1. Home
  2. Mangaluru
  3. ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ
0

ನ್ಯೂಸ್ ಆ್ಯರೋ‌ : ಮಂಗಳೂರು ಹೊರವಲಯದ ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಪಂಡಿತ್ ಹೌಸ್ ವಿಜೇತ ನಗರದ ಮನೆಯೊಂದರಲ್ಲಿ ನಡೆಯುತ್ತಿದ್ದ ಮಾಂಸದಂಧೆಯನ್ನು ಪೋಲಿಸರು ಪತ್ತೆಹಚ್ಚಿದ್ದು, ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.



ಬಂಧಿತ ಮಹಿಳೆಯನ್ನು ರುಕಿಯಾ( 50 ವರ್ಷ)ಗಂಡ ದಿ| ಮೊಯಿದ್ದೀನ್, ವಾಸ : ಡೋರ್ ನಂಬ್ರ 1-119(2), ವಿಟ್ಲಕೋಡಿ ಮನೆ, ಬೋಳಂತೂರು ಗ್ರಾಮ, ಬಂಟ್ವಾಳ ತಾಲೂಕು, ದ.ಕ ಜಿಲ್ಲೆ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಲತೀಫ್ ತಲೆಮರೆಸಿಕೊಂಡಿದ್ದು ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.



ಪೆರ್ಮನ್ನೂರಿನ YANVI ಎಂಬ ಹೆಸರಿನ ಮನೆಯಲ್ಲಿ ವಾಸವಾಗಿದ್ದ ರುಕಿಯಾ ಎಂಬವರ ಮನೆಯಲ್ಲಿ ಕೆಲವು ಮಂದಿ ಗಂಡಸರು ಹಾಗೂ ನಾಲ್ಕು ಜನ ಹೆಂಗಸರ ಸೇರಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸ್‌ ಠಾಣಾ ಪೊಲೀಸ್ ನಿರೀಕ್ಷಕ ಸಂದೀಪ್.ಜಿ.ಎಸ್, ಪೊಲೀಸ್ ಉಪ- ನಿರೀಕ್ಷಕರಾದ ಮಂಜುಳಾ ಎಲ್. ಹಾಗೂ ಸಿಬ್ಬಂದಿಗಳು ದಾಳಿ‌ ನಡೆಸಿದ್ದಾರೆ.



ಈ ಪ್ರಕರಣದಲ್ಲಿ 3 ದ್ವಿಚಕ್ರ ವಾಹನಗಳು, 9-ಮೊಬೈಲ್ ಪೋನ್‌ಗಳು ನಗದು ಹಣ ರೂ. 5,000/- ಸೇರಿದಂತೆ ಒಟ್ಟು ರೂ.1,76,580-00 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.



ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ.ನಂ. 25/2023 ಕಲಂ ಕಲಂ 4, 5, 6 ಐ.ಟಿ.ಪಿ ಆ್ಯಕ್ಟ್ 1956 ಮತ್ತು ಕಲಂ 370 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದ್ದು, ಬಂಧಿತ ರುಕಿಯಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



ಈ ಕಾರ್ಯಾಚರಣೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್ ಹಾಗೂ ಪಿ.ಎಸ್.ಐ – ಮಂಜುಳಾ ಎಲ್, ಉಳ್ಳಾಲ ಠಾಣಾ ಸಿಬ್ಬಂದಿಗಳಾದ ಸಿ.ಹೆಚ್.ಸಿ 319 ನೇ ಮಂಜುನಾಥ ಎನ್, ಸಿಪಿಸಿ 2424 ವಾಸುದೇವ ಚವ್ಹಾಣ್, ಮ್.ಪಿ.ಸಿ 2408 ದ್ರಾಕ್ಷಾಯಿಣಿ, ಮ.ಪಿ.ಸಿ 3275 ಲಕ್ಷ್ಮೀ ಹಾಗೂ ಎಸಿಪಿ ಸ್ಟ್ಯಾಡ್‌ನ ಸಿಬ್ಬಂದಿಯವರಾದ ಸಿ.ಹೆಚ್‌.ಸಿ 333 ರೆಜಿ ಭಾಗವಹಿಸಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..