ಕದ್ರಿಯ RSS ಕಚೇರಿ ಸಂಘ ನಿಕೇತನ ಉಗ್ರರ ಟಾರ್ಗೆಟ್…!? – ಶಾರೀಕ್ ಸ್ಕೆಚ್ ಹಾಕಿದ್ದು ಪಂಪ್’ವೆಲ್ ಗೆ ಅಲ್ವಾ? ಸ್ಫೋಟದ ಹೊಣೆ ಹೊತ್ತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್..!!

ನ್ಯೂಸ್ ಆ್ಯರೋ : ಮಂಗಳೂರಿನ ನಾಗುರಿಯಲ್ಲಿ ಆಟೋದಲ್ಲಿ ನಡೆದಿದ್ದ ಸ್ಪೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಶಾರೀಕ್ ಸೇರಿದಂತೆ ಉಗ್ರರ ಟಾರ್ಗೆಟ್ ಆಗಿರುವುದು ಪಂಪ್ ವೆಲ್ ಅಲ್ಲಾ ಬದಲಾಗಿ ಕದ್ರಿ ಅನ್ನುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಮಂಗಳೂರು ಸ್ಪೋಟದ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಅನ್ನೋ ಸಂಸ್ಥೆ ಹೊತ್ತು ಕೊಂಡಿದೆ. ಡಾರ್ಕ್ ವೆಬ್ ನಲ್ಲಿ ಈ ಕುರಿತು ಅರೇಬಿಕ್ ಭಾಷೆಯಲ್ಲಿ ಬರೆಯಲಾಗಿದೆ ಎನ್ನಲಾಗಿದ್ದು, ಅಲ್ಲದೇ ನಮ್ಮ ಟಾರ್ಗೆಟ್ ಕದ್ರಿ ಎಂದು ಐಆರ್ಸಿ ಹೇಳಿಕೊಂಡಿದೆ.
ಕದ್ರಿಯಲ್ಲಿರುವ ಆರ್ ಎಸ್ಎಸ್ ಕಚೇರಿ ಸಂಘ ನಿಕೇತನ ಸ್ಪೋಟಕ್ಕೆ ಶಾರೀಕ್ ಸಂಚು ರೂಪಿಸಿದ್ನಾ? ಅದ್ರಲ್ಲೂ ಆತ ಸೂಸೈಡ್ ಬಾಂಬರ್ ಆಗಿ ಆತ ಕೆಲಸ ಮಾಡಲು ಮುಂದಾಗಿದ್ನಾ ಅನ್ನೋ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೇಕಾಗಿದೆ. ಕರಾವಳಿಯ ಎಲ್ಲಾ ದೇಗುಲಗಳ ಮೇಲೂ ಕಣ್ಣಿಟ್ಟಿದ್ದ ಶಾರೀಕ್ ಕದ್ರಿ ಮಂಜುನಾಥ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಮಂಗಳಾದೇವಿ ದೇಗುಲಗಳಲ್ಲೂ ಮಾರಣಹೋಮದ ಸ್ಕೆಚ್ ಹಾಕಿದ್ದ ಎಂದು ಟಿವಿ ಮಾಧ್ಯಮಗಳು ವರದಿ ಮಾಡಿವೆ.
ಡಾರ್ಕ್ ವೆಬ್ ಮೂಲಕ Instagramನಲ್ಲಿ ಹೀಗೊಂದು ಪೋಸ್ಟ್ ಹಾಕಿರುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್, ತಾನೇ ಬಾಂಬ್ ಸ್ಫೋಟದ ವ್ಯವಸ್ಥೆ ಮಾಡಿದ್ದು ಎಂದಿದೆ. ಅಸಲಿಗೆ ಸ್ಫೋಟದ ಪ್ಲಾನ್ ಇದ್ದಿದ್ದು ಪಂಪ್ ವೆಲ್ ಅಥವಾ ಬೇರೆ ಸ್ಥಳಗಳು ಅಲ್ಲ, ಉಗ್ರ ಸಂಘಟನೆಯ ಟಾರ್ಗೆಟ್ ಆಗಿದ್ದು ಕದ್ರಿ ದೇವಸ್ಥಾನ ಎಂದು ಹೇಳಲಾಗಿದೆ. ಈ ವಿಚಾರವನ್ನು ಕೌನ್ಸಿಲ್ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.

