ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ನ.20ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ ಇರುವುದರಿಂದ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಶ್ರೀ ದೇವರ ದರ್ಶನ ಹಾಗೂ ಸೇವೆ ನೆರವೇರಿಸಲು ಅವಕಾಶವಿರುವುದಿಲ್ಲ.
ಮಧ್ಯಾಹ್ನ 2ಗಂಟೆಯ ಬಳಿಕ ಭಕ್ತರಿಗೆ ಶ್ರೀದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚೌತಿಯ ದಿನವಾದ ನ.27ರಂದು ಮತ್ತು ಪಂಚಮಿ ದಿನವಾದ ನ.27ರಂದು ಮತ್ತು ಪಂಚಮಿಯ ದಿನವಾದ ನ.28ರಂದು ಭಕ್ತಾದಿಗಳ ಪ್ರಾರ್ಥನೆ ಸೇವೆ ರಾತ್ರಿ ಹೊತ್ತಿನಲ್ಲಿ ಇರುವುದಿಲ್ಲ.
ಷಷ್ಠಿ ದಿನವಾದ ನ.29ರಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ಇರುವುದಿಲ್ಲ. ಅಲ್ಲದೆ ನ.29ರಂದು ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ.
ನ.23ರ ಲಕ್ಷದೀಪೋತ್ಸವದಂದು ಮತ್ತು ಚೌತಿ, ಪಂಚಮಿ, ಷಷ್ಠಿ ದಿನದಲ್ಲಿ ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ.
ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಪ್ರಯುಕ್ತ ನ.21ರಿಂದ ಡಿ.5ರವರೆಗೆ ಸಂಜೆ ವೇಳೆ ನಡೆಯುವ ಆಶ್ಲೇಷ ಬಲಿ ಸೇವೆ ಇರುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.