1. Home
  2. Mangaluru
  3. ಮಂಗಳೂರು : ಅನಾಥ ಶವವನ್ನು ತಾನೇ ಮುಂದೆ ನಿಂತು ವಿಲೇವಾರಿ ಮಾಡಿದ ಸಂಚಾರಿ ಠಾಣೆಯ ಸಿಬ್ಬಂದಿ

ಮಂಗಳೂರು : ಅನಾಥ ಶವವನ್ನು ತಾನೇ ಮುಂದೆ ನಿಂತು ವಿಲೇವಾರಿ ಮಾಡಿದ ಸಂಚಾರಿ ಠಾಣೆಯ ಸಿಬ್ಬಂದಿ

ಮಂಗಳೂರು : ಅನಾಥ ಶವವನ್ನು ತಾನೇ ಮುಂದೆ ನಿಂತು ವಿಲೇವಾರಿ ಮಾಡಿದ ಸಂಚಾರಿ ಠಾಣೆಯ ಸಿಬ್ಬಂದಿ
0

ನ್ಯೂಸ್ ಆ್ಯರೋ : ಸಂಚಾರಿ ಠಾಣೆಯ ಪೋಲಿಸರೆಂದರೆ ಮೂಗು ಮುರಿಯುವವರೇ ಹೆಚ್ಚು. ಸುಖಾಸುಮ್ಮನೆ ಹಣ ಪೀಕುವ, ಎಲ್ಲೆಂದರಲ್ಲಿ ತಡೆದು ನಿಲ್ಲಿಸುವ ಆರೋಪಗಳು ಸಂಚಾರಿ ಪೋಲಿಸರ ಮೇಲಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಸಂಚಾರಿ ಠಾಣೆಯ ಸಿಬ್ಬಂದಿಯೊಬ್ಬರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಕಮೀಷನರ್ ಅವರೇ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಂಪತ್ ಬಂಗೇರ ಅವರು ನಿನ್ನೆ ಕರ್ತವ್ಯದಲ್ಲಿದ್ದಾಗ ಮಿನಿ ವಿಧಾನಸೌಧದ ಬಳಿಯಲ್ಲಿ ಯಾವುದೋ ವಯಸ್ಕ ವ್ಯಕ್ತಿಯ ಮೃತ ಶರೀರ ದೊರೆತಿತ್ತು‌.

ಸಾಮಾನ್ಯವಾಗಿ ಅನಾಥ ಶವ ಕಂಡರೆ ವೈದ್ಯಕೀಯ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆದು ಅವರಿಂದಲೇ ವಿಲೇವಾರಿ ಮಾಡಿಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಸಂಪತ್ ಅವರು ಯಾವುದೇ ರೀತಿಯ ವೈದ್ಯಕೀಯ ಸಿಬ್ಬಂದಿಗಳನ್ನು ಕಾಯದೆ ಸಹೋದ್ಯೋಗಿಗಳ ನೆರವಿನೊಂದಿಗೆ ತಾವೇ ಮುಂದೆ ನಿಂತು ಮೃತ ದೇಹವನ್ನು ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಈ ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಂಚಾರಿ ಠಾಣೆಯ ಸಂಪತ್ ಅವರ ಕಾರ್ಯ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..