ನ್ಯೂಸ್ ಆ್ಯರೋ : ನವ ಮಂಗಳೂರು ಬಂದರಿನಲ್ಲಿನ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪಿಎಸ್ಐ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ NMPT ಯ ಮುಖ್ಯದ್ವಾರದ ಬಳಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಅಧಿಕಾರಿಯನ್ನು ಜ್ಯೋತಿಬಾಯಿ ಎಂದು ಗುರುತಿಸಲಾಗಿದೆ.
ಕಮೀಷನರೇಟ್ ನ ಪಣಂಬೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ.
ಆತ್ಮಹತ್ಯೆಗೆ ಯತ್ನಿಸುವ ಮೊದಲೇ ಜ್ಯೋತಿಬಾಯಿ ಅವರು ತನ್ನ ತಾಯಿಗೆ ಬರೆದಿದ್ದ ಪತ್ರ ಲಭಿಸಿದ್ದು, ಅದರಲ್ಲಿ ಕ್ಷಮಿಸಿ ಅಮ್ಮ, ನನಗೆ ಜೀವನದಲ್ಲಿ ಮನಸ್ಸು ತುಂಬಿ ಹೋಗಿದೆ. ಈ ಆತ್ಮಹತ್ಯೆ ನನ್ನಿಷ್ಟದಂತೆ ಮಾಡಿಕೊಳ್ಳುತ್ತಿದ್ದು, ಯಾರದ್ದೂ ಒತ್ತಡ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಜ್ಯೋತಿಬಾಯಿ ಅವರ ಗಂಡ ಓಂಬೀರ್ ಸಿಂಗ್ ಪರ್ಮಾರ್ MRPL ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಗಾಯಗೊಂಡಿದ್ದ ಜ್ಯೋತಿಬಾಯಿ ಅವರನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪತಿ ಪತ್ನಿ ಇಬ್ಬರೂ ರಾಜಸ್ತಾನ ರಾಜ್ಯದ ಭರತಪುರ ಜಿಲ್ಲೆಯವರು ಎಂದು ಕಮೀಷನರ್ ಮಾಹಿತಿ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..