1. Home
  2. Mangaluru
  3. ಕಾಫೀನಾಡಲ್ಲಿ ಲವ್ ಜಿಹಾದ್ : Instagram ಪರಿಚಯ, ಲವ್ ಸೆಕ್ಸ್ ಧೋಖಾ – ಕಾರ್ಕಳದ ಕಾಲೇಜೊಂದರ ಹುಡುಗಿಗೆ ಪ್ರೀತಿ ನೆಪದಲ್ಲಿ ಕಾಡಿದ ಪಾಪಿ ಮಹಮ್ಮದ್ ರೋಫ್

ಕಾಫೀನಾಡಲ್ಲಿ ಲವ್ ಜಿಹಾದ್ : Instagram ಪರಿಚಯ, ಲವ್ ಸೆಕ್ಸ್ ಧೋಖಾ – ಕಾರ್ಕಳದ ಕಾಲೇಜೊಂದರ ಹುಡುಗಿಗೆ ಪ್ರೀತಿ ನೆಪದಲ್ಲಿ ಕಾಡಿದ ಪಾಪಿ ಮಹಮ್ಮದ್ ರೋಫ್

ಕಾಫೀನಾಡಲ್ಲಿ ಲವ್ ಜಿಹಾದ್ : Instagram ಪರಿಚಯ, ಲವ್ ಸೆಕ್ಸ್ ಧೋಖಾ – ಕಾರ್ಕಳದ ಕಾಲೇಜೊಂದರ ಹುಡುಗಿಗೆ ಪ್ರೀತಿ ನೆಪದಲ್ಲಿ ಕಾಡಿದ ಪಾಪಿ ಮಹಮ್ಮದ್ ರೋಫ್
0

ನ್ಯೂಸ್ ಆ್ಯರೋ : ಕಳೆದೆರೆಡು ದಿನದ ಹಿಂದಷ್ಟೇ ಕಾಫೀನಾಡಲ್ಲಿ ಸದ್ದು ಮಾಡಿದ್ದ ಕೊಪ್ಪ ಮೂಲದ ಲವ್ ಜಿಹಾದ್ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸ್ವತಃ ಯುವತಿಯೇ ಈಗ ಆರೋಪಿ ಮೊಹಮ್ಮದ್ ರೋಫ್ ವಿರುದ್ಧ ಠಾಣೆ ಮೆಟ್ಟಿಲೇರಿದ್ದು, ರೋಫ್ ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರಿದ್ದಾಳೆ.

ಮೊಹಮ್ಮದ್ ನ ಸೆಂಟಿಗೆ ಮರುಳಾದ್ಲು ಯುವತಿ, ಸಲುಗೆಯ ಫೋಟೋನೇ ಮುಳುವಾಯ್ತು ಈಗ!

ಕಾರ್ಕಳದ ಕಾಲೇಜೊಂದರಲ್ಲಿ ತೃತೀಯ ಬಿ.ಕಾಂ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿಗೆ ಕಳೆದೆರೆಡು ವರ್ಷದ ಹಿಂದೆ Instagram ನಲ್ಲಿ ರೋಫ್ ನ ಪರಿಚಯವಾಗುತ್ತದೆ. ಮೊಹಮ್ಮದ್ ನ ಗಮ್ಮೆನ್ನುವ ಸೆಂಟಿಗೆ ಮನಸೋತ ಯುವತಿ ಪ್ರೀತಿಯಲ್ಲಿ ಬಲೆಗೆ ಬಿದ್ದಿದ್ಲು.

ಇದಾದ ಬಳಿಕ ಮನೆಯವರೆಗೂ ವಿಷಯ ಗೊತ್ತಾಗಿ ಯುವತಿಗೆ ತಿಳಿ ಹೇಳಿದ್ರು, ಎಲ್ಲಾ ಸೈಲೆಂಟಾಯ್ತು ಅನ್ನುವಷ್ಟರಲ್ಲೇ ಮೊಹಮ್ಮದ್ ರೋಫ್ ತನ್ನ ನಿಜ ಬಣ್ಣ ತೋರಿಸಿಬಿಟ್ಟಿದ್ದಾನೆ.

ತನ್ನೊಟ್ಟಿಗೆ ಯುವತಿ ಸಲುಗೆಯಿಂದ ತೆಗೆಸಿಕೊಂಡಿದ್ದ ಫೋಟೋವನ್ನು Instagram ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಯುವತಿಗೆ ಹಿಂಸೆ ನೀಡ್ತಿದ್ದಾನೆ.

ದೂರು ಕೊಟ್ರೂ ಕ್ರಮ ಕೈಗೊಳ್ತಿಲ್ಲ Inspector ನಾಸೀರ್ ಹುಸೇನ್, ಸೆನ್ ಪೊಲೀಸ್ ವಿರುದ್ಧ ಎಸ್ಪಿಗೆ ದೂರು..!!

ಈ ಕುರಿತು ಆಕೆಯ ಅಣ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿ 20 ದಿನವಾದ್ರೂ ಆರೋಪಿ ವಿರುದ್ಧ ಕ್ರಮ ಕೈಗೊಳ್ಳೋಕೆ ಸೆನ್ ಠಾಣೆಯ Inspector ನಾಸೀರ್ ಹುಸೇನ್ ಹಿಂದೇಟು ಹಾಕ್ತಿದ್ದಾರೆ ಎಂದು ಯುವತಿಯ ಸಹೋದರ ಚಿಕ್ಕಮಗಳೂರು ಎಸ್ಪಿಗೆ ದೂರು ನೀಡಿದ್ರು. ಇಷ್ಟೆಲ್ಲ ಆದ ಬಳಿಕ ಈಗ ಸ್ವತಃ ಯುವತಿಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಲವ್ ಜಿಹಾದ್ ಎಂದು ಯುವತಿಯ ಆರೋಪ, ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟದ ಎಚ್ಚರಿಕೆ

ರೋಫ್ ಹಾಗೂ ಆತನ ಗೆಳೆಯರಾದ ಇರ್ಫಾನ್, ಸೈಫ್ ನನಗೆ ಚಾಕು ತೋರಿಸಿ ಬೆದರಿಸಿ ಅಮಲು ಬರುವ ಜ್ಯೂಸ್ ನೀಡಿ ಫೋಟೋ ಹಾಗು ವೀಡಿಯೋ ಮಾಡಿಕೊಂಡು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದ್ದಾಳೆ. ಇನ್ನು ದೂರು ದಾಖಲಾಗ್ತಿದ್ದಂತೆ ಲವ್ ಜಿಹಾದ್ ಆರೋಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದುಬೈನಲ್ಲಿರೋ ಆರೋಪಿ ಮೊಹಮ್ಮದ್‌ ರೋಫ್ ನನ್ನು ಬಂಧಿಸುವಂತೆ ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ಆಗ್ರಹಿಸಿದ್ದು ಪ್ರತಿಭಟನೆಗೆ ಕರೆ ನೀಡಿವೆ. ಇನ್ನಾದ್ರೂ ಪೊಲೀಸ್ರು ಎಚ್ಚೆತ್ತುಕೊಂಡು ಕ್ರಿಮಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಬೇಕಿದೆ.