ಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟದ ಬಳಿಕ ಕೆಲವೇ ಗಂಟೆಗಳಲ್ಲಿ ಪ್ರವಚನಕಾರ ಝಾಕೀರ್ ನಾಯ್ಕ್ ಟ್ವೀಟ್ – ಆತ್ಮಾಹುತಿ ಬಾಂಬ್ ಬಗ್ಗೆಯೂ ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ಲೋಡ್.. !!

ನ್ಯೂಸ್ ಆ್ಯರೋ : ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮಹಮ್ಮದ್ ಶಾರೀಕ್‌ನ ಮೇಲೆ ಪ್ರಭಾವ ಬೀರಿದ್ದಾನೆ ಎನ್ನಲಾದ ಪ್ರವಚನಕಾರ, IRF ಮುಖ್ಯಸ್ಥ ಝಾಕೀರ್ ನಾಯ್ಕ್ ಸ್ಫೋಟ ನಡೆದ ಬಳಿಕ ಆತ್ಮಾಹುತಿ ಬಾಂಬ್ ಬಗ್ಗೆ ಟ್ವೀಟ್ ಮಾಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಳೆದ ನವೆಂಬರ್ 19ರಂದು 4.29ಕ್ಕೆ ಸ್ಫೋಟ ಸಂಭವಿಸಿದ್ದು ಈತ 6.13ಕ್ಕೆ ಟ್ವೀಟ್ ಮಾಡಿದ್ದಾನೆ ಎನ್ನಲಾಗಿದೆ. ಆತ್ಮಾಹುತಿ ಬಾಂಬ್ ಬಗ್ಗೆಯೂ ಯೂಟ್ಯೂಬ್ ನ ವೀಡಿಯೋ ಅಪ್‌ಲೋಡ್ ಮಾಡಿದ್ದ ಝಾಕೀರ್, ಅದರ ಲಿಂಕ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ. (ಇಲ್ಲಿ ಟ್ವಿಟರ್ ಲಿಂಕ್ ಹಾಕಲಾಗಿದೆ)
ಇಸ್ಲಾಂ ರೀಸರ್ಚ್ ಫೌಂಡೇಷನ್ ಸ್ಥಾಪಕ ಝಾಕೀರ್ ನಾಯ್ಕ್ ಗೆ ಮಂಗಳೂರಿನಲ್ಲಿಯೂ ಅನುಯಾಯಿಗಳು ಇದ್ದು, 2015ರ ಡಿಸೆಂಬರ್‌ನಲ್ಲಿ ಆತ ಮಂಗಳೂರಿನಲ್ಲಿ ಧರ್ಮ ಸಂದೇಶ ನೀಡುವ ಕಾರ್ಯ ಕ್ರಮ ನಿಗದಿಯಾಗಿತ್ತು. ಅದು ವಿವಾದ ಸೃಷ್ಟಿಸಿತ್ತು. ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆದಿತ್ತು.
ಅಲ್ಲದೇ ಮುಸ್ಲಿಂ ಸಮುದಾಯದ ಯುವಕರನ್ನು ಜಿಹಾದ್ ನತ್ತ ಕೆರಳಿಸುವ ಭಾಷಣದ ಬಗ್ಗೆಯೂ ಈಗಾಗಲೇ ಆರೋಪಗಳಿದ್ದು, ಕೆಲ ವರ್ಷಗಳ ಹಿಂದೆ ಆತನ IRF ಸಂಘಟನೆಗೆ ದೇಶದಲ್ಲೇ ನಿಷೇಧ ಹೇರಲಾಗಿತ್ತು.
ಶಂಕಿತ ಉಗ್ರ ಶಾರೀಕ್ ಜೀವಕ್ಕೆ ಅಪಾಯ ಎದುರಾಗುವ ಅನುಮಾನಗಳಿದ್ದು, ಆತ ಚಿಕಿತ್ಸೆ ಪಡೆಯುತ್ತಿರುವ ನಗರದ ಖಾಸಗಿ ಆಸ್ಪತ್ರೆಗೆ ಇನ್‌ಸ್ಪೆಕ್ಟರ್, ಪಿಎಸ್‌ಐ ಸಹಿತವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಶಾಕೀರ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ಇನ್ನೂ ಮಾತನಾಡುವ ಸ್ಥಿತಿಗೆ ಬಂದಿಲ್ಲ. ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಪೊಲೀಸರು ಇನ್ನೂ ಕೂಡ ಆತನನ್ನು ವಿಚಾರಿಸಿಲ್ಲ ಎಂದು ಪೋಲಿಸ್ ಮೂಲಗಳು ತಿಳಿಸಿವೆ.