1. Home
  2. Mangaluru
  3. ಕಂಬಳ ಕ್ಷೇತ್ರದ ಅಪ್ರತಿಮ ‘ಧಣಿ’ ಬಾಡ ಪೂಜಾರಿ ಇನ್ನಿಲ್ಲ – ಧಣಿಗಳನ್ನು ಕಳೆದುಕೊಂಡು ಅನಾಥವಾದ ‘ತಾಟೆ’ ‘ಬೊಟ್ಟಿಯಾರ್’!

ಕಂಬಳ ಕ್ಷೇತ್ರದ ಅಪ್ರತಿಮ ‘ಧಣಿ’ ಬಾಡ ಪೂಜಾರಿ ಇನ್ನಿಲ್ಲ – ಧಣಿಗಳನ್ನು ಕಳೆದುಕೊಂಡು ಅನಾಥವಾದ ‘ತಾಟೆ’ ‘ಬೊಟ್ಟಿಯಾರ್’!

ಕಂಬಳ ಕ್ಷೇತ್ರದ ಅಪ್ರತಿಮ ‘ಧಣಿ’ ಬಾಡ ಪೂಜಾರಿ ಇನ್ನಿಲ್ಲ – ಧಣಿಗಳನ್ನು ಕಳೆದುಕೊಂಡು ಅನಾಥವಾದ ‘ತಾಟೆ’ ‘ಬೊಟ್ಟಿಯಾರ್’!
0

ನ್ಯೂಸ್‌ ಆ್ಯರೋ : ಕಂಬಳ ಕ್ಷೇತ್ರದ ಲೆಜೆಂಡ್ ಇರುವೈಲ್ ಪಾಣಿಲದ ಯಜಮಾನ ಬಾಡ ಪೂಜಾರಿ ಯವರು (ಅ.11) ರಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 82 ವರ್ಷ ವಯಸಾಗಿತ್ತು.
ಕಂಬಳ ಕ್ಷೇತ್ರದಲ್ಲಿ ಬಾಡ ಪೂಜಾರಿಯವರ ಹೆಸರು ಕೇಳದ ಕಂಬಳಾಭಿಮಾನಿಗಳು ಇಲ್ಲವೆಂದೇ ಹೇಳಬಹುದು. ಪ್ರಗತಿ ಪರ ಕೃಷಿಕರೂ ಆಗಿದ್ದ ಇವರು ಸುಮಾರು 23 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

ಇವರ ತಾಟೆ ಮತ್ತು ಬೊಟ್ಟಿಯಾರ್ ಎಂಬ ಕೋಣಗಳು ಕಂಬಳ ಕ್ಷೇತ್ರದಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ಇವರ ಕೋಣಗಳು ನೇಗಿಲು ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಕಂಬಳದ ಮೆಡಲ್ ಗಳನ್ನು ಪಡೆದಿದೆ.

ಕಂಬಳ ಕ್ಷೇತ್ರಕ್ಕೆ ಕಳೆದ 23 ವರ್ಷಗಳಲ್ಲಿ ಬಾಡ ಪೂಜಾರಿ ಯವರು ನೀಡಿದ ಕೊಡುಗೆಗಳು ಅವಿಸ್ಮರಣೀಯ. ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ ಗೌಡ, ಕ್ರೀಡಾರತ್ನ ಪುರಸ್ಕೃತ ಆನಂದ ಸೇರಿದಂತೆ ಅನೇಕ ಪ್ರತಿಭೆಗಳನ್ನು ಕಂಬಳ ಕ್ಷೇತ್ರಕ್ಕೆ ಪರಿಚಯಿಸಿದ ಹಿರಿಮೆ ಬಾಡ ಪೂಜಾರಿಯವರಿಗೆ ಸಲ್ಲಬೇಕು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..