1. Home
  2. Udupi
  3. Udupi : ಕೆನರಾ ಜ್ಯುವೆಲ್ಲರಿಯಲ್ಲಿ ಚೈನ್ ಕೇಳಿದಾತ ಉಂಗುರದೊಂದಿಗೆ ಪರಾರಿ – ಸಾರ್ವಜನಿಕರಿಂದ ಧರ್ಮದೇಟು, ಪ್ರಕರಣ ದಾಖಲು

Udupi : ಕೆನರಾ ಜ್ಯುವೆಲ್ಲರಿಯಲ್ಲಿ ಚೈನ್ ಕೇಳಿದಾತ ಉಂಗುರದೊಂದಿಗೆ ಪರಾರಿ – ಸಾರ್ವಜನಿಕರಿಂದ ಧರ್ಮದೇಟು, ಪ್ರಕರಣ ದಾಖಲು

Udupi : ಕೆನರಾ ಜ್ಯುವೆಲ್ಲರಿಯಲ್ಲಿ ಚೈನ್ ಕೇಳಿದಾತ ಉಂಗುರದೊಂದಿಗೆ ಪರಾರಿ –  ಸಾರ್ವಜನಿಕರಿಂದ ಧರ್ಮದೇಟು, ಪ್ರಕರಣ ದಾಖಲು
0

ನ್ಯೂಸ್ ಆ್ಯರೋ‌ : ಉಡುಪಿ ನಗರದ ಕೆನರಾ ಜ್ಯುವೆಲ್ಲರಿಗೆ ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನೊಬ್ಬ ಉಂಗುರ ಕದ್ದು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕೇರಳದ ಕಾಸರಗೋಡಿನ ಸಾಜು ಎಂಬಾತ ಉಂಗುರ ಕದ್ದ ಕಳ್ಳ.

ಈತ ನಗರದ ಕೆನರಾ ಜ್ಯುವೆಲ್ಲರಿಗೆ ಗ್ರಾಹಕನ ಸೋಗಿನಲ್ಲಿ ತೆರಳಿ ಉಂಗುರ ಬೇಕು ಎಂದು ಕೇಳಿದ್ದಾನೆ.ಅದನ್ನು ತೋರಿಸುವಾಗ ಚೈನ್ ತೋರಿಸಿ ಎಂದಿದ್ದಾನೆ. ಜ್ಯುವೆಲ್ಲರಿಯವರು ಚೈನ್ ತೋರಿಸುವಾಗ ಈತ ಉಂಗುರ ಹಿಡಿದುಕೊಂಡು ಓಡಿದ್ದಾನೆ.

ಜ್ಯುವೆಲ್ಲರಿ‌ಯ ಮಾಲಕ ಸ್ಥಳೀಯರ ನೆರವಿನಿಂದ ಕಳ್ಳನನ್ನು‌ ಬೆನ್ನಟ್ಟಿ ಹಿಡಿದು ಅವನಿಂದ ಉಂಗುರ ವಾಪಾಸು ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಡುಪಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..