ನ್ಯೂಸ್ ಆ್ಯರೋ : ಮಂಜೇಶ್ವರ ಉಪ ಜಿಲ್ಲಾ ಶಾಲಾ ವಿಜ್ಞಾನ ಮೇಳ ಬೇಕೂರು ಸರಕಾರಿ ಶಾಲೆಯಲ್ಲಿ ಜರಗುತ್ತಿದ್ದ ವೇಳೆ ವೇದಿಕೆಯ ಮುಂಭಾಗ ಹಾಕಲಾಗಿದ್ದ ಪೆಂಡಾಲ್ ಆಕಸ್ಮಿಕವಾಗಿ ಕುಸಿದು ಮಕ್ಕಳ ಮೇಲೆ ಬಿದ್ದಿದ್ದರಿಂದ ಹದಿನೈದಕ್ಕೂ ಅಧಿಕ ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ವೇಳೆ ಈ ಘಟನೆ ನಡೆದಿದ್ದು ಮುಖ್ಯ ವೇದಿಕೆಯಾದ್ದರಿಂದ ಹಲವಾರು ಮಂದಿ ಇದರೊಳಗೆ ಇದ್ದು ಸೀಟಿನಡಿಯಲ್ಲಿ ಸಿಲುಕಿದ್ದರು. ಹಲವರಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದ್ದು, ಅಗ್ನಿಶಾಮಕ ಸೇನೆ ಹಾಗೂ ಪೋಲಿಸರು ಸ್ಥಳಕ್ಕೆ ತಲುಪಿದ್ದಾರೆ.
ಮಕ್ಕಳ ಸಹಿತ ಎಸ್ಕೊರ್ಟಿಂಗ್ ಟೀಚರ್ಸ್ ಹಾಗೂ ತೀರ್ಪುಗಾರರಿಗೆ ಗಾಯಗಳಾಗಿರುವುದಾಗಿ ತಿಳಿದು ಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ..
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..