1. Home
  2. Mangaluru
  3. Mangalore bomb blast : ಅಲ್ ಖೈದಾ, ಐಸಿಸ್ ನ ವಿಡಿಯೋಗಳನ್ನು ಸಹಚರರಿಗೆ ಶೇರ್ ಮಾಡುತ್ತಿದ್ದ ಶಾರೀಕ್ – ಮೊಬೈಲ್ ನಲ್ಲಿತ್ತು ಅಶ್ಲೀಲ ವಿಡಿಯೋಗಳ ರಾಶಿ, ಕಾಫಿರರ ವಿರುದ್ಧ ಜಿಹಾದ್ ನಡೆಸುವ ಪ್ಲಾನ್ ಹಾಕಿದ್ದ ಶಂಕಿತ ಉಗ್ರ…!!

Mangalore bomb blast : ಅಲ್ ಖೈದಾ, ಐಸಿಸ್ ನ ವಿಡಿಯೋಗಳನ್ನು ಸಹಚರರಿಗೆ ಶೇರ್ ಮಾಡುತ್ತಿದ್ದ ಶಾರೀಕ್ – ಮೊಬೈಲ್ ನಲ್ಲಿತ್ತು ಅಶ್ಲೀಲ ವಿಡಿಯೋಗಳ ರಾಶಿ, ಕಾಫಿರರ ವಿರುದ್ಧ ಜಿಹಾದ್ ನಡೆಸುವ ಪ್ಲಾನ್ ಹಾಕಿದ್ದ ಶಂಕಿತ ಉಗ್ರ…!!

Mangalore bomb blast : ಅಲ್ ಖೈದಾ, ಐಸಿಸ್ ನ ವಿಡಿಯೋಗಳನ್ನು ಸಹಚರರಿಗೆ ಶೇರ್ ಮಾಡುತ್ತಿದ್ದ ಶಾರೀಕ್ – ಮೊಬೈಲ್ ನಲ್ಲಿತ್ತು ಅಶ್ಲೀಲ ವಿಡಿಯೋಗಳ ರಾಶಿ, ಕಾಫಿರರ ವಿರುದ್ಧ ಜಿಹಾದ್ ನಡೆಸುವ ಪ್ಲಾನ್ ಹಾಕಿದ್ದ ಶಂಕಿತ ಉಗ್ರ…!!
0

ನ್ಯೂಸ್ ಆ್ಯರೋ : ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಅಲ್ ಖೈದಾದಿಂದ ಪ್ರೇರಿತನಾಗಿ ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಮಾಜ್ ಮುನೀರ್ ಅಹಮದ್ ಮತ್ತು ಸಯ್ಯದ್ ಯಾಸಿನ್ ಜತೆ ಉಗ್ರ ಸಂಘಟನೆಗಳ ವಿಡಿಯೋಗಳನ್ನು ಹಂಚಿಕೊಂಡಿರುವುದು ಪೋಲಿಸರ ತನಿಖೆಯಲ್ಲಿ ಬಯಲಾಗಿದೆ.

ಶಾರೀಕ್‌ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳು ಸಿಕ್ಕಿವೆ. ಅಲ್ಲದೇ 55 ಜಿಬಿಯಷ್ಟು ಅಫ್ಘಾನಿಸ್ತಾನದ ಯುದ್ಧ ಹಾಗೂ ಅಲ್-ಖೈದಾ ಮತ್ತು ಐಸಿಸ್ ಭಾಷಣಗಳ ವೀಡಿಯೊಗಳು ಸಿಕ್ಕಿವೆ. ಆ ಎಲ್ಲ ವಿಡಿಯೋಗಳನ್ನು ಉರ್ದುಗೆ ಅನುವಾದಿಸಲಾಗಿದೆ.

