1. Home
  2. Mangaluru
  3. ಮಂಗಳೂರು ‌: ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮುನ್ನ ಮಹಿಳೆಯರ ಜೊತೆ‌ ಹೋಂ ಸ್ಟೇನಲ್ಲಿ ಉಳಿದಿದ್ದ ಶಾರೀಕ್ – ಡಾಲರ್ ರೂಪದಲ್ಲಿ ಖಾತೆಗೆ ಹಣ ಜಮೆ, ಬಾಂಬ್ ಸ್ಫೋಟದ ಹಿಂದಿದ್ದಾರೆ 11 ಮಂದಿ…!!

ಮಂಗಳೂರು ‌: ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮುನ್ನ ಮಹಿಳೆಯರ ಜೊತೆ‌ ಹೋಂ ಸ್ಟೇನಲ್ಲಿ ಉಳಿದಿದ್ದ ಶಾರೀಕ್ – ಡಾಲರ್ ರೂಪದಲ್ಲಿ ಖಾತೆಗೆ ಹಣ ಜಮೆ, ಬಾಂಬ್ ಸ್ಫೋಟದ ಹಿಂದಿದ್ದಾರೆ 11 ಮಂದಿ…!!

ಮಂಗಳೂರು ‌: ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮುನ್ನ ಮಹಿಳೆಯರ ಜೊತೆ‌ ಹೋಂ ಸ್ಟೇನಲ್ಲಿ ಉಳಿದಿದ್ದ ಶಾರೀಕ್ – ಡಾಲರ್ ರೂಪದಲ್ಲಿ ಖಾತೆಗೆ ಹಣ ಜಮೆ, ಬಾಂಬ್ ಸ್ಫೋಟದ ಹಿಂದಿದ್ದಾರೆ 11 ಮಂದಿ…!!
0

ನ್ಯೂಸ್ ಆ್ಯರೋ‌ : ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇದೀಗ ಪ್ರಕರಣ ಕುರಿತು ಸ್ಪೋಟಕ ಮಾಹಿತಿ ಲಭ್ಯವಾಗಿದೆ.

ಬಾಂಬ್ ಸ್ಪೋಟಕ್ಕೂ ಮುನ್ನ ಶಾರೀಕ್ ಕೊಡಗು ಜಿಲ್ಲೆಯ ಹೋಂಸ್ಟೇಗೆ ಇಬ್ಬರು ಮಹಿಳೆಯರು ಸೇರಿ 11 ಮಂದಿ ಜೊತೆ ಬಂದು ಹೋಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಸಮೀಪದ‌ ನೆಮ್ಮಲೆ ಗ್ರಾಮದಲ್ಲಿರುವ ಓಟೆಕಾಡ್‌ ಹೋಂ ಸ್ಟೇನಲ್ಲಿ ಉಗ್ರರು ತಂಗಿದ್ದರು ಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಹೋಂ ಸ್ಟೇ ಮೇಲೆ ಎನ್‌ಐಎ ಅಧಿಕಾರಿಗಳು ಮತ್ತು ಮಂಗಳೂರು‌ ಪೊಲೀಸರು ದಾಳಿ ನಡೆಸಿದ್ದಾರೆ.

ಕುಕ್ಕರ್‌ ಬಾಂಬ್‌ ಸ್ಫೋಟದ ಹಿಂದೆ ಕೆಲಸ ಮಾಡಿದ್ದ ಸುಮಾರು 11 ಮಂದಿ ಆರೋಪಿಗಳು ಈ ಹೋಮ್‌ ಸ್ಟೇನಲ್ಲಿ ಕೆಲವು ದಿನ ತಂಗಿದ್ದರು ಎಂದು ಹೇಳಲಾಗಿದೆ.

ಓಟೆಕಾಡ್‌ ಹೋಂ ಸ್ಟೇ ಪ್ರಧಾನ ರಸ್ತೆಯಿಂದ ಕೆಲವು ಕಿಲೋಮೀಟರ್‌ಗಳಷ್ಟು ದೂರವಿದೆ. ಇದು ಕಾಡಿನ ಒಳಗಿರುವ ಪ್ರದೇಶವಾಗಿದ್ದು, ಹೊರಗಿನವರು ಭೇಟಿ ನೀಡುವ ಅವಕಾಶಗಳು ಇರುವುದಿಲ್ಲ. ಹೋಮ್‌ಸ್ಟೇಗೆ ಬುಕ್‌ ಮಾಡಿಕೊಂಡವರು ಮಾತ್ರ ಬರುತ್ತಾರೆ. ಹೀಗಾಗಿ ಇದನ್ನು ತಮ್ಮ ಚರ್ಚೆಯ ಸುರಕ್ಷಿತ ತಾಣವಾಗಿ ಆರೋಪಿಗಳು ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ.

