ನ್ಯೂಸ್ ಆ್ಯರೋ : ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆಯಾದ ಸುದ್ದಿಯ ಬಳಿಕ ಇದೀಗ ಚಿತ್ರ ವೀಕ್ಷಣೆ ಮಾಡುತ್ತಿದ್ದ ಯುವಕನ ಮೇಲೆ ದೈವದ ಅವಾಹನೆ ಆದ ಮತ್ತೊಂದು ಘಟನೆ ಮಂಗಳೂರಿನಲ್ಲಿ ನಡೆದಿದೆ.
ಸಿನಿಮಾದ ಕ್ಲೈಮಾಕ್ಸ್ ನೋಡುತ್ತಿದ್ದಂತೆ ದೈವ ಮೈಮೇಲೆ ಬಂದಂತೆ ಆ ಯುವಕ ಕೂತ ಸೀಟಿನಿಂದ ಎದ್ದು ವರ್ತಿಸಿದ್ದಾರೆ. ಮಂಗಳೂರಿನ ಚಿತ್ರಮಂದಿರವೊಂದರಲ್ಲಿ ರಾತ್ರಿಯ ಶೋ ವೇಳೆ ಈ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗಿದೆ.
ಯುವಕನ ಆವೇಶಕ್ಕೆ ಅಕ್ಕಪಕ್ಕದಲ್ಲಿ ಚಿತ್ರ ವೀಕ್ಷಣೆ ಮಾಡುತ್ತಿದ್ದವರು ಕೂಡ ಒಂದು ಕ್ಷಣ ಅವಕ್ಕಾಗಿದ್ದಾರೆ. ರಿಷಭ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಈ ಕಾಂತಾರ ಚಿತ್ರ ಕನ್ನಡ ಭಾಷೆಯಲ್ಲಿ ತೆರೆ ಕಂಡಿದ್ದು ವಿಶ್ವದಾದ್ಯಂತ ಧೂಳೆಬ್ಬಿಸಿದ್ದು ಪ್ರತಿ ದಿನ ಸಾವಿರಾರು ಹೌಸ್ ಫುಲ್ ಶೋಗಳನ್ನು ಕಾಣುತ್ತಿದೆ.
ಇದೇ ಅಕ್ಟೋಬರ್ 14 ರಂದು ಹಿಂದಿ ಮತ್ತು ನವೆಂಬರ್ 15 ರಂದು ತೆಲುಗು ಭಾಷೆಯಲ್ಲಿ ಚಿತ್ರ ತೆರೆ ಕಾಣಲಿದ್ದು ಬಳಿಕ ಮಲಯಾಳಂ ನಲ್ಲೂ ಈ ಚಿತ್ರ ಮೂಡಿ ಬರಲಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..