ನಾಳೆಯಿಂದ 10 ದಿನಗಳವರೆಗೆ ಮಂಗಳೂರು KSRTC ವಿಭಾಗ ವತಿಯಿಂದ ವಿಶೇಷ ದೀಪಾವಳಿ ಪ್ಯಾಕೇಜ್ – ವಿವರಗಳಿಗೆ ಈ ವರದಿ ಓದಿ..

ನ್ಯೂಸ್ ಆ್ಯರೋ : KSRTC ಮಂಗಳೂರು ವಿಭಾಗದ ವತಿಯಿಂದ ದ.ಕ ಹಾಗೂ ನೆರೆಯ ಉಡುಪಿ – ಕೊಡಗು ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳಗಳಿಗೆ ದೀಪಾವಳಿ ವಿಶೇಷ ಟೂರ್ ಪ್ಯಾಕೇಜ್ ಆಯೋಜಿಸಲಾಗಿದೆ.
ಈ ವಿಶೇಷ ಪ್ಯಾಕೇಜ್ ದಿನಾಂಕ 21-10-2022 ರಿಂದ 31-10-2022 ದ ವರೆಗೆ ಇದ್ದು ದಿನಾಂಕ 25-10-2022 ರಂದು ಸೂರ್ಯಗ್ರಹಣ ಇರುವ ಕಾರಣ ಆ ದಿನ ಹೊರತುಪಡಿಸಿ ಉಳಿದ 10 ದಿನಗಳ ಕಾಲ ವಿಶೇಷ ಟೂರ್ ಪ್ಯಾಕೇಜ್ ಏರ್ಪಡಿಸಲಾಗಿದೆ.
ಮುಂಗಡ ಟಿಕೆಟ್ ಬುಕ್ಕಿಂಗ್ ಅವಕಾಶವು KSRTC ಯ ಅಧಿಕೃತ ವೆಬ್ಸೈಟ್ www.ksrtc.in ನಲ್ಲಿ ಒದಗಿಸಲಾಗಿದೆ. ಸದರಿ ಪ್ಯಾಕೇಜ್ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಮಂಗಳೂರಿನಿಂದ ಹೊರಡಲಿದ್ದು, ಊಟ-ಉಪಚಾರ ಹೊರತುಪಡಿಸಿ, ದರ ನಿಗದಿಪಡಿಸಲಾಗಿದೆ.
ಟೂರ್ ಪ್ಯಾಕೇಜ್ ಗಳು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ
ಮಂಗಳೂರು – ಮಡಿಕೇರಿ ಟೂರ್ ಪ್ಯಾಕೇಜ್ 1
- ರಾಜಸೀಟ್ -ಅಬ್ಬಿಫಾಲ್ಸ್- ನಿಸರ್ಗಧಾಮ- ಗೋಲ್ಡನ್ ಟೆಂಪಲ್- ಹಾರಂಗಿಡ್ಯಾಮ್
- ಟಿಕೆಟ್ ದರ ವಯಸ್ಕರಿಗೆ 500
- ಮಕ್ಕಳಿಗೆ 450
ಮಂಗಳೂರು-ಕೊಲ್ಲೂರು ಟೂರ್ ಪ್ಯಾಕೇಜ್ 1
- ಮಾರಣಕಟ್ಟೆ- ಕೊಲ್ಲೂರು- ಕಮಲಶಿಲೆ- ಉಚ್ಚಿಲ
- ಟಿಕೆಟ್ ದರ ವಯಸ್ಕರಿಗೆ 400
- ಮಕ್ಕಳಿಗೆ 350
ಮಂಗಳೂರು-ಪುತ್ತೂರು ಟೂರ್ ಪ್ಯಾಕೇಜ್ 1
- ವಿಟ್ಲ ಪಂಚಲಿಂಗೇಶ್ವರ- ಮೃತ್ಯುಂಜೇಶ್ವರ- ಉಮಾಮಹೇಶ್ವರಿ- ಪುತ್ತೂರು ಮಹಾಲಿಂಗೇಶ್ವರ- ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ- ಹನುಮಗಿರಿ.
- ಟಿಕೆಟ್ ದರ ವಯಸ್ಕರಿಗೆ 400
ಮಕ್ಕಳಿಗೆ 350
ಮಂಗಳೂರು ಟೂರ್ ಪ್ಯಾಕೇಜ್ 1
- ಕದ್ರಿ ದೇವಸ್ಥಾನ- ಪಾಣೆಮಂಗಳೂರು ನಂದಾವರ ವಿನಾಯಕ- ಸುರ್ಯ- ಕನ್ಯಾಡಿ- ಧರ್ಮಸ್ಥಳ- ಸೌತಡ್ಕ- ಉಪ್ಪಿನಂಗಡಿ ಸಹಸ್ರಲಿಂಗೇಶ್ವರ- ಪುತ್ತೂರು ಮಹಾಲಿಂಗೇಶ್ವರ- ವಿಟ್ಲ ಪಂಚಲಿಂಗೇಶ್ವರ
- ಟಿಕೇಟ್ ದರ ವಯಸ್ಕರಿಗೆ 400
- ಮಕ್ಕಳಿಗೆ 350
ಮಂಗಳೂರು ಟೂರ್ ಪ್ಯಾಕೇಜ್ 2
- ಕುಡುಪು- ಮೂಡಬಿದ್ರೆ ಮಾರಿಯಮ್ಮ ದೇವಸ್ಥಾನ- ಸಾವಿರ ಕಂಬ ಬಸದಿ- ಕೊಡ್ಯಡ್ಕ- ನೆಲ್ಲಿತೀರ್ಥಟಿಕೇಟ್ ದರ ವಯಸ್ಕರಿಗೆ 300
- ಮಕ್ಕಳಿಗೆ 250
ಮಂಗಳೂರು ಟೂರ್ ಪ್ಯಾಕೇಜ್ 3
- ಮಂಗಳಾದೇವಿ-ಪೊಳಲಿ -ಕಟೀಲು-ಉಚ್ಚಿಲ- ಬಪ್ಪನಾಡು-ಸಸಿಹಿತ್ಲು- ತಣ್ಣೀರುಬಾವಿ ಬೀಚ್- ಉರ್ವ ಮಾರಿಗುಡಿಟಿಕೆಟ್ ದರ ವಯಸ್ಕರಿಗೆ 300
- ಮಕ್ಕಳಿಗೆ 250
ಸದ್ರಿ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬಹುದೆಂದು KSRTC ಮಂಗಳೂರು ಇದರ ಹಿರಿಯ ವಿಭಾಗ ನಿಯಂತ್ರಣಾಧಿಕಾರಿಯವರು ಸಾರ್ವಜನಿಕರಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.