1. Home
  2. Mangaluru
  3. ಉಳ್ಳಾಲ ಹಿಟ್ ಅಂಡ್ ರನ್ ಪ್ರಕರಣ – ಸಂಚಾರಿ ಪೊಲೀಸ್ ಗೆ ಗುದ್ದಿದ ಕಾರು ವಶಕ್ಕೆ, ಪರಾರಿಯಾದ ವಿದ್ಯಾರ್ಥಿ ಚಾಲಕನಿಗೆ ಮುಂದುವರೆದ ಶೋಧ

ಉಳ್ಳಾಲ ಹಿಟ್ ಅಂಡ್ ರನ್ ಪ್ರಕರಣ – ಸಂಚಾರಿ ಪೊಲೀಸ್ ಗೆ ಗುದ್ದಿದ ಕಾರು ವಶಕ್ಕೆ, ಪರಾರಿಯಾದ ವಿದ್ಯಾರ್ಥಿ ಚಾಲಕನಿಗೆ ಮುಂದುವರೆದ ಶೋಧ

ಉಳ್ಳಾಲ ಹಿಟ್ ಅಂಡ್ ರನ್ ಪ್ರಕರಣ – ಸಂಚಾರಿ ಪೊಲೀಸ್ ಗೆ ಗುದ್ದಿದ ಕಾರು ವಶಕ್ಕೆ, ಪರಾರಿಯಾದ ವಿದ್ಯಾರ್ಥಿ ಚಾಲಕನಿಗೆ ಮುಂದುವರೆದ ಶೋಧ
0

ನ್ಯೂಸ್ ಆ್ಯರೋ‌ : ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ, ಹೈವೇ ಪ್ಯಾಟ್ರೊಲ್ ಚಾಲಕ ಲೋಕೇಶ್ ಅವರಿಗೆ ಅಪಘಾತ ನಡೆಸಿದ ಕಾರನ್ನು ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಕಾರು ಚಾಲಕ ವಿದ್ಯಾರ್ಥಿಯಾಗಿದ್ದು ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಬಲೆ ಬೀಸಲಾಗಿದೆ.

ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಮೊಹಮ್ಮದ್ ಇಕ್ಬಾಲ್ ಎಂಬಾತನಿಗೆ ಸೇರಿದ ( KA 19 MA 5952 ) ಸ್ವಿಫ್ಟ್ ಕಾರು ಇದಾಗಿದ್ದು, ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಕಾರನ್ನು ನಿಲ್ಲಿಸದೇ ತಡೆಯಲು ಮುಂದಾಗಿದ್ದ ಸಂಚಾರಿ ಠಾಣೆಯ ಪೇದೆ ಲೋಕೇಶ್ ಅವರಿಗೆ ಗುದ್ದಿ ಪರಾರಿಯಾಗಿದ್ದ.

ಗಂಭೀರ ಗಾಯಗೊಂಡ ಪೇದೆ ಎ.ಜೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸಿಸಿಟಿವಿಯಲ್ಲಿ ದೊರೆತ ಮಾಹಿತಿ ಆಧಾರದಡಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ತಲೆಮರೆಸಿಕೊಂಡ ಚಾಲಕ ವಿದ್ಯಾರ್ಥಿಗಾಗಿ ಹುಡುಕಾಟ ಮುಂದುವರೆದಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..