1. Home
  2. Mangaluru
  3. ಕಡಬ : 21 ನಕಲಿ ಖಾತೆ ತೆರೆದು‌ 71 ಲಕ್ಷಕ್ಕೂ ಅಧಿಕ ಹಣ ಗುಳುಂ – ರಾಮಕುಂಜದ ಓವರ್’ಸೀಸ್ ಬ್ಯಾಂಕ್ ಮ್ಯಾನೇಜರ್ ಅಮಾನತು

ಕಡಬ : 21 ನಕಲಿ ಖಾತೆ ತೆರೆದು‌ 71 ಲಕ್ಷಕ್ಕೂ ಅಧಿಕ ಹಣ ಗುಳುಂ – ರಾಮಕುಂಜದ ಓವರ್’ಸೀಸ್ ಬ್ಯಾಂಕ್ ಮ್ಯಾನೇಜರ್ ಅಮಾನತು

ಕಡಬ : 21 ನಕಲಿ ಖಾತೆ ತೆರೆದು‌ 71 ಲಕ್ಷಕ್ಕೂ ಅಧಿಕ ಹಣ ಗುಳುಂ – ರಾಮಕುಂಜದ ಓವರ್’ಸೀಸ್ ಬ್ಯಾಂಕ್ ಮ್ಯಾನೇಜರ್ ಅಮಾನತು
0

ನ್ಯೂಸ್ ಆ್ಯರೋ : ಬ್ಯಾಂಕೊಂದರಲ್ಲಿ 21 ನಕಲಿ ಖಾತೆ ತೆರೆದು ಹಣ ಜಮಾವಣೆ ಮಾಡಿ ಅದನ್ನು ಬೇರೆ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣವೊಂದು ದಕ್ಷಿಣ ಕನ್ನಡ ಕಡಬ ತಾಲೂಕಿನ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ರಾಮಕುಂಜದಲ್ಲಿರುವ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್ ನ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕೆಲಸನಿರ್ವಹಿಸುತ್ತಿದ್ದ ಚೇತನ್‌ ಶರ್ಮಾ ಎಂಬಾತ ಆರೋಪಿ.

ಈ ಬಗ್ಗೆ ಮಂಗಳೂರಿನ ಇಂಡಿಯನ್‌ ಓವರ್‌ ಸಿಸ್‌ ಬ್ಯಾಂಕ್‌ ರೆಜಿನಲ್‌ ಆಫೀಸ್‌ ನ ಸಿನಿಯರ್‌ ರೆಜಿನಲ್‌ ಮ್ಯಾನೇಜರ್ ಅಮಿತ್‌ ಕುಮಾರ್ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಆರೋಪಿತನಾದ ಚೇತನ್‌ ಶರ್ಮಾ ಎಂಬಾತ ಸದ್ರಿ ಬ್ಯಾಂಕ್‌ನಲ್ಲಿ ಮಹೇಶ್‌, ಸವಿತ ಶರ್ಮಾ, ರೇಣುಕ, ಅಕ್ಷಯ್‌.ಎಸ್, ನಿಖಿತಾ ಎಸ್, ರಾಹುಲ್‌, ಎಸ್, ಉಮಾ ಚತುರ್ವೇದಿ ಎಂಬವರ ಹೆಸರಿನಲ್ಲಿ 21 ನಕಲಿ ಲೋನ್‌ ಖಾತೆಗಳನ್ನು ತೆರೆದು ಸದ್ರಿ ಖಾತೆಗಳಿಗೆ ಒಟ್ಟು 71,29,350/- ರೂಗಳನ್ನು ಯಾವುದೇ ಕೆವೈಸಿ ಪ್ರಕ್ರಿಯ ದಾಖಲೆ, ಖಾತೆ ತೆರೆಯುವ ದಾಖಲೆಗಳನ್ನು ಪಡೆಯದೇ ಸಾಲ ಮಂಜೂರು ಮಾಡಿದ್ದ.

ಬಳಿಕ ಖಾತೆಗಳಿಗೆ ಹಣ ಜಮಾವಣೆ ಮಾಡಿ ತದನಂತರ ಬೇರೆ ಬೇರೆ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.

21 ನಕಲಿ ಲೋನ್‌ ಖಾತೆಗಳಿಗೆ ಆರೋಪಿಯು ಒಟ್ಟು 51,31,141/- ರೂಗಳನ್ನು ಜಮೆ ಮಾಡಿದ್ದು ಬ್ಯಾಂಕ್ ಆಡಿಟ್‌ ಸಮಯದಲ್ಲಿ ಅಕ್ರಮವಾಗಿ ಬೇರೆ ಬೇರೆ ಖಾತೆಗಳನ್ನು ಹಣ ಸಂದಾಯ ಮಾಡಿದ ಬಗ್ಗೆ ಪ್ರಾಥಮಿಕ ವಿಚಾರಣೆಯಲ್ಲಿ ಕಂಡು ಬಂದಿದೆ.

ಹೀಗಾಗಿ ಆರೋಪಿಯನ್ನು 2022 ರ ಮೇ 19 ರಂದು ಸೇವೆಯಿಂದ ಅಮಾನತು ಮಾಡಲಾಗಿದೆ. ಆರೋಪಿಯು ತೆರೆದಿದ್ದ ನಕಲಿ ಖಾತೆಗಳಿಂದ 19,98,208/- ರೂ ಲೋನ್‌ ಬಾಕಿ ಇರುತ್ತದೆ.

ಆದುದರಿಂದ ನಕಲಿ ಖಾತೆಗಳನ್ನು ತೆರೆದು ಯಾವುದೇ ರೀತಿಯ ಕ್ರಯ, ಆಸ್ತಿಪತ್ರ, ಮೌಲ್ಯಮಾಪನ ವರದಿ, ಕಾನೂನು ಅಭಿಪ್ರಾಯ, ಅಡಮಾನ ತೆಗೆದುಕೊಳ್ಳದೇ ವಸತಿ ಸಾಲ ಮತ್ತು ಭೂಮಿ ಲಕ್ಷ್ಮೀ ಸಾಲ ಇತ್ಯಾದಿ ಸಾಲಗಳನ್ನು ಮಂಜೂರು ಮಾಡಿ ಬ್ಯಾಂಕ್‌ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 96/2022 ಕಲಂ: ಕಲಂ: 409. 420 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..