ಎನ್‌ಐಎ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಹೋಂಸ್ಟೇ ಮಾಲೀಕನ ವಿಚಾರಣೆ ನಡೆಸಿದ್ದಾರೆ. ಇದು ಶ್ರೀಮಂಗಲ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುವ ಪ್ರದೇಶವಾಗಿದೆ.
ಶಿವಮೊಗ್ಗದ ತೀರ್ಥಹಳ್ಳಿಯ ಸೊಪ್ಪಿನಗುಡ್ಡೆಯ ನಿವಾಸಿಯಾಗಿರುವ ಮೊಹಮ್ಮದ್‌ ಶಾರಿಕ್‌ ಮೈಸೂರಿನಲ್ಲಿ ಒಂಟಿಯಾಗಿ ವಾಸವಾಗಿದ್ದ ಎನ್ನಲಾಗಿತ್ತು. ಒಬ್ಬನೇ ಮಂಗಳೂರಿಗೆ ಬಂದಿದ್ದ ಎಂಬ ಮಾಹಿತಿಯೂ ಇತ್ತು. ಹಾಗಿದ್ದರೆ ಈ 11 ಮಂದಿ ಯಾರಿರಬಹುದು? ಅವರು ಈ ಕೃತ್ಯದಲ್ಲಿ ಹೊಂದಿರುವ ಪಾತ್ರವೇನು ಎನ್ನುವುದನ್ನು ಪೊಲೀಸರ ತನಿಖೆ ಮೂಲಕ ಪತ್ತೆ ಹಚ್ಚಬೇಕಾಗಿದೆ.

ಶಾರಿಕ್‌ಗೆ ಆತನದೇ ಊರಿನವನಾದ ಉಗ್ರ ಮತೀನ್‌ನ ಬೆಂಬಲವಿತ್ತು ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಆತನ ಬೆಂಬಲದಿಂದಲೇ ಆತ ಬಾಂಬ್‌ ತಯಾರಿಕೆಗೆ ಮುಂದಾಗಿ ಟ್ರಯಲ್‌ ಬ್ಲಾಸ್ಟನ್ನು ಕೂಡಾ ನದಿ ತೀರಗಳಲ್ಲಿ ನಡೆಸಿದ್ದ. ಮೈಸೂರಿನಲ್ಲಿ ಒಂಟಿಯಾಗಿದ್ದರೂ ಆತನ ಸುತ್ತ ಒಂದು ಉಗ್ರರ ಕೂಟವೇ ಸುತ್ತುವರಿದಿತ್ತು ಎನ್ನುವುದು ಸ್ಪಷ್ಟವಾಗಿದೆ. ಇದೀಗ ಹೋಮ್‌ ಸ್ಟೇನಲ್ಲಿನ ಸಿಸಿ ಟಿವಿ ಫೂಟೇಜ್‌, ಅಲ್ಲಿ ಕೊಟ್ಟಿರುವ ಮಾಹಿತಿ ಮತ್ತು ಫೋಟೊಗಳ ಆಧಾರದಲ್ಲಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಶಂಕಿತ ಉಗ್ರ ಶಾರೀಕ್ ನ ತನಿಖೆ ಮುಂದುವರಿಸಿದ ಎನ್‌ಐಎ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳು ಸಿಗುತ್ತಿದ್ದು, ಶಾರಿಕ್ ಹಣದ ಮೂಲ ಜಾಲಾಡಿದ ಅಧಿಕಾರಿಗಳಿಗೆ ಶಾಕ್ ಆಗಿದ್ದು, ಹೆಚ್ಚಿನ ಹಣ ಡಾಲರ್ ಮೂಲಕ ಶಾರಿಕ್ ಅಕೌಂಟ್ಗೆ ಬರುತ್ತಿದ್ದ ದಾಖಲೆ ಸಿಕ್ಕಿದೆ.

ಶಾರಿಕ್ ಉಗ್ರ ಕೃತ್ಯಕ್ಕೆ ವಿದೇಶದಿಂದ ಸಹಕಾರ ಮಾಡುತ್ತಿದ್ದವರು ಡಾಲರ್ ಮೂಲಕ ಆರ್ಥಿಕ ಸಹಾಯ ನೀಡುತ್ತಿರುವ ಬಗ್ಗೆ ಎನ್‌ಐಎ ಅಧಿಕಾರಿಗಳಿಗೆ ದಾಖಲೆಗಳು ಸಿಕ್ಕಿವೆ. ಡಾರ್ಕ್ ವೆಬ್ ನಲ್ಲಿರುವ ಅಕೌಂಟ್ ಗೆ ಡಾಲರ್ ನಲ್ಲಿ ಹಣ ಬಂದಿರೋ ದಾಖಲೆ ಲಭ್ಯವಾಗಿದ್ದು, ಎನ್ ಐಎ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..