1. Home
  2. Udupi
  3. ಉಡುಪಿ‌ : ಸಮುದ್ರ ತೀರದಲ್ಲಿ ಡಾಲ್ಫಿನ್ ಜಾತಿಯ ಮೀನಿನ ಕಳೇಬರ ಪತ್ತೆ – ಅರಣ್ಯ ಅಧಿಕಾರಿಗಳ ಭೇಟಿ

ಉಡುಪಿ‌ : ಸಮುದ್ರ ತೀರದಲ್ಲಿ ಡಾಲ್ಫಿನ್ ಜಾತಿಯ ಮೀನಿನ ಕಳೇಬರ ಪತ್ತೆ – ಅರಣ್ಯ ಅಧಿಕಾರಿಗಳ ಭೇಟಿ

ಉಡುಪಿ‌ : ಸಮುದ್ರ ತೀರದಲ್ಲಿ ಡಾಲ್ಫಿನ್ ಜಾತಿಯ ಮೀನಿನ ಕಳೇಬರ ಪತ್ತೆ – ಅರಣ್ಯ ಅಧಿಕಾರಿಗಳ ಭೇಟಿ
0

ನ್ಯೂಸ್ ಆ್ಯರೋ : ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಕೋಡಿ ಗ್ರಾಮದ ಬೆಂಗ್ರೆ ಎಂಬಲ್ಲಿ ಸಮುದ್ರ ತೀರದಲ್ಲಿ ಡಾಲ್ಫಿನ್ ಜಾತಿಯ ಮೀನು ಸತ್ತಿರುವುದು ಕಂಡು ಬಂದಿದೆ.

ಈ ಬಗ್ಗೆ ಮಾಹಿತಿ ಪಡೆದ ಉಡುಪಿ ವಲಯದ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್‌ ಅವರ ಮಾರ್ಗದರ್ಶನದಲ್ಲಿ ಸರಕಾರೇತರ ಸಂಸ್ಥೆ ರೀಫ್‌ ವಾಚ್‌ ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಡಾಲ್ಫಿನ್ ಮೀನಿನ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಜಮೀನಿನಲ್ಲಿ ದಫನ ಮಾಡಲಾಯಿತು.

ಈ ಕಾರ್ಯಾಚರಣೆಯಲ್ಲಿ ಉಡುಪಿ ಕೇಂದ್ರ ಸ್ಥಾನದ ಉಪವಲಯ ಅರಣ್ಯಾಧಿಕಾರಿ ಗುರುರಾಜ ಕೆ., ಅರಣ್ಯ ರಕ್ಷಕ ಕೇಶವ್ ಪೂಜಾರಿ ಎಂ., ವಾಹನ ಚಾಲಕ ಜೋಯ್ ಹಾಗೂ ರಿಫ್ ವಾಚ್ ಸಂಸ್ಥೆಯ ಡಾ। ತೇಜಸ್ವಿನಿ ಶೆಟ್ಟಿಗಾರ್ ಮತ್ತು ವಿರಿಲ್ ಅವರು ಭಾಗವಹಿಸಿದ್ದರು.