1. Home
  2. Mangaluru
  3. ಮಂಗಳೂರು : ಖಾಸಗಿ ಲಾಡ್ಜ್ ನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ – ಬುರ್ಖಾಧಾರಿ ಮಹಿಳೆಯ ಮೇಲೆ ಅನುಮಾನ, ಪ್ರಕರಣದ ಸುತ್ತ ಅನುಮಾನಗಳ ಹುತ್ತ…!!

ಮಂಗಳೂರು : ಖಾಸಗಿ ಲಾಡ್ಜ್ ನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ – ಬುರ್ಖಾಧಾರಿ ಮಹಿಳೆಯ ಮೇಲೆ ಅನುಮಾನ, ಪ್ರಕರಣದ ಸುತ್ತ ಅನುಮಾನಗಳ ಹುತ್ತ…!!

ಮಂಗಳೂರು : ಖಾಸಗಿ ಲಾಡ್ಜ್ ನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ – ಬುರ್ಖಾಧಾರಿ ಮಹಿಳೆಯ ಮೇಲೆ ಅನುಮಾನ, ಪ್ರಕರಣದ ಸುತ್ತ ಅನುಮಾನಗಳ ಹುತ್ತ…!!
0

ನ್ಯೂಸ್ ಆ್ಯರೋ‌ : ಮಂಗಳೂರಿನ ಪಂಪ್ ವೆಲ್ ಬಳಿಯ ಖಾಸಗಿ ಲಾಡ್ಜೊಂದರಲ್ಲಿ ಬೆತ್ತಲಾಗಿರುವ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಸಾವಿನ‌ ಕುರಿತು ಅನುಮಾನ ಮೂಡಿದೆ.

ಮೃತ ವ್ಯಕ್ತಿ ಅಬ್ದುಲ್ ಕರೀಮ್ ತಂದೆ ಮೊಹಮ್ಮದ್ ಬ್ಯಾರಿ, ಪೈವಳಿಕೆ ಗ್ರಾಮ ಪಂಚಾಯತ್, ಚಿಪ್ಪಾರ್ ಪೋಸ್ಟ್ ಕಾಸರಗೋಡು ಎಂದು ಗುರುತಿಸಲಾಗಿದೆ.

ಮೃತದೇಹ ಪತ್ತೆಯಾದ ರೂಂ ನಲ್ಲಿ ಕೆಲ ಮಾತ್ರೆಗಳು ಪತ್ತೆಯಾಗಿದ್ದು, ಬುರ್ಖಾಧಾರಿ ಮಹಿಳೆಯೊಬ್ಬಳು ಮೃತ ವ್ಯಕ್ತಿಯನ್ನು ಭೇಟಿಯಾಗಿರುವುದಾಗಿ ಕಮೀಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಶಂಕಿತ ಬುರ್ಖಾಧಾರಿ ಮಹಿಳೆಯ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವ್ಯಕ್ತಿಯ ಸಾವು ಹಲವು‌ ಅನುಮಾನಗಳನ್ನು ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಮಾಹಿತಿ ಕಲೆಹಾಕುತ್ತಿದ್ದು, ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಬೆಳಕಿಗೆ ಬರಲಿದೆ.