1. Home
  2. Mangaluru
  3. ಬದಿಯಡ್ಕ : ಬಿಜೆಪಿಯ ಇಬ್ಬರು ಕಾರ್ಯಕರ್ತರ ಮೇಲೆ ಸಿಪಿಐಎಂ ಕಾರ್ಯಕರ್ತರ ತಂಡದಿಂದ ಮಾರಕಾಸ್ತ್ರಗಳಿಂದ ದಾಳಿ – ಗಾಯಗೊಂಡ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು

ಬದಿಯಡ್ಕ : ಬಿಜೆಪಿಯ ಇಬ್ಬರು ಕಾರ್ಯಕರ್ತರ ಮೇಲೆ ಸಿಪಿಐಎಂ ಕಾರ್ಯಕರ್ತರ ತಂಡದಿಂದ ಮಾರಕಾಸ್ತ್ರಗಳಿಂದ ದಾಳಿ – ಗಾಯಗೊಂಡ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು

ಬದಿಯಡ್ಕ : ಬಿಜೆಪಿಯ ಇಬ್ಬರು ಕಾರ್ಯಕರ್ತರ ಮೇಲೆ ಸಿಪಿಐಎಂ ಕಾರ್ಯಕರ್ತರ ತಂಡದಿಂದ ಮಾರಕಾಸ್ತ್ರಗಳಿಂದ ದಾಳಿ – ಗಾಯಗೊಂಡ ಕಾರ್ಯಕರ್ತರು ಆಸ್ಪತ್ರೆಗೆ ದಾಖಲು
0

ನ್ಯೂಸ್ ಆ್ಯರೋ : ಬಿಜೆಪಿ‌ ಕಾರ್ಯಕರ್ತರಿಬ್ಬರಿಗೆ ಸಿಪಿಐಎಂ ಕಾರ್ಯಕರ್ತರೆನ್ನಲಾದ ಯುವಕರ ತಂಡವೊಂದು ಮಾರಕಯುಧಗಳಿಂದ ಹಲ್ಲೆ ನಡೆಸಿದ ಘಟನೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಠಾಣಾ ವ್ಯಾಪ್ತಿಯ ಎಣ್ಮಕಜೆ ಗ್ರಾಮದ ಮಣಿಯಂಪಾರೆಯಲ್ಲಿ ಡಿ.26ರಂದು ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

ಬಿಜೆಪಿ ಕಾರ್ಯಕರ್ತರೆನ್ನಲಾದ ಮಣಿಯಂಪಾರೆ ನಿವಾಸಿ ಜಯಂತ ನಾಯ್ಕರ ಪುತ್ರ ಸೂರ್ಯೋದಯ (19 ವ.), ಸಂಟನಡ್ಕ ನಿವಾಸಿ ಐತಪ್ಪ ನಾಯ್ಕರ ಪುತ್ರ ರೂಪೇಶ್ ( 26 ವ.) ರವರು ಗಾಯಗೊಂಡವರಾಗಿದ್ದಾರೆ.

ವಸಂತ, ರಾಜು,ಬಾಲು, ಮನೋಜ್ ಸೇರಿದಂತೆ 6 ಮಂದಿ ಸಿಪಿಐಎಂ ಕಾರ್ಯಕರ್ತರೆನ್ನಲಾದ ಯುವಕರ ತಂಡ ಮಾರಕಾಸ್ತ್ರಗಳಿಂದ ನಮ್ಮ ಮೇಲೆ ದಾಳಿ ನಡೆಸಿದ್ದಾರೆ‌ ಎಂದು ಗಾಯಾಳುಗಳು ತಿಳಿಸಿದ್ದಾರೆ.

ಗಾಯಾಳುಗಳನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬದಿಯಡ್ಕ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..