರುತ್ತೇವೆ ಎಂದು ರಸ್ತೆಯಲ್ಲಿ ಬರೆದುಕೊಂಡಿರುತ್ತಾರೆ. ಸ್ಥಳೀಯರು ಪುಂಜಾಲ್ ಕಟ್ಟೆ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿ ತಕ್ಷಣಕ್ಕೆ ಕ್ರಮ ಜರುಗಿಸಿ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಇಡೀ ದೇಶವೇ ಆಯುಧ ಪೂಜೆಯ ಸಂಭ್ರಮದಿಂದ ಇರುವ ಸಂದರ್ಭದಲ್ಲಿ, ಯಾರೋ ಕಿಡಿಗೇಡಿಗಳು ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪೋಲೀಸ್ ಠಾಣೆ ವ್ಯಾಪ್ತಿಯ ನಯನಾಡು ಎಂಬಲ್ಲಿ ರಸ್ತೆಯ ಮೇಲೆ ಬಳಪದಲ್ಲಿ ಬರೆದಿರುವ ಬರಹ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೇಂದ್ರ ಸರಕಾರದ ಎ.ಎನ್.ಐ.ದಾಳಿ ಮತ್ತು ನಿಷೇಧದ ಹಿನ್ನೆಲೆಯಲ್ಲಿ ಪಿ.ಎಫ್.ಐ. ಸಂಘಟನೆಯು ಚಡ್ಡಿಗಳೇ ಎಚ್ಚರ ಎಂಬ ಸಂದೇಶವನ್ನು ಗ್ರಾಮಾಂತರ ಭಾಗದ ರಸ್ತೆಯಲ್ಲಿ ಬರೆದ ಬರಹ ಇದೀಗ ಪೋಲಿಸರನ್ನು ನಿದ್ದೆಗೆಡಿಸುವಂತೆ ಮಾಡಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..