1. Home
  2. Mangaluru
  3. Shocking : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಫ್ಐ ನಿಂದ ಯುವಕರಿಗೆ ಟೆರ್ರರ್ ಟ್ರೈನಿಂಗ್ – ಮಿತ್ತೂರಿ‌ನ ಫ್ರೀಡಂ ಕಮ್ಯೂನಿಟಿ ಹಾಲ್ ಮೂಲಸ್ಥಾನ…!!

Shocking : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಫ್ಐ ನಿಂದ ಯುವಕರಿಗೆ ಟೆರ್ರರ್ ಟ್ರೈನಿಂಗ್ – ಮಿತ್ತೂರಿ‌ನ ಫ್ರೀಡಂ ಕಮ್ಯೂನಿಟಿ ಹಾಲ್ ಮೂಲಸ್ಥಾನ…!!

Shocking : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಫ್ಐ ನಿಂದ ಯುವಕರಿಗೆ ಟೆರ್ರರ್ ಟ್ರೈನಿಂಗ್ – ಮಿತ್ತೂರಿ‌ನ ಫ್ರೀಡಂ ಕಮ್ಯೂನಿಟಿ ಹಾಲ್ ಮೂಲಸ್ಥಾನ…!!
0

ನ್ಯೂಸ್ ಆ್ಯರೋ : ಪಿಎಫ್‌ಐ ವಿರುದ್ಧ ಸಮರ ಸಾರಿರುವ ಎನ್ಐಎ‌ ಅಧಿಕಾರಿಗಳು ಈ ಸಂಘಟನೆಯ ಜನ್ಮ ಜಾಲಾಡುತ್ತಿದ್ದಾರೆ. ಇದೀಗ ಈ ಕಾರ್ಯಾಚರಣೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಇದೀಗ ಸ್ಪೋಟಕ ಮಾಹಿತಿಯೊಂದನ್ನು ಕಲೆ ಹಾಕಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಕರಿಗೆ ಪಿಎಫ್‌ಐ ಟೆರರ್ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ವಿಚಾರವನ್ನು ಬಯಲಿಗೆಳೆದಿದೆ.

ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಇದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಸುಳ್ಯದ ಕಡೆ ಪಿಎಫ್‌ಐ ಟೆರರ್ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಮಿತ್ತೂರಿನಲ್ಲಿರುವ ಪ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ಯುವಕರಿಗೆ ಪಿಎಫ್‌ಐ ಟೆರರ್ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಮಾಹಿತಿಯನ್ನು ಎನ್ಐಎ ಕಲೆ ಹಾಕಿದ್ದಾರೆ ಎನ್ನಲಾಗಿದೆ.

2007 ರಿಂದ ಸಾವಿರಾರು ಯುವಕರಿಗೆ ಟ್ರೈನಿಂಗ್ ನೀಡಲಾಗುತ್ತಿತ್ತು, ಈ ಸಂಬಂಧ ಆಯೂಬ್ ಅಗ್ನಾಡಿ ಎಂಬ ಟ್ರಸ್ಟಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ ಈ ವಿಚಾರವಾಗಿ ವಿಸ್ತೃತ ತನಿಖೆಯಲ್ಲಿ ತೊಡಗಿರುವ ಎನ್ಐಎ ಬಂಧಿತರಿಂದ ಮತ್ತಷ್ಟು ಸತ್ಯ ಕಕ್ಕಿಸುವ ನಿರೀಕ್ಷೆಯಿದೆ.

ಈಗಾಗಲೇ ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಎಂಟು ಅಂಗಸಂಸ್ಥೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿದೆ. ಈ ಮೂಲಕ ಪಿಎಫ್‌ಐ ನ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದ್ದು, ಪಿಎಫ್ಐ ನ ಕಚೇರಿಗಳಿಗೂ ಬೀಗ ಜಡಿಯಲಾಗಿದೆ.‌ ಅಲ್ಲದೇ ನಿಷೇಧಿಸಲ್ಪಟ್ಟ ಸಂಘಟನೆಗಳ ಸಾಮಾಜಿಕ ಜಾಲತಾಣ ಖಾತೆಗಳನ್ನು ಸಹ ಡಿಲೀಟ್ ಮಾಡಲು ಆದೇಶಿಸಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..