ನ್ಯೂಸ್ ಆ್ಯರೋ : ರಿಕ್ಷಾದಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋದ, 12 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಾರೀಸುದಾರರಿಗೆ ಮರಳಿಸುವ ಮೂಲಕ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.
ಬಳ್ಳೂರು ಕಾರೇಕುದ್ರುವಿನ ರಿಕ್ಷಾ ಚಾಲಕ ಪ್ರಕಾಶ್ ನಾಯಕ್ ಅವರ ರಿಕ್ಷಾದಲ್ಲಿ, ಲಲಿತಾ ಕೆ. ಎಂಬವರು ಕುಂದಾಪುರ ಪೇಟೆಯಿಂದ ಮನೆಗೆ ತೆರಳಿದ್ದರು. ರಿಕ್ಷಾ ಇಳಿಯುವ ವೇಳೆ ಸುಮಾರು 12 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಮರೆತು ರಿಕ್ಷಾದಲ್ಲೇ ಬಿಟ್ಟು ಹೋಗಿದ್ದರು.
ರಿಕ್ಷಾದ ಸೀಟಿನ ಕೆಳಗೆ ಚಿನ್ನಾಭರಣ ನೋಡಿದ ಚಾಲಕ ಪ್ರಕಾಶ್ ನಾಯಕ್, ಅದನ್ನು ಕುಂದಾಪುರ ಪೊಲೀಸ್ ಠಾಣೆಗೆ ಒಪ್ಪಿಸಿದರು.
ಲಲಿತಾ ಅವರು, ಚಿನ್ನ ಕಳೆದುಹೋಗಿರುವ ಬಗ್ಗೆ ಗೊತ್ತಾಗಿ, ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ, ಪೊಲೀಸರು ಚಿನ್ನ ಕಳೆದು ಕೊಂಡವರು ಲಲಿತಾ ಅವರೇ ಅಂತ ಖಚಿತ ಪಡಿಸಿ, ಚಿನ್ನಾಭರಣವನ್ನು ಒಪ್ಪಿಸಿದರು. ಆಟೋ ಚಾಲಕ ಪ್ರಕಾಶ್ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತವಾಗಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..