ಯಾಸಿನ್‌ಗೆ ಈ ವಿಡಿಯೋಗಳನ್ನು ಟೆಲಿಗ್ರಾಮ್, ಸಿಗ್ನಲ್, ಇನ್‌ಸ್ಟಾಗ್ರಾಮ್, ವೈರ್, ಎಲಿಮೆಂಟ್ ಇತ್ಯಾದಿಗಳ ಮೂಲಕ ಕಳುಹಿಸುತ್ತಿದ್ದ. ಉಗ್ರವಾದ, ಮೂಲಭೂತವಾದ, ಐಸಿಸ್ ಮತ್ತು ಇತರ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಪಿಡಿಎಫ್ ಫೈಲ್‌ಗಳು, ವೀಡಿಯೊಗಳು, ಆಡಿಯೊಗಳು ಮತ್ತು ಲಿಂಕ್‌ಗಳನ್ನು ಯಾಸಿನ್‌ಗೆ ಕಳುಹಿಸಿ ಆತನ ಬ್ರೈನ್ ವಾಶ್ ಮಾಡಿರುವುದಾಗಿ ತಿಳಿದುಬಂದಿದೆ.

ಬಂಧಿತ ಮತ್ತಿಬ್ಬರು ಆರೋಪಿಗಳಾದ ಮಾಜ್ ಮುನೀರ್ ಅಹಮದ್ ಮತ್ತು ಸಯ್ಯದ್ ಯಾಸಿನ್ ಶಿವಮೊಗ್ಗದಲ್ಲಿ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗಳಾಗಿದ್ದಾರೆ. ಈ ಮೂವರು ಆರೋಪಿಗಳು ಐಸಿಸ್‌ನ ಅಧಿಕೃತ ಮಾಧ್ಯಮ ಕೇಂದ್ರ ಅಲ್-ಹಯಾತ್ ಟೆಲಿಗ್ರಾಮ್‌ನಲ್ಲಿ ನಡೆಸುತ್ತಿರುವ ಚಾನೆಲ್‌ಗಳ ಸದಸ್ಯರಾಗಿದ್ದಾರೆ. ಮೂಲಗಳ ಪ್ರಕಾರ ಶಾರಿಕ್ ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದ ಎಂದು ತಿಳಿಸಿದೆ.

ಶಾರಿಕ್ ಮತ್ತು ಅವರ ಸಹಚರರು ‘ಖಲಿಫೇಟ್’ ಸ್ಥಾಪಿಸಲು ಮತ್ತು ಷರಿಯಾ ಕಾನೂನನ್ನು ಹೇರಲು ಬಯಸಿದ್ದರು ಎಂದು ಹೇಳಲಾಗುತ್ತಿದೆ. “ಕಾಫಿರರ” ವಿರುದ್ಧ ಅವರು ‘ಜಿಹಾದ್’ ನಡೆಸಬೇಕೆಂದು ಶಾರಿಕ್ ಬಯಸಿದ್ದ. ಇದರೊಂದಿಗೆ ತಮ್ಮ ಸಹಚರರೊಂದಿಗೆ ಬಾಂಬ್ ತಯಾರಿಕೆಯ ಪಿಡಿಎಫ್‌ಗಳನ್ನು ಹಂಚಿಕೊಳ್ಳುತ್ತಿದ್ದರು ಮತ್ತು ಶಿವಮೊಗ್ಗದಲ್ಲಿ ಪ್ರಾಯೋಗಿಕ ಸ್ಫೋಟದ ಮೊದಲು ಆನ್‌ಲೈನ್‌ನಲ್ಲಿ ಟೈಮರ್-ರಿಲೇ ಸರ್ಕ್ಯೂಟ್‌ಗಳನ್ನು ಕೂಡ ಖರೀದಿಸಿದ್ದ ಎಂದು ವರದಿಗಳು ತಿಳಿಸಿವೆ.

ಇನ್ನೂ ಈ ಖತರ್ನಾಕ್ ತಂಡ ಮಂಗಳೂರು ಸ್ಫೋಟಕ್ಕೂ ಮುನ್ನಾ ಅವರು ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..