ತುಳುನಾಡಿಗರ ಕಾರಣಿಕ ದೈವ ಕೊರಗಜ್ಜನಿಗೆ ಬೆಂಗ್ಳೂರು, ಮೈಸೂರಲ್ಲಿ ಕೋಲ – ಕೇಳಿಬಂತು ಆಕ್ಷೇಪ, ಕೆರಳಿದ ಭಕ್ತರು ಎಚ್ಚರಿಕೆ ನೀಡಿದ್ದೇನು?

ನ್ಯೂಸ್ ಆ್ಯರೋ : ಬೆಂಗಳೂರು ಹಾಗೂ ಮೈಸೂರು ಭಾಗದ ಜನರು ದೈವನಂಬಿಕೆಗಳನ್ನು ಮುರಿದು ಪ್ರಚಾರಕ್ಕಾಗಿ ಹಾಗೂ ಹಣಕ್ಕಾಗಿ ಅಲ್ಲಲ್ಲಿ ದೈವದ ಕಟ್ಟೆಗಳನ್ನು ಸ್ಥಾಪಿಸಿ ಹಣ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ.



ಬೆಂಗಳೂರು, ಮೈಸೂರಿನಲ್ಲಿ ಕೋಲ ಕಟ್ಟುವವರಿಗೆ ಕೊನೆ ಎಚ್ಚರಿಕೆ: ಬೆಂಗಳೂರು, ಮೈಸೂರು ಭಾಗದ ಜನರು ದೈವನಂಬಿಕೆಗಳನ್ನು ಮುರಿದು, ಪ್ರಚಾರಕ್ಕಾಗಿ, ದುಡ್ಡು ಮಾಡುವುದಕ್ಕಾಗಿ ಅಲ್ಲಲ್ಲಿ ದೈವದ ಕಟ್ಟೆಗಳನ್ನು ಸ್ಥಾಪಿಸಿ ಗೂಗಲ್ ಪೇ ಮಾಡಿ, ಫೋನ್ ಪೇ ಮಾಡಿ ಎನ್ನುತ್ತಿದ್ದಾರೆ.
ದುಡ್ಡು ಸಿಗುತ್ತದೆ ಎಂಬ ಕಾರಣಕ್ಕಾಗಿ ಅಲ್ಲಿ ಹೋಗಿ ನೇಮ ಕಟ್ಟುವವರಿಗೆ, ತಾಸೆ ಬ್ಯಾಂಡ್ ಸೆಟ್‌ನವರಿಗೆ, ಮಧ್ಯಸ್ಥ, ಮುಕ್ಕಾಲ್ದಿ ಹಾಗೂ ಯಾರೆಲ್ಲ ತೊಡಗಿಸಿಕೊಳ್ಳುತ್ತಾರೆಯೋ ಅವರೆಲ್ಲರಿಗೂ ಮುಂದೆ ನಮ್ಮ ಊರಿನ ಯಾವುದೇ ದೈವಸ್ಥಾನ, ಮನೆಗಳಲ್ಲಿ ನೇಮದ ಕೊಡಿಯಡಿಯಲ್ಲಿ ಅವಕಾಶವಿಲ್ಲ ಎಂದು ಎಚ್ಚರಿಕೆಯ ಪ್ರಕಟನೆಯನ್ನು ತುಳುನಾಡ ದೈವರಾಧಕರು ನೀಡಿದ್ದಾರೆ. ಇದೀಗ ಈ ಫೋಟೋ ತುಂಬಾನೇ ವೈರಲ್ ಆಗಿದೆ.

ಇದೇ ತಿಂಗಳ 26ರಂದು ಯಲಯಂಕ ತಾಲ್ಲೂಕಿನ ಚೊಕ್ಕನಹಳ್ಳಿಯುಲ್ಲಿ ಸ್ವಾಮಿ ಕೊರಗಜ್ಜನ ಕೋಲ ಹಾಗೂ 27ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಟಕ್ಕಸಂದ್ರ ಗ್ರಾಮದಲ್ಲಿ ಕೊರಗಜ್ಜ ಹಾಗೂ ಕಲ್ಲುರ್ಟಿ ದೈವದ ನೇಮೋತ್ಸವ ಹಾಗೂ ನರ್ತನ ಸೇವೆಯನ್ನು ಆಯೋಜಿಸಿದ್ದು, ಇದಕ್ಕೆ ತುಳುನಾಡ ದೈವಾರಾಧಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ ಕೋಲವನ್ನು ಆಯೋಜಿಸಿರುವವರ ಬಳಿ ‘ಬೆಂಗಳೂರಿಗೆ ಕೊರಗಜ್ಜ ಹೇಗೆ ಬಂದ್ರು’ ಎಂದು ಪ್ರಶ್ನಿಸಿದ್ದಕ್ಕೆ, ನನಗೆ ಕನಸಿನಲ್ಲಿ ಕೊರಗಜ್ಜ ಕಾಣಿಸಿಕೊಂಡು ಕಟ್ಟೆ ಮಾಡಿ ಆರಾಧಿಸಿ ಎಂದು ಹೇಳಿದರು. ಅದಕ್ಕಾಗಿ ಕೊರಗಜ್ಜ ಕಟ್ಟೆ ಮಾಡಿ ಸ್ಥಾಪಿಸಿದೆ ಎಂದಿದ್ದಾರೆ. ಇದೀಗ ಇವರಿಗೆ ನಿರಂತರ ಕರೆಗಳು ಬರುತ್ತಿದ್ದು, ಯಾರ ಕರೆಗೂ ಸ್ಪಂದಿಸುತ್ತಿಲ್ಲ ಎಂದು ತಿಳಿದುಬಂದಿದೆ.