1. Home
  2. Udupi
  3. ಕಾರ್ಕಳ : ಮಹಿಳಾ ಮೆಸ್ಕಾಂ‌ ಉದ್ಯೋಗಿ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ – ಸಾವಿಗೆ ಕಾರಣ ನಿಗೂಢ

ಕಾರ್ಕಳ : ಮಹಿಳಾ ಮೆಸ್ಕಾಂ‌ ಉದ್ಯೋಗಿ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ – ಸಾವಿಗೆ ಕಾರಣ ನಿಗೂಢ

ಕಾರ್ಕಳ : ಮಹಿಳಾ ಮೆಸ್ಕಾಂ‌ ಉದ್ಯೋಗಿ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ – ಸಾವಿಗೆ ಕಾರಣ ನಿಗೂಢ
0

ನ್ಯೂಸ್ ಆ್ಯರೋ : ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದಲ್ಲಿ ಹಾಡಿಯಲ್ಲಿ ನಿಟ್ಟೆಯ ಮಹಿಳಾ ಮೆಸ್ಕಾಂ ಉದ್ಯೋಗಿಯೊಬ್ಬರು ನೇಣು ಬಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕಲ್ಯಾ ಗ್ರಾಮದ ನಿಶಾ (23) ಆತ್ಮಹತ್ಯೆ ಮಾಡಿಕೊಂಡವರು.

ನಿಶಾ ಅವರು ನಿಟ್ಟೆಯ ಮೆಸ್ಕಾಂ ನಲ್ಲಿ ಉದ್ಯೋಗಿಯಾಗಿದ್ದರು. ಇವರ ಸಹೋದರ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಿಶಾರವರ ತಾಯಿ ಶಕುಂತಳಾರವರು ಮಾನಸಿಕವಾಗಿ ನೊಂದಿದ್ದರು. ಇದರಿಂದ ನಿಶಾ ಕೂಡ ಮಾನಸಿಕವಾಗಿ ನೊಂದು, ಇಲ್ಲವೇ ಬೇರೆ ಇನ್ನಾವುದೋ ಕಾರಣದಿಂದ ಮನನೊಂದು ನ.8 ರಂದು ಮಧ್ಯಾಹ್ನ ತನ್ನ ಮನೆಯ ಪಕ್ಕದ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮೃತರ ತಂದೆ ರವಿ ಪೂಜಾರಿ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..