1. Home
  2. Udupi
  3. ಉಡುಪಿ‌ : ನಂಬಿದವಗಿಂಬು ಕೊಡುವವನೀತ – ಬಾನೆತ್ತರಕ್ಕೆ ಚಿಮ್ಮಿದ ನೀರು, ಬಬ್ಬುಸ್ವಾಮಿ ಪವಾಡದ ವಿಡಿಯೋ ವೈರಲ್

ಉಡುಪಿ‌ : ನಂಬಿದವಗಿಂಬು ಕೊಡುವವನೀತ – ಬಾನೆತ್ತರಕ್ಕೆ ಚಿಮ್ಮಿದ ನೀರು, ಬಬ್ಬುಸ್ವಾಮಿ ಪವಾಡದ ವಿಡಿಯೋ ವೈರಲ್

ಉಡುಪಿ‌ : ನಂಬಿದವಗಿಂಬು ಕೊಡುವವನೀತ – ಬಾನೆತ್ತರಕ್ಕೆ ಚಿಮ್ಮಿದ ನೀರು, ಬಬ್ಬುಸ್ವಾಮಿ ಪವಾಡದ ವಿಡಿಯೋ ವೈರಲ್
0

ನ್ಯೂಸ್ ಆ್ಯರೋ : ದೈವವನ್ನು ನಂಬಿದವರನ್ನು ಮಾಡಿದವರನ್ನು ಕರಾವಳಿಯ ನಂಬುಗೆಯ ಶಕ್ತಿಗಳಾದ ದೈವಗಳು ಕೈಬಿಟ್ಟ ಪ್ರಸಂಗಗಳೇ ಇಲ್ಲ. ಭಕ್ತಿಯಿಂದ ಪೂಜೆ ಸಲ್ಲಿಸಿ, ಸಂಕಷ್ಟಗಳನ್ನು ಹೇಳಿಕೊಂಡರೆ ಅವರೆ ನಮ್ಮನ್ನು ಕಾಪಾಡುತ್ತಾರೆ ಎನ್ನುವ ನಂಬಿಕೆ ಕರಾವಳಿ ಜನರಲ್ಲಿದೆ. ಈಚೆಗೆ ದೈವಗಳ ಕಾರ್ಣಿಕಗಳು ಪವಾಡಗಳಂತೆ ನಡೆಯುತ್ತಿದ್ದು, ಕೆಲವೊಂದು ಘಟನೆಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವುದುಂಟು. ‌

ಇದೀಗ ಉಡುಪಿಯಲ್ಲಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆದ ಪವಾಡ ಅಚ್ಚರಿ ಉಂಟು ಮಾಡಿದೆ.

‘ಮಮ್ಮಾಯಿದೂತೆ, ಊರುಗುದಾತೆ, ನಂಬಿನಾಯಗ್‌ ವೈದ್ಯನಾತೆ’ ಎಂಬ ಕೀರ್ತಿಯೊಂದಿಗೆ ತುಳುನಾಡಿನಾದ್ಯಂತ ಪ್ರಸಿದ್ದವಾಗಿರುವುದು ಶ್ರೀ ಬಬ್ಬುಸ್ವಾಮಿ. ಸತ್ಯದ ದೈವವೆಂದೇ ಕೀರ್ತಿ ಪಡೆದಿರುವ ಬಬ್ಬುಸ್ವಾಮಿ ನಂಬಿ ಬಂದವರನ್ನು ಕೈ ಬಿಟ್ಟ ಉದಾಹರಣೆಯೇ ಇಲ್ಲ.

ಉಡುಪಿಯ ಕಸ್ತೂರ್ಬಾ ನಗರದ ಚಿಪ್ಪಾಡಿಯಲ್ಲಿ ಬಬ್ಬುಸ್ವಾಮಿ ದೈವಸ್ಥಾನದ ಆವರಣದಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಅದಕ್ಕೆ ದೈವದ ದರ್ಶನದ ವೇಳೆ ನೀರಿನ ಸಮಸ್ಯೆಗೆ ಜಾಗವನ್ನು ಗುರುತಿಸುವಂತೆ ಹೇಳಿಕೊಳ್ಳಲಾಯಿತು.

ಇದೀಗ ಪವಾಡ ಎಂಬಂತೆ ದೈವ ತೋರಿಸಿದ ಜಾಗದಲ್ಲಿ ಬೋರ್‌ವೆಲ್ ತೊಡಿದಾಗ ಸ್ವಾಮಿ ಅಣತಿಯಂತೆ ನೀರು ಬಾನೆತ್ತರಕ್ಕೆ ಚಿಮ್ಮಿದೆ. ಇನ್ನೂ ಈ ದೃಶ್ಯವನ್ನು ಹತ್ತಿರದಲ್ಲಿ ನೋಡಿದ ಭಕ್ತರ ಕಣ್ಣಚ್ಚಲ್ಲಿ ನೀರು ತರಿಸಿದೆ. ಕೆಲವರು ನೀರಿನ ಸೆಲೆಯನ್ನು ನೋಡಿ ಕುಣಿದಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಕರಾವಳಿ ಮಂದಿಗೆ ತಮ್ಮ ಬದುಕಿನಲ್ಲಿ ಹೊಸ ಭರವಸೆ, ಧೈರ್ಯ ಹಾಗೂ ಹುಮ್ಮಸ್ಸನ್ನು ಕೊಡುವ ಒಂದು ಶಕ್ತಿಯೆಂದರೆ ಅದು ಇಲ್ಲಿನ ಕಾರ್ಣಿಕ ದೈವಗಳು. ಇಲ್ಲಿನ ಜನರ ಪ್ರತಿ ನಿತ್ಯದ ಆಗು ಹೋಗುಗಳಿಗೆ ಶಕ್ತಿಯಾಗಿ ನಿಂತಿರುವುದು ಇಲ್ಲಿನ ದೈವಗಳು. ತನ್ನ ಕಷ್ಟಗಳನ್ನು ಹೇಳಿಕೊಳ್ಳಲು ತನ್ನವರಿಲ್ಲದಿದ್ದರೂ, ದೈವಗಳಿವೆ ಎನ್ನುವ ನಂಬಿಕೆಯಲ್ಲಿ ಅನೇಕ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.