1. Home
  2. Udupi
  3. ಉಡುಪಿ : ಕಾರ್ ನಲ್ಲಿ ತಾನೇ ಸತ್ತಂತೆ ವ್ಯಕ್ತಿಯೊಬ್ಬರನ್ನು ಸುಟ್ಟ ಪ್ರಕರಣ – ಪ್ರಧಾನ ಆರೋಪಿ ಜೈಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ

ಉಡುಪಿ : ಕಾರ್ ನಲ್ಲಿ ತಾನೇ ಸತ್ತಂತೆ ವ್ಯಕ್ತಿಯೊಬ್ಬರನ್ನು ಸುಟ್ಟ ಪ್ರಕರಣ – ಪ್ರಧಾನ ಆರೋಪಿ ಜೈಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ

ಉಡುಪಿ : ಕಾರ್ ನಲ್ಲಿ ತಾನೇ ಸತ್ತಂತೆ ವ್ಯಕ್ತಿಯೊಬ್ಬರನ್ನು ಸುಟ್ಟ ಪ್ರಕರಣ – ಪ್ರಧಾನ ಆರೋಪಿ ಜೈಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ
0

ನ್ಯೂಸ್ ಆ್ಯರೋ : ಉಡುಪಿ ಸಬ್ ಜೈಲಿನಲ್ಲಿ ವಿಚಾರಣಾ ದಿನ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸದಾನಂದ ಸೇರಿಗಾರ್ ಆತ್ಮಹತ್ಯೆ ಮಾಡಿಕೊಂಡ ಆರೋಪಿಯಾಗಿದ್ದು, ಪಂಚೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಮುಂಜಾನೆ ಐದು ಗಂಟೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, 20 ಮಂದಿ ಕೈದಿಗಳಿದ್ದ ಕೊಠಡಿಯಲ್ಲಿ ಈ ಘಟನೆ ನಡೆದಿದೆ.

ಸಹ ಕೈದಿಗಳು ಗಮನಿಸಿ ನೇಣಿನ ಕುಣಿಕೆಯಿಂದ ಬಿಡಿಸಿದ್ದರಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಸದಾನಂದ ಅವರು ಸಾವನ್ನಪ್ಪಿದ್ದಾರೆ.

ಕಾರ್ಕಳ ಮೂಲದ ಸದಾನಂದ ಸೇರಿಗಾರ್ ಸರ್ವೇಯರ್ ಆಗಿದ್ದರು. ಕುರುಪ್ ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಿ ಗಮನಸೆಳೆದಿದ್ದ ಪ್ರಕರಣ ಇದಾಗಿದ್ದು, ಸದಾನಂದ ಸೆರೆಗಾರ್ ಈ ಪ್ರಕರಣದ ಪ್ರಧಾನ ಆರೋಪಿಯಾಗಿದ್ದರು.

ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಸದಾನಂದ ಸೇರಿಗಾರ್, ಸುಟ್ಟ ಕಾರಿನಲ್ಲಿ ತಾನೇ ಸತ್ತಿರುವುದಾಗಿ ಬಿಂಬಿಸಲು ಹೊರಟು ಬಂಧಿಯಾಗಿದ್ದ ಪ್ರಕರಣದ ಆರೋಪಿಯಾಗಿದ್ದರು.

ಉಡುಪಿ ಜಿಲ್ಲೆಯ ಗಡಿ ಭಾಗವಾದ ಶಿರೂರು ಒತ್ತಿನೆಣೆ ಹೇನ್ಬೇರ್ ನಲ್ಲಿ ನಡೆದಿದ್ದ ಪ್ರಕರಣ ಇದಾಗಿತ್ತು.