1. Home
  2. Mangaluru
  3. ಮಂಗಳೂರು ಸ್ಫೋಟ ಪ್ರಕರಣ ; ಆರೋಪಿ ಮನೆಯಲ್ಲಿ ಭಾರೀ ಸ್ಫೋಟಕ ಪತ್ತೆ, ಉಗ್ರರ ನಂಟಿನ ಕುರಿತು ತನಿಖೆ ಚುರುಕು : ನಾಲ್ವರ ಬಂಧನ

ಮಂಗಳೂರು ಸ್ಫೋಟ ಪ್ರಕರಣ ; ಆರೋಪಿ ಮನೆಯಲ್ಲಿ ಭಾರೀ ಸ್ಫೋಟಕ ಪತ್ತೆ, ಉಗ್ರರ ನಂಟಿನ ಕುರಿತು ತನಿಖೆ ಚುರುಕು : ನಾಲ್ವರ ಬಂಧನ

ಮಂಗಳೂರು ಸ್ಫೋಟ ಪ್ರಕರಣ ; ಆರೋಪಿ ಮನೆಯಲ್ಲಿ ಭಾರೀ ಸ್ಫೋಟಕ ಪತ್ತೆ, ಉಗ್ರರ ನಂಟಿನ ಕುರಿತು ತನಿಖೆ ಚುರುಕು : ನಾಲ್ವರ ಬಂಧನ
0

ನ್ಯೂಸ್ ಆ್ಯರೋ : ಮಂಗಳೂರು ಸ್ಫೋಟ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಆರೋಪಿಯ ಮನೆಯಲ್ಲಿ ಸಲ್ಫೆಕ್ಸ್ ಪೌಡರ್, ಮ್ಯಾಚ್‌ಬಾಕ್ಸ್‌, ಬ್ಯಾಟರಿ, ನಟ್ ಬೋಲ್ಟ್‌ಗಳು ಸೇರಿದಂತೆ ಸ್ಫೋಟಕ್ಕೆ ಬಳಸುವ ಕೆಮಿಕಲ್ಸ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ತನಿಖಾಧಿಕಾರಿಯನ್ನಾಗಿ ಮಂಗಳೂರು ಕೇಂದ್ರ ವಿಭಾಗದ ಎಸಿಪಿ ಪರಮೇಶ್ವರ ಹೆಗಡೆ ಅವರಿಗೆ ವಹಿಸಲಾಗಿದ್ದು, ಇಂದು ಮುಂಜಾನೆ ಶಿವಮೊಗ್ಗದ ನಾಲ್ಕು ಕಡೆ, ಮೈಸೂರಿನ ಎರಡು ಕಡೆ ಹಾಗೂ ರಾಜ್ಯದ 7 ಕಡೆಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ಮಾಡಲಾಗಿದೆ.

ಇಂದು ವಿಚಾರಣೆ ವೇಳೆ ಮಲತಾಯಿ ಶಬಾನಾ, ಸೋದರಿ ಆತಿಯಾ, ತಾಯಿಯ ತಂಗಿ ಯಾಸ್ಮಿನ್ ಅವರು ಈತನೇ ಶಾರೀಕ್ ಎಂಬುದನ್ನು ಒಪ್ಪಿಕೊಂಡಿರುವುದು ಖಚಿತವಾಗಿದೆ.

ಪ್ರಕರಣದ ಹಿನ್ನೆಲೆ:
ನವೆಂಬರ್ 19ರಂದು ಸಂಜೆ 4.40ರಲ್ಲಿ ಸುಮಾರಿಗೆ ನಾಗೂರಿಯಿಂದ ಪಂಪ್‌ವೆಲ್‌ಗೆ ಪ್ರಯಾಣಿಕರೊಬ್ಬರನ್ನು ಕುಳ್ಳಿರಿಸಿಕೊಂಡು ಸಾಗುತ್ತಿದ್ದ ರಿಕ್ಷಾದಲ್ಲಿ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಪ್ರಯಾಣಿಕ, ಆಟೋ ಚಾಲಕನಿಗೆ ಗಾಯಗಳಾಗಿವೆ.

ಇನ್ನೂ ಸ್ಫೋಟಕ ಹಿಡಿದುಕೊಂಡು ಪ್ರಯಾಣಿಸುತ್ತಿದ್ದ ಆರೋಪಿ ಬಳಿ ಪ್ರೇಮರಾಜ್​ ಎಂಬ ಹೆಸರಿನ ಐಡಿ ಸಿಕ್ಕಿತ್ತು. ಈ ಆರೋಪಿಯು ಮೈಸೂರಿನಿಂದ ಮಂಗಳೂರಿಗೆ ಬಂದಿದ್ದು, ನಕಲಿ ಆಧಾರ್‌ ಕಾರ್ಡ್‌ನ್ನು ಬಳಸುತ್ತಿದ್ದ. ಈಗಾಗಲೇ ಈತನ ವಿರುದ್ಧ ಮಂಗಳೂರಿನ ಪೂರ್ವ ಮತ್ತು ಉತ್ತರ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಾಗುರಿಯಲ್ಲಿ ಇಳಿದು ರಿಕ್ಷಾದ ಮುಖಾಂತರ ಟಾರ್ಗೆಟ್ ಜಾಗಕ್ಕೆ ತೆರಳುತ್ತಿದ್ದಾಗ ಜಂಪ್‌ನಲ್ಲಿ ಬಾಂಬ್ ಸ್ಟೋಟಗೊಂಡಿದೆ. ಆದರೆ, ಈತನ ಟಾರ್ಗೆಟ್ ಜಾಗ ಯಾವುದಾಗಿತ್ತು ಎಂಬುದು ಇನ್ನೂ ತನಿಖೆಯಲ್ಲಿ ತಿಳಿದುಬರಬೇಕಿದೆ.

ವಾರಕ್ಕೂ ಮುನ್ನಾ ಮಂಗಳೂರಿಗೆ ಬಂದಿದ್ದ ಆರೋಪಿ:
ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ವಾರದ ಹಿಂದೆ ಒಮ್ಮೆ ಮಂಗಳೂರಿಗೆ ಬಂದು ಸುತ್ತಾಡಿ ಹೋಗಿದ್ದಾನೆ. ಮೈಸೂರಿನಿಂದ ಇಬ್ಬರು ಹಾಗೂ ಮಂಗಳೂರಿನ ಒಬ್ಬರನ್ನು ಪ್ರಕರಣ ಸಂಬಂಧ ವಶಕ್ಕೆ ಪಡೆಯಲಾಗಿದೆ. ಇವನು ವಿದೇಶದ ಒಂದು ಉಗ್ರ ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದ ಎಂಬುವುದು ತಿಳಿದು ಬಂದಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..