ಅರೇಬಿಕ್ ಭಾಷೆಯಲ್ಲಿ ಹಾಕಲಾಗಿರುವ ಪೋಸ್ಟ್‌ನಲ್ಲಿ Majis Al muqawamat Al’Islamia ಎಂದು ಅರೇಬಿಕ್ ಭಾಷೆಯಲ್ಲಿ ಬರೆದುಕೊಂಡು ತಮ್ಮ ಟಾರ್ಗೆಟ್ ಕದ್ರಿ ಆಗಿತ್ತು ಎಂದಿದೆ.
ಈ ಹೊಸ ಮಾಹಿತಿಯ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ರಾಜ್ಯ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ.
ಈ ಪೋಸ್ಟ್ ಎಷ್ಟರಮಟ್ಟಿಗೆ ನಿಜ ಅನ್ನುವುದು ಸ್ಪಷ್ಟವಾಗಿಲ್ಲ. ಕೆಲವೊಮ್ಮೆ ಸಂಘಟನೆಗಳು ಪರಿಸ್ಥಿತಿಯ ಲಾಭ ಎತ್ತುವುದಕ್ಕಾಗಿ ಇಂಥ ಹೇಳಿಕೆಗಳನ್ನು ನೀಡುತ್ತವೆಯಾದರೂ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಸ್ಫೋಟದ ವೇಳೆ ಗಾಯಗೊಂಡಿದ್ದ ಶಂಕಿತ ಉಗ್ರ ಶಾರೀಕ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಿದ್ದು, ಪೊಲೀಸರಿಗಾಗಲಿ, ತನಿಖಾ ಸಂಸ್ಥೆಗಳಿಗಾಗಲಿ ಆತನನ್ನು ವಿಚಾರಣೆಗೆ ಒಳಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಪೊಲೀಸರು ಈಗಾಗಲೇ ಶಾರೀಖ್ ಗೆ ಸಹಕಾರ ನೀಡುತ್ತಿದ್ದವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಾಗಿದೆ. ಈ ನಡುವಲ್ಲೇ ಡಾರ್ಕ್ ವೆಬ್ ನಲ್ಲಿ ಮಂಗಳೂರು ಸ್ಪೋಟಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ಇದೀಗ ಲಭ್ಯವಾಗಿದೆ.

ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಈಗಾಗಲೇ ಡಾರ್ಕ್ ವೆಬ್ ನಲ್ಲಿ ಮಂಗಳೂರು ಸ್ಪೋಟಕ್ಕೆ ಸಂಬಂಧಿಸಿದಂತೆ ಅರೇಬಿಕ್ ಮಾಹಿತಿಯನ್ನು ಹಂಚಿಕೊಂಡಿದೆ ಎನ್ನಲಾಗುತ್ತಿದೆ. ಅಲ್ಲದೇ ನಮ್ಮ ಟಾರ್ಗೆಟ್ ಆಗಿರುವುದು ಕದ್ರಿ ದೇವಾಲಯ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಉಗ್ರರು ದೇವಾಲಯಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದಾರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಸಂಘಟನೆಯ ಕುರಿತು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಇನ್ನೊಂದೆಡೆಯಲ್ಲಿ ಪೊಲೀಸರು ಕೂಡ ಈ ಮಾಹಿತಿಯನ್ನು ಇನ್ನೂ ಖಚಿತ ಪಡಿಸಿಲ್ಲ.
ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಮಾಡಿರುವ ಪೋಸ್ಟ್ ಕುರಿತು ರಾಷ್ಟ್ರೀಯ ತನಿಖಾ ದಳ ಹಾಗೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು ಕೂಡ ಈ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಧರ್ಮದ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪ, ಹಿಂದೂ ಸಂಘಟನೆಗಳ ನಿಲುವು ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಉಗ್ರರು ಟಾರ್ಗೆಟ್ ಮಾಡಿದ್ದಾರೆ ಎನ್ನುವ ಕುರಿತು ವರದಿಯಾಗುತ್ತಿದೆ.

ಇನ್ನು ಡಾರ್ಕ್ ವೆಬ್ ನಲ್ಲಿ ಐಆರ್ ಸಿ ಮಾಡಿರುವ ಪೋಸ್ಟ್ ನಲ್ಲಿ ಕೇವಲ ಕದ್ರಿ ಟಾರ್ಗೆಟ್ ವಿಚಾರವನ್ನು ಮಾತ್ರವಲ್ಲದೇ ಪೊಲೀಸರಿಗೂ ಕೂಡ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಸಂತೋಷ ಅಲ್ಪಕಾಲ, ನಿಮ್ಮ ದಬ್ಬಾಳಿಕೆಯ ಕಾನೂನನ್ನು ಸಹಿಸಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಬರೆಯಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಪೋಲಿಸರ ತನಿಖೆಯ ಬಳಿಕವಷ್ಟೇ ಪ್ರಕರಣದ ಸಂಪೂರ್ಣ ಮಾಹಿತಿ ಹೊರಬೀಳಲಿದೆ